ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌: ಟಾರ್ಗೆಟ್‌ 378; ಗೆಲುವಿಗೆ ಪೈಪೋಟಿ


Team Udayavani, Jul 4, 2022, 11:18 PM IST

ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌: ಟಾರ್ಗೆಟ್‌ 378; ಗೆಲುವಿಗೆ ಪೈಪೋಟಿ

ಬರ್ಮಿಂಗ್‌ಹ್ಯಾಮ್‌: ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತದ ವಿಕೆಟ್‌ಗಳನ್ನು ಪಟಪಟನೆ ಉರುಳಿಸಿದ ಇಂಗ್ಲೆಂಡ್‌ 378 ರನ್‌ ಟಾರ್ಗೆಟ್‌ ಗಳಿಸಿದೆ.

132 ರನ್ನುಗಳ ಬಹುಮೂಲ್ಯ ಮುನ್ನಡೆ ಸಾಧಿಸಿದ ಭಾರತ ದ್ವಿತೀಯ ಸರದಿಯಲ್ಲಿ ಬ್ಯಾಟಿಂಗ್‌ ವೈಭವ ತೋರ್ಪಡಿಸಲು ವಿಫ‌ಲವಾಯಿತು. 245 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಆಲೌಟ್‌ ಆಯಿತು. ಪೂಜಾರ, ಪಂತ್‌ ಮಾತ್ರ ಅರ್ಧ ಶತಕದೊಂದಿಗೆ ಮಿಂಚಿದರು.

ಒಂದು ಹಂತದಲ್ಲಿ 3ಕ್ಕೆ 153 ರನ್‌ ಗಳಿಸಿ ದೊಡ್ಡ ಮೊತ್ತದ ಸೂಚನೆ ನೀಡಿದ್ದ ಟೀಮ್‌ ಇಂಡಿಯಾ 92 ರನ್‌ ಅಂತರದಲ್ಲಿ 7 ವಿಕೆಟ್‌ ಉದುರಿಸಿಕೊಂಡಿತು. ಅಂತಿಮ 5 ವಿಕೆಟ್‌ ಬರೀ 47 ರನ್‌ ಆಗುವಷ್ಟರಲ್ಲಿ ಹಾರಿ ಹೋಯಿತು. ಹೀಗಾಗಿ ಆಂಗ್ಲರಿಗೆ 400 ಪ್ಲಸ್‌ ಟಾರ್ಗೆಟ್‌ ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು.

ಇಂಗ್ಲೆಂಡ್‌ ತಿರುಗೇಟು
ಮೊದಲ ಅವಧಿಯ ಆಟದಲ್ಲಿ ಇಂಗ್ಲೆಂಡ್‌ ಬೌಲರ್‌ಗಳು ಮೇಲುಗೈ ಸಾಧಿಸಿದರು ಎನ್ನುವುದಕ್ಕಿಂತ ಭಾರತದ ಆಟಗಾರರು ಅನಗತ್ಯ ಹೊಡೆತಗಳಿಗೆ ಮುಂದಾಗಿ ವಿಕೆಟ್‌ ಒಪ್ಪಿಸಿದರು ಎಂದೇ ಹೇಳಬೇಕಾಗುತ್ತದೆ. ಭಾರತ 4 ವಿಕೆಟ್‌ಗಳನ್ನು ಕಳೆದುಕೊಂಡಿತು. 3ಕ್ಕೆ 125ರಲ್ಲಿದ್ದ ಬುಮ್ರಾ ಪಡೆ ಲಂಚ್‌ ವೇಳೆ 7ಕ್ಕೆ 229 ರನ್‌ ಗಳಿಸಿತ್ತು. ಲೀಡ್‌ 361ಕ್ಕೆ ಏರಿತ್ತು. ರಿಷಭ್‌ ಪಂತ್‌ ಅವರ ಅರ್ಧ ಶತಕ ಈ ಅವಧಿಯ ಆಕರ್ಷಣೆಯಾಗಿತ್ತು. ಪೂಜಾರ, ಅಯ್ಯರ್‌, ಪಂತ್‌ ಮತ್ತು ಠಾಕೂರ್‌ ವಿಕೆಟ್‌ಗಳು ಉರುಳಿದವು.

