ಸೆಂಚುರಿಯನ್‌ನಲ್ಲಿ ರಾಹುಲ್‌ ಸೆಂಚುರಿ ಮಿಂಚು

Team Udayavani, Dec 26, 2021, 11:42 PM IST

ಸೆಂಚುರಿಯನ್‌ನಲ್ಲಿ ರಾಹುಲ್‌ ಸೆಂಚುರಿ ಮಿಂಚು

ಸೆಂಚುರಿಯನ್‌: ಸೆಂಚುರಿಯನ್‌ನ “ಸೂಪರ್‌ ನ್ಪೋರ್ಟ್‌ ಪಾರ್ಕ್‌’ನಲ್ಲಿ ಸೂಪರ್‌ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಆರಂಭಕಾರ ಕೆ.ಎಲ್‌. ರಾಹುಲ್‌ ಅಮೋಘ ಸೆಂಚುರಿ ಬಾರಿಸಿ ಸಂಭ್ರಮಿಸಿದ್ದಾರೆ.

ಜತೆಗೆ ಇವರ ಜತೆಗಾರ, ಕರ್ನಾಟಕದ ಮತ್ತೋರ್ವ ಓಪನರ್‌ ಮಾಯಾಂಕ್‌ ಅಗರ್ವಾಲ್‌ ಕೂಡ ಸೊಗಸಾದ ಆಟವಾಡಿ ದ್ದಾರೆ. ಇವರರಿಬ್ಬರ ಸಾಹಸದಿಂದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಯಶಸ್ವಿಯಾಗಿಯೇ ಆರಂಭಿಸಿರುವ ಭಾರತ, ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ 3 ವಿಕೆಟಿಗೆ 272 ರನ್‌ ಗಳಿಸಿ ಮೊದಲ ದಿನ ಗೌರವ ಸಂಪಾದಿಸಿದೆ. ಇದರಲ್ಲಿ ರಾಹುಲ್‌ ಕೊಡುಗೆ ಅಜೇಯ 122.

7 ವರ್ಷಗಳ ಹಿಂದೆ ಬಾಕ್ಸಿಂಗ್‌ ದಿನದಂದೇ ಮೆಲ್ಬರ್ನ್ನಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ್ದ ರಾಹುಲ್‌ ಬಾಕ್ಸಿಂಗ್‌ ಡೇಯಂದೇ 7ನೇ ಟೆಸ್ಟ್‌ ಶತಕ ಬಾರಿಸಿ ಮೆರೆದದ್ದು ವಿಶೇಷವಾಗಿತ್ತು. ರಾಹುಲ್‌ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಶತಕ ಬಾರಿಸಿದ ಭಾರತದ ಕೇವಲ 2ನೇ ಓಪನರ್‌. ವಾಸಿಮ್‌ ಜಾಫ‌ರ್‌ ಮೊದಲಿಗ. ಅವರು 2006-07ರ ಕೇಪ್‌ಟೌನ್‌ ಟೆಸ್ಟ್‌ನಲ್ಲಿ 116 ರನ್‌  ಬಾರಿಸಿದ್ದರು. ಇದೀಗ ರಾಹುಲ್‌ ಈ ಮೊತ್ತ ವನ್ನು ಹಿಂದಿಕ್ಕಿದ್ದಾರೆ. ಹಾಗೆಯೇ ರಾಹುಲ್‌ ಇಂಗ್ಲೆಂಡ್‌, ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಶತಕ ಬಾರಿಸಿದ ಕೇವಲ 3ನೇ ವಿದೇಶಿ ಓಪನರ್‌ ಕೂಡ ಹೌದು. ಸಯೀದ್‌ ಅನ್ವರ್‌ ಮತ್ತು ಕ್ರಿಸ್‌ ಗೇಲ್‌ ಉಳಿದಿಬ್ಬರು.

ಟೆಸ್ಟ್‌ ಉಪನಾಯಕತ್ವವನ್ನು ಸ್ಮರಣೀಯ ವಾಗಿ ಆರಂಭಿಸಿದ ರಾಹುಲ್‌ 218 ಎಸೆತ ಗಳಿಂದ  ಶತಕ ಪೂರ್ತಿಗೊಳಿಸಿದರು. ಒಟ್ಟು 248 ಎಸೆತಗಳನ್ನು ನಿಭಾಯಿಸಿರುವ ರಾಹುಲ್‌ 16 ಬೌಂಡರಿ, ಒಂದು ಸಿಕ್ಸರ್‌ ಕೂಡ ಸಿಡಿಸಿದ್ದಾರೆ.  ಶ್ರೇಯಸ್‌ ಅಯ್ಯರ್‌ ಅವರನ್ನು ಮೀರಿಸಿ ಆಡುವ ಬಳಗದಲ್ಲಿ ಸ್ಥಾನ ಪಡೆದ ಅಜಿಂಕ್ಯ ರಹಾನೆ  ಯಾವುದೇ ಅಳುಕಿಲ್ಲದೆ ಆಡಿದರು. 81 ಎಸೆತ ಗಳಿಂದ 40 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದಾರೆ. 8 ಬೌಂಡರಿ ಸಿಡಿಸಿದ್ದಾರೆ.

