ಉಸೇನ್ ಬೋಲ್ಟ್ ಪ್ರತಿಮೆ ಅನಾವರಣ; ಮೆಸ್ಸಿ ಪ್ರತಿಮೆ ಧ್ವಂಸ!
Team Udayavani, Dec 5, 2017, 9:34 AM IST
ಜಮೈಕಾ/ಬ್ಯುನಸ್ ಏರ್: ಒಲಿಂಪಿಕ್ಸ್ ಪದಕಗಳ ಸರದಾರ, ವಿಶ್ವ ಚಾಂಪಿಯನ್ ಜಮೈಕಾ ಅಥ್ಲೀಟ್ ಉಸೇನ್ ಬೋಲ್ಟ್ ಗೌರವಾರ್ಥ ಹುಟ್ಟೂರು ಜಮೈಕಾದಲ್ಲಿ ಅವರದೊಂದು ಸುಂದರವಾದ ಕಲ್ಲಿನ ಪ್ರತಿಮೆ ಕೆತ್ತಲಾಗಿದೆ. ಆದರೆ ಇತ್ತ ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಪುತ್ಥಳಿ ಯನ್ನು ಅವರ ತವರೂರಲ್ಲೇ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ವಿಶ್ವದ ಖ್ಯಾತ ಓಟಗಾರನ ಪ್ರತಿಮೆಯನ್ನು ಭಾನುವಾರ ಜಮೈಕಾ ಪ್ರಧಾನಿ ಆ್ಯಂಡ್ರಿವ್ ಲೋಕಾರ್ಪಣೆಗೊಳಿಸಿದರು.ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸ್ವತಃ ಉಸೇನ್ ಬೋಲ್ಟ್ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲ ತನಗೆ ಗೌರವ ನೀಡಿದ
ಜಮೈಕಾ ಹಾಗೂ ಅಲ್ಲಿನ ಜನತೆಗೆ ಧನ್ಯವಾದಗಳಲ್ಲಿ ಸಲ್ಲಿಸಿದ್ದಾರೆ. ಪ್ರತಿಮೆಯನ್ನು ಜಮೈಕಾದ ಖ್ಯಾತ ಶಿಲ್ಪಿ ಬಾಸಿಲ್ ವಾಟ್ಸನ್ ಕೆತ್ತಿದ್ದಾರೆ. ಉಸೇನ್ ಬೋಲ್ಟ್ 100 ಮೀ., 200 ಮೀ.ನಲ್ಲಿ ಸತತ ಮೂರು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದಿದ್ದಾರೆ. ವೇಗದ ಓಟದ ವಿಭಾಗದಲ್ಲಿ ಇದೊಂದು ಐತಿಹಾಸಿಕ ದಾಖಲೆಗಳಾಗಿವೆ. ಎರಡರಲ್ಲೂ ವಿಶ್ವ ದಾಖಲೆ ಇನ್ನೂ ಬೋಲ್ಟ್ ಹೆಸರಲ್ಲೇ ಇದೆ.
ಮೆಸ್ಸಿ ಪ್ರತಿಮೆ ಕೆಡವಿದ ದುಷ್ಕರ್ಮಿಗಳು:
ಅರ್ಜೆಂಟೀನಾದ ಖ್ಯಾತ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಪ್ರತಿಮೆಯನ್ನು ದುಷ್ಕರ್ಮಿ ಗಳು ಧ್ವಂಸಗೊಳಿಸಿದ್ದಾರೆ. ಬ್ಯೂನಸ್ ಏರ್ನಲ್ಲಿದ್ದ ಪ್ರತಿಮೆ ನೆಲಕ್ಕುರುಳಿಸಲಾಗಿದೆ. ಈ ವರ್ಷ ಒಟ್ಟಾರೆ 2ನೇ ಸಲ ಮೆಸ್ಸಿ ಪ್ರತಿಮೆಯನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಆರೋಪಿ ಗಳ ಕುರಿತು ಮಾಹಿತಿ ಸಿಕ್ಕಿಲ್ಲ. ಶೀಘ್ರದಲ್ಲೇ ದುಷ್ಕರ್ಮಿ ಗಳನ್ನು ಬಂಧಿಸುವುದಾಗಿ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಮೆಸ್ಸಿ ಬಾರ್ಸಿಲೋನಾ ಕ್ಲಬ್ ತಂಡದ ಪರವಾಗಿಯೂ ಹಲವಾರು ವರ್ಷಗಳಿಂದ ಆಡುತ್ತಿದ್ದಾರೆ. ಸಾಕಷ್ಟು ಹೆಸರು, ಕೀರ್ತಿ, ಹಣಗಳಿಸಿ ಕೊಂಡಿದ್ದಾರೆ. ಆದರೆ 2014ರ ವಿಶ್ವಕಪ್ ಫುಟ್‌ಬಾಲ್ ಸೇರಿದಂತೆ ಪ್ರಮುಖ 2 ಕೂಟಗಳನ್ನು ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡ ಬಾರಿ ವೈಫಲ್ಯ ಅನುಭವಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Drone Prathap: ಕೃಷಿ ಹೊಂಡದಲ್ಲಿ ಸ್ಫೋಟ ಪ್ರಕರಣ; ಡ್ರೋನ್ ಪ್ರತಾಪ್ ಜಾಮೀನು ಮಂಜೂರು
Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!
Derogatory Term: ಸಿ.ಟಿ.ರವಿ ಪ್ರಕರಣ ಮುಗಿದ ಅಧ್ಯಾಯ, ತನಿಖೆ ಬೇಕಿಲ್ಲ: ಸಭಾಪತಿ ಸ್ಪಷ್ಟನೆ
Language Communication: ನಾಪತ್ತೆಯಾಗಿದ್ದ ಮಹಿಳೆ “ಕನ್ನಡ’ದಿಂದಾಗಿ ಪತ್ತೆ!
ವಾಯು ಮಾಲಿನ್ಯಕ್ಕೆ ನಗರ ಪ್ರದೇಶ ಮನೆಗಳೇ ಕಾರಣ! ಬೆಂಗಳೂರಿನ ಐಐಎಸ್‌ಸಿ ಸೇರಿ 2 ಅಧ್ಯಯನ ವರದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.