ಎಂಸಿಜಿ ಪಿಚ್ ಅಪಾಯಕಾರಿ ಪಂದ್ಯ ನಿಲ್ಲಿಸಿದ ಅಂಪಾಯರ್
Team Udayavani, Dec 8, 2019, 12:20 AM IST
ಮೆಲ್ಬರ್ನ್: ಸದ್ಯ ಸಾಗುತ್ತಿರುವ ಮಾರ್ಷ್ ಶೆಫೀಲ್ಡ್ ಶೀಲ್ಡ್ ಕ್ರಿಕೆಟ್ ಕೂಟದ ವಿಕ್ಟೋರಿಯ ಮತ್ತು ವೆಸ್ಟ್ ಆಸ್ಟ್ರೇಲಿಯ ನಡುವಣ ಪಂದ್ಯದಲ್ಲಿ ಬೌಲಿಂಗ್ ಮಾಡುವ ವೇಳೆ ಚೆಂಡು ನೆಲದಿಂದ ಮೇಲಕ್ಕೆ ಹಾರಿ ಹಲವು ಆಟಗಾರರು ಗಾಯಗೊಂಡ ಹಿನ್ನೆಲೆಯಲ್ಲಿ ಅಂಪಾಯರ್ ದಿನದಾಟವನ್ನು ರದ್ದುಗೊಳಿಸಲು ನಿರ್ಧರಿಸಿದರು.
ಇಬ್ಬರು ಆಟಗಾರರ ತಲೆಗೆ ಗಾಯವಾಗಿತ್ತು. ಹೀಗಾಗಿ ಅಂಪಾಯರ್ ಎಂಸಿಜಿ ಪಿಚ್ ಅಪಾಯಕಾರಿಯೆಂದು ತೀರ್ಮಾನಿಸಿ ದಿನದಾಟವನ್ನು ರದ್ದು ಮಾಡಿದರು. ಈ ಸಂದರ್ಭ ದ್ವಿತೀಯ ಅವಧಿಯಲ್ಲಿ ಒಂದು ತಾಸಿನ ಆಟ ಮುಗಿದಿದ್ದು ವೆಸ್ಟರ್ನ್ ಆಸ್ಟ್ರೇಲಿಯ ತಂಡವು 40 ಓವರ್‌ಗಳಲ್ಲಿ ಮೂರು ವಿಕೆಟಿಗೆ 89 ರನ್ ಗಳಿಸಿತ್ತು.
ಟೆಸ್ಟ್ ಕ್ರಿಕೆಟಿಗೆ ಸಿದ್ಧ ಮಾಡಲಾದ ಪಿಚ್‌ನ ಬದಲಾಗಿ ಬೇರೆ ಪಿಚ್‌ನಲ್ಲಿ ಶೆಫೀಲ್ಡ್ ಶೀಲ್ಡ್ ಕೂಟದ ಪಂದ್ಯವನ್ನು ನಡೆಸಲಾಗಿತ್ತು. ದಿನದಾಟ ರದ್ದುಗೊಂಡಿರುವುದು ನಿರಾಸೆಯನ್ನುಂಟುಮಾಡಿದೆ. ಆದರೆ ಇದೇ ಪಿಚ್‌ನಲ್ಲಿ ಈ ಋತುವಿನಲ್ಲಿ ಎರಡು ಪಂದ್ಯಗಳು ಯಾವುದೇ ತೊಂದರೆಯಿಲ್ಲದೇ ನಡೆದಿದ್ದವು ಎಂದು ಕ್ರಿಕೆಟ್ ಆಸ್ಟ್ರೇಲಿಯದ ಕ್ರಿಕೆಟ್ ವ್ಯವಹಾರಗಳ ಮುಖ್ಯಸ್ಥ ಪೀಟರ್ ರೋಶ್ ಹೇಳಿದ್ದಾರೆ.
ಡಿ. 26ರಿಂದ ಟೆಸ್ಟ್
ಇದೇ ಎಂಸಿಜಿ ಮೈದಾನದಲ್ಲಿ ಡಿ. 26ರಿಂದ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ®ಡುವೆ ದ್ವಿತೀಯ ಟೆಸ್ಟ್ ಆರಂಭವಾಗಲಿದೆ. ಈ ಕಾರಣಕ್ಕಾಗಿ ಮೈದಾನ ಸಿಬಂದಿ ಪಿಚ್ ಬಗ್ಗೆ ಪರಿಶೀಲನೆ ನಡೆಸಲಿದ್ದಾರೆ ಎಂದು ರೋಶ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.