ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನ ಗಟ್ಟಿ; ಬಾಂಗ್ಲಾದೇಶಕ್ಕೆ ಸತತ 4ನೇ ಸೋಲು
Team Udayavani, Nov 2, 2021, 8:33 PM IST
ಅಬುಧಾಬಿ: ವೇಗಿಗಳಾದ ಕಾಗಿಸೊ ರಬಾಡ ಮತ್ತು ಅನ್ರಿಚ್ ನೋರ್ಜೆ ಅವರ ಘಾತಕ ಬೌಲಿಂಗ್ ದಾಳಿಯ ನೆರವಿನಿಂದ ಬಾಂಗ್ಲಾದೇಶವನ್ನು 6 ವಿಕೆಟ್‌ಗಳಿಂದ ಕೆಡವಿದ ದಕ್ಷಿಣ ಆಫ್ರಿಕಾ ಟಿ20 ವಿಶ್ವಕಪ್ ಗ್ರೂಪ್ ಒಂದರಲ್ಲಿ ತನ್ನ ದ್ವಿತೀಯ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿದೆ.
ಮಂಗಳವಾರದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ 18.2 ಓವರ್‌ಗಳಲ್ಲಿ 84ಕ್ಕೆ ಕುಸಿಯಿತು. ಹರಿಣಗಳ ಪಡೆ 13.3 ಓವರ್‌ಗಳಲ್ಲಿ 4 ವಿಕೆಟಿಗೆ 86 ರನ್ ಮಾಡಿ ಗೆಲುವಿನ ಹ್ಯಾಟ್ರಿಕ್ ಸಾಧಿಸಿತು. ಇದು ಹರಿಣಗಳ ಪಡೆಗೆ ಕಳೆದ 11 ಟಿ20 ಪಂದ್ಯಗಳಲ್ಲಿ ಒಲಿದ 10ನೇ ಜಯ. ಹಾಗೆಯೇ ಇದು ಬಾಂಗ್ಲಾಕ್ಕೆ ಎದುರಾದ ಸತತ 4ನೇ ಸೋಲು. ಅದು ಈಗಾಗಲೇ ಕೂಟದಿಂದ ಹೊರಬಿದ್ದಿದೆ.
ಬಾಂಗ್ಲಾದ ಅಗ್ರ ಕ್ರಮಾಂಕದ ಮೇಲೆ ಘಾತಕ ಪ್ರಹಾರವಿಕ್ಕಿದ ರಬಾಡ 20 ರನ್ನಿಗೆ 3 ವಿಕೆಟ್ ಉರುಳಿಸಿದರು. ಇವರ ಎಸೆತಗಳಿಗೆ ಜವಾಬು ನೀಡಲು ವಿಫಲರಾದ ಸೌಮ್ಯ ಸರ್ಕಾರ್ ಮತ್ತು ರಹೀಂಗೆ ಖಾತೆ ತೆರೆಯಲಾಗಲಿಲ್ಲ. ಆರಂಭಕಾರ ನೈಮ್ (8) ಇವರ ಮತ್ತೊಂದು ವಿಕೆಟ್. ಈ ಸಾಧನೆಗಾಗಿ ರಬಾಡ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ನೋರ್ಜೆ ಸಾಧನೆ 8ಕ್ಕೆ 3.
ಇದನ್ನೂ ಓದಿ:ಕರ್ನಾಟಕ ಸೇರಿ ಹಲವು ಕಡೆ ಆ್ಯಕ್ಟ್ಸನ್ ಲಸಿಕೆ ಪ್ರಯೋಗ
ಬಾಂಗ್ಲಾ ಸರದಿಯಲ್ಲಿ ಇಬ್ಬರಷ್ಟೇ ಇಪ್ಪತ್ತರ ಗಡಿ ದಾಟಿದರು. ಮೆಹೆದಿ ಹಸನ್ 27, ಲಿಟನ್ ದಾಸ್ 24 ರನ್ ಮಾಡಿದರು.
ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ-18.2 ಓವರ್‌ಗಳಲ್ಲಿ 84 (ಮೆಹೆದಿ ಹಸನ್ 27, ದಾಸ್ 24, ನೋರ್ಜೆ 8ಕ್ಕೆ 3, ರಬಾಡ 20ಕ್ಕೆ 3, ಶಮ್ಸಿ 21ಕ್ಕೆ 2). ದಕ್ಷಿಣ ಆಫ್ರಿಕಾ-13.3 ಓವರ್‌ಗಳಲ್ಲಿ 4 ವಿಕೆಟಿಗೆ 86 (ಬವುಮ ಔಟಾಗದೆ 31, ಡುಸೆನ್ 22, ಡಿ ಕಾಕ್ 16, ಟಸ್ಕಿನ್ 18ಕ್ಕೆ 2).
ಪಂದ್ಯಶ್ರೇಷ್ಠ: ಕಾಗಿಸೊ ರಬಾಡ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.