50 ರನ್‌ ಗಳಿಸಿ ಆಡುತ್ತಿದ್ದ ಪೂಜಾರ ಇಂಗ್ಲಿಷ್‌ ಪೇಸರ್‌ಗಳಿಂದ ಸಾಕಷ್ಟು ತೊಂದರೆ ಅನುಭವಿಸಿದರು. ಮೊತ್ತ 66ಕ್ಕೆ ಏರಿದಾಗ ಬ್ರಾಡ್‌ ಅವರ ವೈಡ್‌ ಬಾಲ್‌ ಒಂದನ್ನು ಕೆಣಕಲು ಹೋಗಿ ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿದ್ದ ಲೀಸ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. 168 ಎಸೆತ ನಿಭಾಯಿಸಿದ ಸೌರಾಷ್ಟ್ರ ಬ್ಯಾಟರ್‌ 8 ಬೌಂಡರಿ ಬಾರಿಸಿದರು.

ಶ್ರೇಯಸ್‌ ಅಯ್ಯರ್‌ ಅವರಿಂದ ಮತ್ತೊಂದು ಅವಕಾಶವನ್ನೂ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ 15 ರನ್‌ ಮಾಡಿದ್ದ ಅಯ್ಯರ್‌, ಇಲ್ಲಿ ಗಳಿಸಿದ್ದು ಕೇವಲ 19 ರನ್‌. ಪಾಟ್ಸ್‌ ಅವರ ಶಾರ್ಟ್‌ ಪಿಚ್‌ ಎಸೆತಕ್ಕೆ ಅಯ್ಯರ್‌ ವಿಕೆಟ್‌ ಬಿತ್ತು.

ಪಂತ್‌ ಅರ್ಧ ಶತಕ
ಈ ನಡುವೆ ರಿಷಭ್‌ ಪಂತ್‌ ಮತ್ತೊಂದು ಆಪತ್ಕಾಲದ ಇನ್ನಿಂಗ್ಸ್‌ ಮೂಲಕ ತಂಡದ ರಕ್ಷಣೆಗೆ ನಿಂತರು. ಮೊದಲ ಇನ್ನಿಂಗ್ಸ್‌ ನಲ್ಲಿ ಶತಕ ಬಾರಿಸಿದರೆ, ಇಲ್ಲಿ ಅರ್ಧ ಶತಕದೊಂದಿಗೆ ಮಿಂಚಿದರು. ಎಂದಿನ ಬೀಸು ಹೊಡೆತಗಳ ಮೂಲಕ ರಂಜನೀಯ ಬ್ಯಾಟಿಂಗ್‌ ಪ್ರದರ್ಶಿಸಿದ ಪಂತ್‌ ವಿದೇಶದಲ್ಲಿ ತಮ್ಮ ಪ್ರಭುತ್ವವನ್ನು ಸಾಬೀತುಪಡಿಸಿದರು. ಆದರೆ ಜಾಕ್‌ ಲೀಚ್‌ ಎಸೆತವೊಂದನ್ನು ರಿವರ್ಸ್‌ ಪುಲ್‌ ಮಾಡಲು ಹೋಗಿ ಮೊದಲ ಸ್ಲಿಪ್‌ನಲ್ಲಿದ್ದ ಜೋ ರೂಟ್‌ಗೆ ಕ್ಯಾಚ್‌ ಹೋಗುವುದನ್ನು ಕಾಣಬೇಕಾಯಿತು. ಪಂತ್‌ ಕೊಡುಗೆ 86 ಎಸೆತಗಳಿಂದ 57 ರನ್‌. ಇದರಲ್ಲಿ 8 ಬೌಂಡರಿ ಸೇರಿತ್ತು.

