ಬಿಸ್ಮಾ ಮರೂಫ್ ಪಾಕ್ ಕ್ರಿಕೆಟಿನ ನೂತನ ನಾಯಕಿ
Team Udayavani, Oct 1, 2017, 6:40 AM IST
ಲಾಹೋರ್: ಪಾಕಿಸ್ಥಾನದ ವನಿತಾ ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಸನಾ ಮಿರ್ ಅವರನ್ನು ಕೆಳಗಿಳಿಸಲಾಗಿದ್ದು, ಬಿಸ್ಮಾ ಮರೂಫ್ ನೂತನ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ವನಿತಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಕ್ ತೋರ್ಪಡಿಸಿದ ಕಳಪೆ ಪ್ರದರ್ಶನ ಹಾಗೂ ತಂಡವನ್ನು ಬಲಾಡ್ಯಗೊಳಿಸುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ಪಿಸಿಬಿ ತಿಳಿಸಿದೆ. ಪಾಕ್ ಈ ಕೂಟದಲ್ಲಿ ಕೊನೆಯ ಸ್ಥಾನ ಕಂಡಿತ್ತು.
ಇದರೊಂದಿಗೆ ಬಿಸ್ಮಾ ಮರೂಫ್ ಸೀಮಿತ ಓವರಿನ ಎರಡೂ ಪ್ರಕಾರಗಳ ಕ್ರಿಕೆಟ್‌ನಲ್ಲಿ ಪಾಕ್ ತಂಡವನ್ನು ಮುನ್ನಡೆಸುವ ಅವಕಾಶ ಪಡೆದಂತಾಯಿತು. ಕಳೆದ ವರ್ಷದ ಜೂನ್‌ನಲ್ಲೇ ಮರೂಫ್ ಪಾಕ್ ಟಿ-20 ತಂಡದ ನಾಯಕಿಯಾಗಿ ನೇಮಕಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.