ಭರವಸೆಯ ಆರಂಭ :

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದು ಕೊಂಡದ್ದು ಕ್ಯಾಪ್ಟನ್‌ ಕೊಹ್ಲಿಯ ದಿಟ್ಟ ನಿರ್ಧಾರವೆನಿಸಿತು. ಇದನ್ನು ಕರ್ನಾಟಕದ ಆರಂಭಿಕರಾದ ಮಾಯಾಂಕ್‌ ಅಗರ್ವಾಲ್‌ ಮತ್ತು  ನೂತನ ಉಪನಾಯಕ ಕೆ.ಎಲ್‌. ರಾಹುಲ್‌  ಸೇರಿಕೊಂಡು ಭರ್ಜರಿಯಾಗಿ ಸಮರ್ಥಿಸ ತೊಡಗಿದರು. ಹರಿಣಗಳ ವೇಗದ ಬೌಲಿಂಗ್‌ ಆಕ್ರಮಣಕ್ಕೆ ಎದೆಯೊಡ್ಡಿ ನಿಂತ ಇವರು ಮೊದಲ ಅವಧಿಯನ್ನು ಸಂಪೂರ್ಣವಾಗಿ ತಮ್ಮ ಆಟಕ್ಕೆ ಬಳಸಿಕೊಂಡರು. ಲಂಚ್‌ ವೇಳೆ ಭಾರತ ವಿಕೆಟ್‌ ನಷ್ಟವಿಲ್ಲದೆ 83 ರನ್‌ ಪೇರಿಸಿ ಉತ್ತಮ ಆರಂಭದ ಸೂಚನೆ ನೀಡಿತು.

ನ್ಯೂಜಿಲ್ಯಾಂಡ್‌ ಎದುರಿನ ತವರಿನ ಸರಣಿಯ ಫಾರ್ಮನ್ನೇ ಮುಂದುವರಿಸಿದ ಅಗರ್ವಾಲ್‌ ಬಿಂದಾಸ್‌ ಆಗಿ ಬ್ಯಾಟ್‌ ಬೀಸಿದರೆ,  ರಾಹುಲ್‌ ತೀವ್ರ ಎಚ್ಚರಿಕೆಯಿಂದ ಇನ್ನಿಂಗ್ಸ್‌ ಕಟ್ಟ ತೊಡಗಿದರು. ಮೊದಲ ಟೆಸ್ಟ್‌ ಆಡುತ್ತಿದ್ದ  ಎಡಗೈ ಸ್ಪಿನ್ನರ್‌ ಮಾರ್ಕೊ ಜಾನ್ಸೆನ್‌ ಅವರ ಮೊದಲ ಓವರ್‌ನಲ್ಲೇ 3 ಬೌಂಡರಿ ಸಿಡಿಸಿದ್ದು ಅಗರ್ವಾಲ್‌ ಆಕ್ರಮಣಕ್ಕೆ ಸಾಕ್ಷಿಯಾಗಿತ್ತು. ಆದರೆ ಇವರ ಎಸೆತದಲ್ಲೇ ಅಗರ್ವಾಲ್‌ಗೆ ಲೈಫ್ ಒಂದು ಸಿಕ್ಕಿತು. 36 ರನ್‌ ಮಾಡಿದ್ದಾಗ ಕೀಪರ್‌ ಡಿ ಕಾಕ್‌ ಕ್ಯಾಚ್‌ ಕೈಚೆಲ್ಲಿದರು.