ಶಾರ್ದೂಲ್ ಠಾಕೂರ್ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. 4 ರನ್ನಿಗೆ 26 ಎಸೆತ ತೆಗೆದುಕೊಂಡರು. ಮತ್ತೆ ಪಾಟ್ಸ್‌ ಶಾರ್ಟ್‌ ಪಿಚ್‌ ಎಸೆತವಿಕ್ಕಿ ಠಾಕೂರ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಹೊಡೆದಿದ್ದ ರವೀಂದ್ರ ಜಡೇಜ ಹೊರತುಪಡಿಸಿ ಪ್ರಮುಖ ಬ್ಯಾಟರ್‌ಗಳೆಲ್ಲ ಆಟ ಮುಗಿಸಿ ಹೋದ್ದರಿಂದ ಲಂಚ್‌ ಬಳಿಕ ಭಾರತದ ಮೊತ್ತ ಏರುವ ಯಾವುದೇ ಭರವಸೆ ಇರಲಿಲ್ಲ. ಉಳಿದ ಮೂರೂ ವಿಕೆಟ್‌ಗಳನ್ನು ನಾಯಕ ಬೆನ್‌ ಸ್ಟೋಕ್ಸ್‌ ಬೇಟೆಯಾಡಿ ಭಾರತದ ಸರದಿಯನ್ನು 245ಕ್ಕೆ ಮುಗಿಸಿದರು. 33ಕ್ಕೆ 4 ವಿಕೆಟ್‌ ಕಿತ್ತ ಸ್ಟೋಕ್ಸ್‌ ಯಶಸ್ವಿ ಬೌಲರ್‌.

ಜಡೇಜ ಗಳಿಕೆ 58 ಎಸೆತಗಳಿಂದ 23 ರನ್‌. ಹೊಡೆದದ್ದು ಒಂದೇ ಬೌಂಡರಿ. ಶಮಿ 13, ಬುಮ್ರಾ 7 ರನ್‌ ಮಾಡಿದರು. ಸ್ಟೋಕ್ಸ್‌ ಎಸೆತಕ್ಕೆ ಸಿಕ್ಸರ್‌ ರುಚಿ ತೋರಿಸಿದ ಬುಮ್ರಾ, ಮತ್ತೂಂದು ಇಂಥದೇ ಹೊಡೆತಕ್ಕೆ ಮುಂದಾದಾಗ ಫೈನ್‌ಲೆಗ್‌ನಲ್ಲಿ ಕ್ಯಾಚ್‌ ನೀಡಿ ಭಾರತದ ಇನ್ನಿಂಗ್ಸ್‌ಗೆ ಮಂಗಳ ಹಾಡಿದರು.

ಎಜ್‌ಬಾಸ್ಟನ್‌ ದಾಖಲೆ 283 ರನ್‌
ಎಜ್‌ಬಾಸ್ಟನ್‌ ಟೆಸ್ಟ್‌ ಪಂದ್ಯ ಅಂತಿಮ ಇನ್ನಿಂಗ್ಸ್‌ನಲ್ಲಿ (4ನೇ) ದಾಖಲಾದ ಅತ್ಯಧಿಕ ಗಳಿಕೆಯೆಂದರೆ 5 ವಿಕೆಟಿಗೆ 283 ರನ್‌. 2008ರ ಇಂಗ್ಲೆಂಡ್‌ ಪ್ರವಾಸದ ವೇಳೆ ದಕ್ಷಿಣ ಆಫ್ರಿಕಾ ಇದನ್ನು ಸಾಧಿಸಿತ್ತು. ಜತೆಗೆ 5 ವಿಕೆಟ್‌ಗಳ ಜಯ ಗಳಿಸಿತ್ತು. ಈ ದಾಖಲೆಯನ್ನು ಮುರಿಯುವ ಅವಕಾಶವೊಂದು ಇಂಗ್ಲೆಂಡ್‌ಗೆ ಎದುರಾಗಿದೆ. ಅಂದಿನದು ಸರಣಿಯ ದ್ವಿತೀಯ ಟೆಸ್ಟ್‌ ಆಗಿತ್ತು. 5 ವಿಕೆಟ್‌ ಜಯದೊಂದಿಗೆ ಗ್ರೇಮ್‌ ಸ್ಮಿತ್‌ ಪಡೆ 2-0 ಮುನ್ನಡೆಯೊಂದಿಗೆ ಸರಣಿಯನ್ನೂ ವಶಪಡಿಸಿಕೊಂಡಿತು. 1965ರ ಬಳಿಕ ಇಂಗ್ಲೆಂಡ್‌ ನೆಲದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಒಲಿದ ಮೊದಲ ಟೆಸ್ಟ್‌ ಸರಣಿ ಇದಾಗಿತ್ತು. ಅಂದು ಇಂಗ್ಲೆಂಡ್‌ ನಾಯಕರಾಗಿದ್ದವರು ಮೈಕಲ್‌ ವಾನ್‌.

