ಬ್ರಿಯಾನ್ ಬ್ರದರ್ಗೆ ಬೋಪಣ್ಣ ಜೋಡಿ ಆಘಾತ
ಸ್ಟಟ್‌ಗಾರ್ಟ್ ಮರ್ಸಿಡೆಸ್ ಕಪ್ ಟೆನಿಸ್
Team Udayavani, Jun 14, 2019, 5:09 AM IST
ಸ್ಟಟ್‌ಗಾರ್ಟ್: ರೋಹನ್ ಬೋಪಣ್ಣ-ಕೆನಡಾದ ಡೆನ್ನಿಸ್ ಶಪೊವೊಲೋವ್ ಸೇರಿಕೊಂಡು ಸ್ಟಟ್‌ಗಾರ್ಟ್ ಮರ್ಸಿಡೆಸ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ದೊಡ್ಡ ಬೇಟೆಯಾಡಿದ್ದಾರೆ. ಪುರುಷರ ಡಬಲ್ಸ್‌ನ ವಿಶ್ವವಿಖ್ಯಾತ ಆಟಗಾರರಾದ ಮೈಕ್ ಬ್ರಿಯಾನ್-ಬಾಬ್ ಬ್ರಿಯಾನ್ ಜೋಡಿಯನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ರಾತ್ರಿಯ ಪಂದ್ಯದಲ್ಲಿ ಇಂಡೋ- ಕೆನಡಿಯನ್ ಜೋಡಿ ದಿಟ್ಟ ಹೋರಾಟ ನಡೆಸಿ 6-4, 3-6, 10-6 ಅಂತರದಿಂದ ಬ್ರಿಯಾನ್ ಸೋದರರನ್ನು ಮಣಿಸಿತು. ಶುಕ್ರವಾರದ ಕ್ವಾರ್ಟರ್ ಫೈನಲ್‌ನಲ್ಲಿ ಇವರು ಫ್ರಾನ್ಸ್‌ನ ಲುಕಾಸ್ ಪೌಲಿ-ಜೋ ವಿಲ್‌ಫ್ರೆಡ್ ಸೋಂಗ ಜೋಡಿಯನ್ನು ಎದುರಿಸಲಿದ್ದಾರೆ.
ಮಿಲೋಸ್ ರಾನಿಕ್ ಮುನ್ನಡೆ
ಪುರುಷರ ಸಿಂಗಲ್ಸ್‌ನಲ್ಲಿ ಕೆನಡಾದ ಮಿಲೋಸ್ ರಾನಿಕ್ 6-4, 6-7 (5), 7-6 (1)ರಿಂದ ಜೋ ವಿಲ್‌ಫ್ರೆಡ್ ಸೋಂಗ ಅವರಿಗೆ ಸೋಲುಣಿಸಿ ಕ್ವಾರ್ಟರ್ ಫೈನಲ್ ತಲುಪಿದರು. ರಾನಿಕ್ ಕಳೆದ ವರ್ಷದ ಫೈನಲ್‌ನಲ್ಲಿ ರೋಜರ್ ಫೆಡರರ್‌ಗೆ ಶರಣಾಗಿದ್ದರು. ರಾನಿಕ್ ಅವರ ಮುಂದಿನ ಎದುರಾಳಿ ಹಂಗೇರಿಯ ಮಾರ್ಟನ್ ಫುಕೊÕàವಿಕ್ಸ್. ಇನ್ನೊಂದು ಪಂದ್ಯದಲ್ಲಿ ಅವರು ಜಾರ್ಜಿಯಾದ ನಿಕೋಲಸ್ ಬಸಿಲಶ್ವಿಲಿಗೆ 7-6 (4), 2-6, 7-5 ಅಂತರದ ಸೋಲುಣಿಸಿದರು.
ಲುಕಾಸ್ ಪೌಲಿ 3ನೇ ಶ್ರೇಯಾಂಕದ ಡೇನಿಯಲ್‌ಗೆ 7-6 (6), 4-6, 6-2ರಿಂದ ಆಘಾ ತವಿಕ್ಕಿದರು. ಮಳೆಯಿಂದಾಗಿ ಕೂಟದ ಕೆಲವು ಪಂದ್ಯಗಳು ವಿಳಂಬವಾಗಿ ಆರಂಭಗೊಂಡವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka sports meet: ಈಜು ಸ್ಪರ್ಧೆ ಆರಂಭ; ದಕ್ಷಿಣ ಕನ್ನಡ ಮೇಲುಗೈ
Under-19 Women’s T20 World Cup: ವೈಷ್ಣವಿ ಹ್ಯಾಟ್ರಿಕ್, 5 ರನ್ನಿಗೆ 5 ವಿಕೆಟ್ ದಾಖಲೆ
Australia Open: 50ನೇ ಬಾರಿಗೆ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಜೋಕೋ
Women’s ODI rankings: ಅಗ್ರಸ್ಥಾನಕ್ಕೆ ಮಂಧನಾ ಸನಿಹ
Rinku Singh: ತಂದೆಗೆ ಸೂಪರ್ ಬೈಕ್ ಗಿಫ್ಟ್ ನೀಡಿದ ರಿಂಕು ಸಿಂಗ್… ಬೆಲೆ ಎಷ್ಟು ಗೊತ್ತಾ?