ಫೆಡರರ್, ಶರಪೋವಾ ಪತನ
Team Udayavani, Sep 5, 2018, 6:00 AM IST
ನ್ಯೂಯಾರ್ಕ್: ಐದು ಬಾರಿಯ ಚಾಂಪಿಯನ್ ಸ್ವಿಸ್‌ನ ರೋಜರ್ ಫೆಡರರ್ ಮತ್ತು ರಶ್ಯದ ಮರಿಯಾ ಶರಪೋವಾ ಅವರು ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದ ನಾಲ್ಕನೇ ಸುತ್ತಿನಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. ಗ್ರ್ಯಾನ್ ಸ್ಲಾಮ್ ಕೂಟದ ನಾಲ್ಕನೇ ಸುತ್ತಿನಲ್ಲಿ ಇದೇ ಮೊದಲ ಬಾರಿ ಆಡಿದ ಆಸ್ಟ್ರೇಲಿಯದ ಜಾನ್ ಮಿಲ್ಮನ್ ಅವರು 3-6, 7-5, 7-6 (9-7), 7-6 (7-3) ಸೆಟ್‌ಗಳಿಂದ ಫೆಡರರ್‌ಗೆ ಆಘಾತ ನೀಡಿದರು. ಇದರಿಂದಾಗಿ ಎರಡು ಬಾರಿಯ ವಿಜೇತ ನೊವಾಕ್ ಜೊಕೋವಿಕ್ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಫೆಡರರ್ ಅವರನ್ನು ಎದುರಿಸುವುದು ತಪ್ಪಿದೆ. ಎರಡನೇ ಮತ್ತು ಮೂರನೇ ಸೆಟ್‌ನಲ್ಲಿ ಸೆಟ್ ಪಾಯಿಂಟ್ ಪಡೆದಿದ್ದ ಫೆಡರರ್ ತನ್ನದೇ ತಪ್ಪಿನಿಂದಾಗಿ ಪಂದ್ಯವನ್ನು ಕಳೆದುಕೊಂಡರು. ಪಂದ್ಯದಲ್ಲಿ 77 ಅನಗತ್ಯ ತಪ್ಪು ಮಾಡಿದ ಫೆಡರರ್ ಅವರು ಮಿಲ್ಮನ್ ಅವರ ಮನಮೋಹಕ ಆಟದೆದುರು ಮಂಕಾದರು. ಫೆಡರರ್ 2013ರ ಬಳಿಕ ಇದೇ ಮೊದಲ ಸಲ ಬೇಗನೇ ಕೂಟದಿಂದ ನಿರ್ಗಮಿಸಿದ್ದಾರೆ. 2013ರಲ್ಲಿಯೂ ಅವರು ನಾಲ್ಕನೇ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಟಾಮಿ ರಾಬ್ರೆಡೊ ಅವರಿಗೆ ಶರಣಾಗಿದ್ದರು.
ನನಗೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದು 29ರ ಹರೆಯದ ಮಿಲ್ಮನ್ ಪ್ರತಿಕ್ರಿಯೆ ನೀಡಿದರು. ನನಗೆ ರೋಜರ್ ಅವರ ಬಗ್ಗೆ ಬಹಳ ಗೌರವವಿದೆ. ಅವರು ಟೆನಿಸ್‌ಗೆ ಸರ್ವಸ್ವವನ್ನು ಕೊಟ್ಟಿದ್ದಾರೆ. ಅವರು ನನ್ನ ಪಾಲಿನ ಹೀರೋ ಎಂದು ಮಿಲ್ಮನ್ ತಿಳಿಸಿದರು. ಅವರಿಂದು ಖಂಡಿತವಾಗಿಯೂ ಶ್ರೇಷ್ಠ ನಿರ್ವಹಣೆ ನೀಡಿಲ್ಲ. ಆದರೆ ಅದನ್ನು ನಾನು ಪಡೆದುಕೊಂಡೆ ಎಂದರು ಮಿಲ್ಮನ್.
ನವಾರೊ ಸಂಭ್ರಮ
ಸ್ಪೇನ್‌ನ ಬರ್ತ್‌ಡೆ ಹುಡುಗಿ ಕಾರ್ಲಾ ಸೂರೆಜ್ ನವಾರೊ ಅವರು ನೇರ ಸೆಟ್‌ಗಳಿಂದ 2006ರ ಚಾಂಪಿಯನ್ ಮರಿಯಾ ಶರಪೋವಾ ಅವರನ್ನು ಉರುಳಿಸಿದರು. ಶರಪೋವಾ 2012ರ ಬಳಿಕ ಇದೇ ಮೊದಲ ಸಲ ಇಲ್ಲಿ ಕ್ವಾರ್ಟರ್‌ಫೈನಲ್ ತಲುಪುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ 4-6, 3-6 ಸೆಟ್‌ಗಳ ಸೋಲಿನಿಂದ ತೀವ್ರ ಆಘಾತಕ್ಕೆ ಒಳಗಾದರು. ಹೊನಲು ಬೆಳಕಿನಲ್ಲಿ ಆಡಿದ 23 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಸಾಧನೆಗೈದಿದ್ದ ಶರಪೋವಾ ಮೊದಲ ಬಾರಿ ಸೋತರು. ಭರ್ಜರಿ ಗೆಲುವಿನ ಮೂಲಕ ನವಾರೊ 30ನೇ ಹುಟ್ಟುಹಬ್ಬವನ್ನು ಆಚರಿಸಿದರು. ಅವರು 2013ರಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದರು.
ಕ್ವಾರ್ಟರ್‌ಫೈನಲ್‌ನಲ್ಲಿ ನವಾರೊ ಅವರು 2017ರ ರನ್ನರ್ ಅಪ್ ಮ್ಯಾಡಿಸನ್ ಕೀಸ್ ಅವರನ್ನು ಎದುರಿಸಲಿದ್ದಾರೆ. ಮ್ಯಾಡಿಸನ್ ಅಮೆರಿಕದವರಾದ ಕಾರಣ ಪ್ರೇಕ್ಷಕರು ಅವರಿಗೆ ಪೂರ್ಣ ಬೆಂಬಲ ನೀಡಲಿದ್ದಾರೆ. ನಾನು ಕೂಡ ಆಕೆಯ ಜತೆ ಆಡಿದ್ದೇನೆ. ಅವರ ಸರ್ವ್ ಬಲಶಾಲಿಯಾಗಿದೆ ಎಂದು ನವಾರೊ ಹೇಳಿದರು. ಮ್ಯಾಡಿಸನ್ ಕೀಸ್ ಅವರು ಇನ್ನೊಂದು ಪಂದ್ಯದಲ್ಲಿ ಡೊಮಿನಿಕಾ ಸಿಬುಲ್ಕೋವಾ ಅವರನ್ನು 6-1, 6-3 ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ತಲುಪಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
FIFA ಸೌಹಾರ್ದ ಫುಟ್‌ಬಾಲ್ ಪಂದ್ಯ: ಮಾಲ್ದೀವ್ಸ್ ವಿರುದ್ಧ ಭಾರತಕ್ಕೆ 11-1 ಗೆಲುವು
450 ಕೋಟಿ ಚಿಟ್ ಫಂಡ್ ಹಗರಣ: ಶುಭಮನ್ ಗಿಲ್ ಸೇರಿ ನಾಲ್ವರಿಗೆ ಸಿಐಡಿ ಸಮನ್ಸ್ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.