1950ರ ದಾಖಲೆ ಮುರಿದ ಪಂತ್‌
ದ್ವಿತೀಯ ಇನ್ನಿಂಗ್ಸ್‌ನಲ್ಲೂ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದ ರಿಷಭ್‌ ಪಂತ್‌ 72 ವರ್ಷಗಳಷ್ಟು ಪುರಾತನ ದಾಖಲೆಯೊಂದನ್ನು ಮುರಿದರು. ಇಂಗ್ಲೆಂಡ್‌ ಟೆಸ್ಟ್‌ ಪಂದ್ಯವೊಂದರಲ್ಲಿ ವಿದೇಶಿ ಕೀಪರ್‌ ಓರ್ವ ಸರ್ವಾಧಿಕ ರನ್‌ ಪೇರಿಸಿದ ಹೆಗ್ಗಳಿಕೆಗೆ ಪಂತ್‌ ಪಾತ್ರರಾದರು.

ಮೊದಲ ಸರದಿಯಲ್ಲಿ 146 ರನ್‌ ಬಾರಿಸಿದ ಪಂತ್‌, ದ್ವಿತೀಯ ಸರದಿಯಲ್ಲಿ 57 ರನ್‌ ಬಾರಿಸಿ ಮಿಂಚಿದರು. ಇದರೊಂದಿಗೆ ಅವರ ಒಟ್ಟು ಗಳಿಕೆ 203ಕ್ಕೆ ಏರಿತು.

1950ರ ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ವೇಳೆ ವೆಸ್ಟ್‌ ಇಂಡೀಸ್‌ ಕೀಪರ್‌ ಕ್ಲೈಡ್‌ ವಾಲ್ಕಾಟ್‌ ಒಟ್ಟು 182 ರನ್‌ (14 ಹಾಗೂ 168) ಹೊಡೆದದ್ದು ದಾಖಲೆಯಾಗಿತ್ತು.

ಈವರೆಗಿನ ಭಾರತೀಯ ದಾಖಲೆ ಮಹೇಂದ್ರ ಸಿಂಗ್‌ ಧೋನಿ ಅವರ ಹೆಸರಲ್ಲಿತ್ತು. 2011ರ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ನಲ್ಲಿ ಅವರು ಒಟ್ಟು 151 ರನ್‌ ಗಳಿಸಿದ್ದರು (77 ಮತ್ತು ಅಜೇಯ 74). ಇದೇ ವೇಳೆ ಪಂತ್‌ ಇಂಗ್ಲೆಂಡ್‌ ಎದುರಿನ ಟೆಸ್ಟ್‌ ಪಂದ್ಯವೊಂದರಲ್ಲಿ ಶತಕ ಹಾಗೂ ಅರ್ಧ ಶತಕ ದಾಖಲಿಸಿದ ಭಾರತದ 2ನೇ ಕೀಪರ್‌ ಎನಿಸಿದರು. 1973ರ ಮುಂಬಯಿ ಪಂದ್ಯದಲ್ಲಿ ಫಾರೂಖ್‌ ಇಂಜಿನಿಯರ್‌ 121 ಹಾಗೂ 66 ರನ್‌ ಹೊಡೆದಿದ್ದರು.

ಇಂಗ್ಲೆಂಡ್‌ ಓಟ
378 ರನ್‌ ಗುರಿ ಪಡೆದ ಇಂಗ್ಲೆಂಡ್‌ 3 ವಿಕೆಟಿಗೆ 206 ರನ್‌ ಗಳಿಸಿ 4ನೇ ದಿನದ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ.

