Boxing Day Test : ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್!
Team Udayavani, Dec 11, 2024, 7:15 AM IST
ಮೆಲ್ಬರ್ನ್: ಭಾರತ-ಆಸ್ಟ್ರೇಲಿಯ ನಡುವಿನ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಟಿಕೆಟ್‌ಗಳೆಲ್ಲ ಮಾರಾಟಗೊಂಡಿರುವ ಸುದ್ದಿ ಬಂದಿದೆ. ಸರಣಿಯ ಈ 4ನೇ ಪಂದ್ಯ ವಿಶ್ವದ ಅತೀ ದೊಡ್ಡ ಕ್ರೀಡಾಂಗಣಗಳಲ್ಲಿ ಒಂದಾದ “ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಡಿ. 26ರಂದು ಆರಂಭವಾಗಲಿದೆ.
ಆಸ್ಟ್ರೇಲಿಯ ಅಡಿಲೇಡ್ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಗೊಳಿಸಿದ ಬಳಿಕ ಮೆಲ್ಬರ್ನ್ ಟೆಸ್ಟ್ ಪಂದ್ಯದ ಟಿಕೆಟ್‌ಗಳಿಗೆ ಬೇಡಿಕೆ ಕುದುರಿತು. ಮೊದಲ ದಿನದ ಟಿಕೆಟ್ ಭರದಲ್ಲಿ ಮಾರಾಟಗೊಂಡು ಈಗ ಸೋಲ್ಡ್ ಔಟ್ ಆಗಿದೆ. ಸಾರ್ವಜನಿಕರಿಗಾಗಿ ಉಳಿದಿರುವ ಕೆಲವೇ ಟಿಕೆಟ್‌ಗಳನ್ನು ಡಿ. 24ರಂದು ಮಾರಾಟಕ್ಕೆ ಬಿಡಲಾಗುವುದು ಎಂಬುದಾಗಿ ಕ್ರಿಕೆಟ್ ಆಸ್ಟ್ರೇಲಿಯ ಪ್ರಕಟಿಸಿದೆ.
ಮೂರೇ ದಿನದಲ್ಲಿ ಮುಗಿದ ಅಡಿಲೇಡ್‌ನ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ವೇಳೆ ಒಟ್ಟು 1,35,012 ವೀಕ್ಷಕರು ಹಾಜರಿದ್ದರು. ಇದು ಭಾರತ-ಆಸ್ಟ್ರೇಲಿಯ ಅಡಿಲೇಡ್ ಟೆಸ್ಟ್ ಪಂದ್ಯದ ನೂತನ ದಾಖಲೆ. 2014-15ರಂದು 1,13,009 ವೀಕ್ಷಕರು ಹಾಜರಿದ್ದುದು ಈವರೆಗಿನ ದಾಖಲೆ ಆಗಿತ್ತು. ಅಂದಿನ ಟೆಸ್ಟ್ ಪೂರ್ತಿ 5 ದಿನ ನಡೆದಿತ್ತು. ಪರ್ತ್ ಟೆಸ್ಟ್ ಪಂದ್ಯದಲ್ಲೂ ದಾಖಲೆ ಸಂಖ್ಯೆಯ ವೀಕ್ಷಕರಿದ್ದರು. ಆದರೆ ಮೆಲ್ಬರ್ನ್ ಬೃಹತ್ ಕ್ರೀಡಾಂಗಣವಾಗಿದ್ದು, ನೂತನ ದಾಖಲೆಯನ್ನು ಬರೆಯುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್ ಹೆಡ್ ಓಪನಿಂಗ್?
NZ Vs SL: 3ನೇ ಏಕದಿನ; ಲಂಕಾಕ್ಕೆ ಜಯ, 2-1ರಿಂದ ಸರಣಿ ಕಿವೀಸ್ ವಶ
T20; ಇಂಗ್ಲೆಂಡ್ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಶಮಿಗೆ ಅವಕಾಶ
Malaysia Open; ಸೆಮಿಫೈನಲ್‌ನಲ್ಲಿ ಸಾತ್ವಿಕ್-ಚಿರಾಗ್ ಜೋಡಿಗೆ ಸೋಲು
MUST WATCH
ಹೊಸ ಸೇರ್ಪಡೆ
Delhi Polls: ಮಾಜಿ ಸಿಎಂ ಪುತ್ರ ಸೇರಿ 29 ಅಭ್ಯರ್ಥಿಗಳ ಬಿಜೆಪಿಯ 2ನೇ ಪಟ್ಟಿ ಬಿಡುಗಡೆ
Sullia: ಅಸ್ವಸ್ಥ ಮಹಿಳೆ ಸಾವು
ITF Open: ಬೆಂಗಳೂರು ಐಟಿಎಫ್ ಟೆನಿಸ್‌ಗೆ ಅಗ್ರ 100 ರ್‍ಯಾಂಕ್‌ನ ನಾಲ್ವರು
Fight Alone: ಮಹಾರಾಷ್ಟ್ರದಲ್ಲೂ ಇಂಡಿ ಮೈತ್ರಿಕೂಟದಲ್ಲಿ ಅಪಸ್ವರ; ಎಂವಿಎ ಮೈತ್ರಿ ಮುಕ್ತಾಯ?
Travis Head: ಶ್ರೀಲಂಕಾ ಪ್ರವಾಸದಲ್ಲಿ ಟ್ರ್ಯಾವಿಸ್ ಹೆಡ್ ಓಪನಿಂಗ್?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.