ಅಂಧರ ವಿಶ್ವಕಪ್: ಭಾರತ ಸೆಮಿ ಫೈನಲಿಗೆ
Team Udayavani, Jan 16, 2018, 12:09 PM IST
ಅಜ್ಮಾನ್ (ಯುಎಇ): ಇಲ್ಲಿನ “ಈಡನ್ ಗಾರ್ಡನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆದ ಅಂಧರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ನೇಪಾಲ ವಿರುದ್ಧ 8 ವಿಕೆಟ್ ಜಯ ಸಾಧಿಸಿದ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಜ. 17ರಂದು ನಡೆಯುವ ಸೆಮಿಫೈನಲ್‌ನಲ್ಲಿ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಆಡಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗಿಗೆ ಇಳಿದ ನೇಪಾಲ 37.5 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಪೇರಿಸಿತು. ಭಾರತ ಎರಡೇ ವಿಕೆಟ್ ನಷ್ಟದಲ್ಲಿ ನೇಪಾಲ ಮೊತ್ತ ಮೀರುವಲ್ಲಿ ಯಶಸ್ವಿಯಾಯಿತು. ಭಾರತದ ಪರ ಪ್ರಕಾಶ್ ಜಯರಾಮಯ್ಯ 22 ರನ್ನಿತ್ತು 2 ವಿಕೆಟ್ ಉರುಳಿಸಿದರು. ತಂಡದ ನಾಯಕ ಅಜಯ್ ರೆಡ್ಡಿ, ರಾಮ್‌ಬೀರ್, ಪ್ರೇಮ್ ಕುಮಾರ್ ಮತ್ತು ಜಾಫರ್ ಇಕ್ಬಾಲ್ ತಲಾ ಒಂದೊಂದು ವಿಕೆಟ್ ಕೆಡವಿದರು.
ಚೇಸಿಂಗ್ ವೇಳೆ 29 ಎಸೆತಗಳಲ್ಲಿ 6 ಬೌಂಡರಿಗಳೊಂದಿಗೆ 54 ರನ್ ಸಿಡಿಸಿದ ಅಜಯ್ ಗರಿಯಾ ಪಂದ್ಯಶ್ರೇಷ್ಠರೆ ನಿಸಿದರು. ಮಹೇಂದರ್ 40, ರಾಮ್‌ಬೀರ್ 38 ರನ್ ಮಾಡಿದರು.
ಪಾಕ್ ದಾಖಲೆ ಮೊತ್ತ
ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಸೋತಿದ್ದ ಪಾಕಿಸ್ಥಾನ ರವಿವಾರದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 4ಕ್ಕೆ 563 ರನ್ನುಗಳ ದಾಖಲೆ ಮೊತ್ತದೊಂದಿಗೆ 393 ರನ್ನುಗಳ ದಾಖಲೆ ಜಯ ಸಾಧಿಸಿ ಸೆಮಿಫೈನಲ್ ತಲುಪಿತು. ಅಲ್ಲಿ ಶ್ರೀಲಂಕಾ ವಿರುದ್ಧ ಆಡಲಿದೆ. ಹೀಗೆ ಅಂಧರ ವಿಶ್ವಕಪ್ ಪಂದ್ಯಾವಳಿಯಲ್ಲಿ ಏಶ್ಯದ 4 ತಂಡಗಳೇ ಸೆಮಿಫೈನಲ್ ತಲುಪಿದ್ದು ವಿಶೇಷ.
ಪಾಕ್ ಪರ ಆಮಿರ್ ಅಶ್ರಕ್ 208, ಸನಾ 143, ಹರೂನ್ 105 ರನ್ ಬಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.