ಆರಂಭಿಕರಾದ ಅಲೆಕ್ಸ್‌ ಲೀಸ್‌ ಮತ್ತು ಜಾಕ್‌ ಕ್ರಾಲಿ ಭದ್ರ ಬುನಾದಿ ನಿರ್ಮಿಸಿದರು. ಇವರ ಜತೆಯಾಟದಲ್ಲಿ 107 ರನ್‌ ಹರಿದು ಬಂತು. ಏಕದಿನ ಶೈಲಿಯಲ್ಲಿ ಬ್ಯಾಟ್‌ ಬೀಸಿದ ಈ ಓಪನರ್ 21.4 ಓವರ್‌ಗಳನ್ನು ಯಶಸ್ವಿಯಾಗಿ ನಿಭಾಯಿಸಿದರು. ಆಗ ಬುಮ್ರಾ ಮೊದಲ ಬ್ರೇಕ್‌ ಒದಗಿಸಿದರು. 46 ರನ್‌ ಮಾಡಿದ ಕ್ರಾಲಿ ಬೌಲ್ಡ್‌ ಆದರು.

ಟೀ ಬಳಿಕ ಓಲೀ ಪೋಪ್‌ ವಿಕೆಟ್‌ ಉರುಳಿತು. ಇವರು ಖಾತೆ ತೆರೆಯುವ ಮೊದಲೇ ಬುಮ್ರಾ ಮೋಡಿಗೆ ಸಿಲುಕಿದರು. ಇದರೊಂದಿಗೆ ಬುಮ್ರಾ ಈ ಸರಣಿಯಲ್ಲಿ 23 ವಿಕೆಟ್‌ ಕೆಡವಿದಂತಾಯಿತು. ಇದು ಇಂಗ್ಲೆಂಡ್‌ ನೆಲದ ಸರಣಿಯಲ್ಲಿ ಭಾರತದ ವೇಗಿಯೋರ್ವ ಪಡೆದ ಅತ್ಯಧಿಕ ವಿಕೆಟ್‌ ದಾಖಲೆಯಾಗಿದೆ. 1981-82ರಲ್ಲಿ ಕಪಿಲ್‌ದೇವ್‌ 22 ವಿಕೆಟ್‌ ಉರುಳಿಸಿದ್ದರು.

ಅರ್ಧ ಶತಕ ಬಾರಿಸಿ ಮುನ್ನುಗ್ಗುತ್ತಿದ್ದ ಲೀಸ್‌ ರನೌಟ್‌ ಸಂಕಟಕ್ಕೆ ಸಿಲುಕಿದರು. ಎರಡೇ ರನ್‌ ಅಂತರದಲ್ಲಿ 3 ವಿಕೆಟ್‌ ಉಡಾಯಿಸಿದ ಭಾರತ ತಿರುಗಿ ಬಿತ್ತು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಜೋ ರೂಟ್‌ (57) ಮತ್ತು ಜಾನಿ ಬೇರ್‌ಸ್ಟೊ (39) ಕುಸಿತಕ್ಕೆ ತಡೆಯಾಗಿ ನಿಂತಿದ್ದಾರೆ. ಇವರಿಬ್ಬರ ವಿಕೆಟ್‌ ಭಾರತದ ಪಾಲಿಗೆ ನಿರ್ಣಾಯಕ. ಜತೆಗೆ ನಾಯಕ ಬೆನ್‌ ಸ್ಟೋಕ್ಸ್‌ ಕೂಡ ಅಪಾಯಕಾರಿಯಾಗಬಲ್ಲರು.

 

ಟಾಪ್ ನ್ಯೂಸ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

ನಾನು ಶೀಶಮಹಲ್‌ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್

11-venur

Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ

9

Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್‌ ಪರದಾಟ

1-syyy

Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್‌-ಗಂಭೀರ್‌ ಮನಸ್ತಾಪ ತೀವ್ರ?

PCB

PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ

1-foot

FIFA ಸೌಹಾರ್ದ ಫುಟ್‌ಬಾಲ್‌ ಪಂದ್ಯ: ಮಾಲ್ದೀವ್ಸ್‌  ವಿರುದ್ಧ ಭಾರತಕ್ಕೆ 11-1 ಗೆಲುವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

ಗದಗ: ಮಾವು ಬಂಪರ್‌ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್

Test Cricket; After Rohit, now Virat..: What is in ‘that’ message sent by BCCI?

Test Cricket; ರೋಹಿತ್‌ ಆಯ್ತು, ಈಗ ವಿರಾಟ್..:‌ ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Gangolli: ಪಂಚಾಯತ್‌ನೊಳಗೆ ನಮಾಜ್‌; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.