ಅಗರ್ವಾಲ್‌-ರಾಹುಲ್‌ 40.2 ಓವರ್‌ಗಳಲ್ಲಿ 117 ರನ್‌ ಪೇರಿಸಿದರು. ಆಗ ಲುಂಗಿ ಎನ್‌ಗಿಡಿ ಮೊದಲ ಬ್ರೇಕ್‌ ಒದಗಿಸಿದರು. 60 ರನ್‌ ಮಾಡಿದ ಅಗರ್ವಾಲ್‌ (123 ಎಸೆತ, 9 ಬೌಂಡರಿ) ಅವರನ್ನು ಲೆಗ್‌ ಬಿಫೋರ್‌ ಬಲೆಗೆ ಬೀಳಿಸಿದರು. ಇದು ಅವರ 6ನೇ ಟೆಸ್ಟ್‌ ಫಿಫ್ಟಿ. ಮುಂದಿನ ಎಸೆತದಲ್ಲೇ ಪೂಜಾರ ಅವರಿಗೆ ಪೆವಿಲಿಯನ್‌ ಹಾದಿ ತೋರಿಸಿದರು. “ಟೆಸ್ಟ್‌ ಸ್ಪೆಷಲಿಸ್ಟ್‌’ ಬ್ಯಾಟ್ಸ್‌ಮನ್‌ ಇಲ್ಲಿ ಗೋಲ್ಡನ್‌ ಡಕ್‌ ಅವಮಾನಕ್ಕೆ ಸಿಲುಕಿದರು. ಕೊಹ್ಲಿ ಆಫ್ರಿಕನ್‌ ವೇಗಿಗೆ ಹ್ಯಾಟ್ರಿಕ್‌ ನಿರಾಕರಿಸಿದರು. ಟೀ ಬ್ರೇಕ್‌ ವೇಳೆ ಭಾರತ 2ಕ್ಕೆ 157 ರನ್‌ ಮಾಡಿತ್ತು.

ಪೂಜಾರ ಕಳೆದ ಸಲದ ಸೆಂಚುರಿಯನ್‌ ಟೆಸ್ಟ್‌ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಔಟಾಗಿದ್ದರು. ಅಂದು ಕೂಡ ಎನ್‌ಗಿಡಿ ಪಾತ್ರವಿತ್ತು. ಅವರಿಂದಾಗಿಯೇ ಪೂಜಾರ ರನೌಟ್‌ ಆಗಿದ್ದರು!

ಕಳೆದ ಕೆಲವು ಸಮಯದಿಂದ ದೊಡ್ಡ ಇನ್ನಿಂಗ್ಸ್‌ ಕಟ್ಟದ ನಾಯಕ ವಿರಾಟ್‌ ಕೊಹ್ಲಿ ಇಲ್ಲಿಯೂ ಭಾರೀ ಯಶಸ್ಸು ಕಾಣಲಿಲ್ಲ. 94 ಎಸೆತ ಎದುರಿಸಿ 35 ರನ್‌ ಹೊಡೆದರು. ಈ ವಿಕೆಟ್‌ ಕೂಡ ಎನ್‌ಗಿಡಿ ಪಾಲಾಯಿತು.

3ನೇ ಶತಕದ ಜತೆಯಾಟ : ರಾಹುಲ್‌-ಅಗರ್ವಾಲ್‌ ಜೋಡಿಯಿಂದ 34.3 ಓವರ್‌ಗಳಲ್ಲಿ 100 ರನ್‌ ಜತೆಯಾಟ ಪೂರ್ತಿಗೊಂಡಿತು. ಇದು ದಕ್ಷಿಣ ಆಫ್ರಿಕಾ ನೆಲದ ಟೆಸ್ಟ್‌ ಪಂದ್ಯಗಳಲ್ಲಿ ಭಾರತದ ಆರಂಭಿಕ ಜೋಡಿ ದಾಖಲಿಸಿದ 3ನೇ ಶತಕದ ಜತೆಯಾಟ. 2007ರ ಕೇಪ್‌ಟೌನ್‌ ಟೆಸ್ಟ್‌ ಪಂದ್ಯದಲ್ಲಿ ವಾಸಿಮ್‌ ಜಾಫ‌ರ್‌-ದಿನೇಶ್‌ ಕಾರ್ತಿಕ್‌ 153 ರನ್‌, 2010ರ ಸೆಂಚುರಿಯನ್‌ ಪಂದ್ಯದಲ್ಲಿ ವೀರೇಂದ್ರ ಸೆಹವಾಗ್‌-ಗೌತಮ್‌ ಗಂಭೀರ್‌ 137 ರನ್‌ ಪೇರಿಸಿದ್ದರು.

ಟಾಪ್ ನ್ಯೂಸ್

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

electricity

Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Rohit Sharma: ತನುಷ್‌ ಲಯವೇ ಭಾರತ ಟೆಸ್ಟ್‌ಗೆ ಆಯ್ಕೆಗೆ ಕಾರಣ

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

Jasprit Bumrah ಬೌಲಿಂಗ್‌ ಶೈಲಿಯನ್ನೇ ಶಂಕಿಸಿದ ಆಸೀಸ್‌ ಮಾಧ್ಯಮಗಳು!

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ: ಚುನಾವಣಾ ಆಯೋಗ

Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.