BPL: ಮೂರು ನೋಬಾಲ್ ಎಸೆದಿದ್ದ ಶೋಯೆಬ್ ಮಲಿಕ್ ಒಪ್ಪಂದ ರದ್ದು ಮಾಡಿದ ಬಾಂಗ್ಲಾ ಫ್ರಾಂಚೈಸಿ
Team Udayavani, Jan 26, 2024, 4:09 PM IST
ಢಾಕಾ: ಪಾಕಿಸ್ತಾನದ ಮಾಜಿ ನಾಯಕ ಶೋಯೆಬ್ ಮಲಿಕ್ ಅವರು ಇತ್ತೀಚೆಗೆ ಕೆಲ ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಸಾನಿಯಾ ಮಿರ್ಜಾ ಅವರನ್ನು ತೊರೆದು ಬೇರೆ ಮದುವೆಯಾದ ಬಳಿಕ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಲ್ಲಿ ಆಡಿದ್ದ ಅವರು ಒಂದೇ ಓವರ್ ನಲ್ಲಿ ಮೂರು ನೋಬಾಲ್ ಎಸೆದು ವಿವಾದಕ್ಕೆ ಗುರಿಯಾದರು. ಇದೀಗ ಅವರ ಒಪ್ಪಂದವನ್ನು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL) ನ ಪ್ರಸ್ತುತ ಆವೃತ್ತಿಯ ಮಧ್ಯದಲ್ಲಿ ಅವರ ಫ್ರಾಂಚೈಸ್ ಫಾರ್ಚೂನ್ ಬಾರಿಶಾಲ್ ಕೊನೆಗೊಳಿಸಿದೆ.
“ಈ ಋತುವಿನ ಬಿಪಿಎಲ್ ನಲ್ಲಿ ಶೋಯೆಬ್ ಮಲಿಕ್ ಇನ್ನು ಮುಂದೆ ಭಾಗವಹಿಸುವುದಿಲ್ಲ” ಎಂದು ಅಧಿಕೃತ ಹೇಳಿಕೆಯಲ್ಲಿ ಬಾರಿಶಾಲ್ ಹೇಳಿದೆ.
ಈ ಆವೃತ್ತಿಯ ಬಿಪಿಎಲ್‌ನಲ್ಲಿ ಕೇವಲ ಮೂರು ಪಂದ್ಯಗಳನ್ನು ಆಡಿದ ಮಲಿಕ್, ಹೊಸದಾಗಿ ವಿವಾಹವಾದ ಪತ್ನಿ ಸನಾ ಜಾವೇದ್ ಅವರೊಂದಿಗೆ ಸಮಯ ಕಳೆಯಲು ರಜೆ ಕೋರಿದ್ದರು ಎಂದು ವರದಿಯಾಗಿದೆ. ಅವರು ದುಬೈಗೆ ಹಾರಬೇಕಿತ್ತು ಮತ್ತು ಬಿಪಿಎಲ್ ನ ಸಿಲ್ಹೆಟ್ ಲೆಗ್ ಗೆ ಮುಂಚಿತವಾಗಿ ಹಿಂತಿರುಗಬೇಕಿತ್ತು. ಆದರೆ ದುಬೈಗೆ ಬಂದಿಳಿದ ನಂತರ, ಅನುಭವಿ ಆಲ್‌ರೌಂಡರ್ ಬರಿಶಾಲ್ ಫ್ರಾಂಚೈಸಿಗೆ ಭರವಸೆ ನೀಡಿದಂತೆ ಸಮಯಕ್ಕೆ ತಂಡವನ್ನು ಸೇರಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಖುಲ್ನಾ ವಿರುದ್ಧದ ಪಂದ್ಯದ ನಾಲ್ಕನೇ ಓವರ್ ನಲ್ಲಿ ಮಲಿಕ್ ಮೂರು ನೋಬಾಲ್ ಗಳನ್ನು ಎಸೆದಿದ್ದರು. ಸ್ಪಿನ್ನರ್ ಆಗಿ ಒಂದೇ ಓವರ್‌ನಲ್ಲಿ ಮೂರು ನೋ-ಬಾಲ್ ಹಾಕಿರುವುದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಯಿತು, ಮಲಿಕ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪಗಳು ಕೇಳಿ ಬಂದಿತ್ತು.
ಸ್ಪಷ್ಟನೆ ನೀಡಿದ ಮಾಲಕ: ಮಲಿಕ್ ವಿರುದ್ಧದ ಫಿಕ್ಸಿಂಗ್ ಆರೋಪಗಳನ್ನು ಫ್ರಾಂಚೈಸಿ ಮಾಲಕ ತಳ್ಳಿ ಹಾಕಿದರು.ವಿಡಿಯೊ ಸಂದೇಶದ ಮೂಲಕ ಸ್ಪಷ್ಟನೆ ನೀಡಿದ ಮಿಜಾನುರ್ ರೆಹಮಾನ್, ‘ಶೋಯೆಬ್ ಮಲಿಕ್ ಕುರಿತ ವದಂತಿಯ ಬಗ್ಗೆ ನಾನು ತೀವ್ರವಾಗಿ ವಿಷಾದಿಸುತ್ತೇನೆ. ಅವರೊಬ್ಬ ಶ್ರೇಷ್ಠ ಆಟಗಾರ. ಅವರು ನಮಗೆ ಅತ್ಯುತ್ತಮವಾದದ್ದನ್ನು ನೀಡಿದ್ದಾರೆ. ಹಾಗಾಗಿ ನಾವು ಅದರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಬಾರದು. ನಾವು ಸತತ ಎರಡು ಪಂದ್ಯಗಳನ್ನು ಕಳೆದುಕೊಂಡಿದ್ದೇವೆ ಆದ್ದರಿಂದ ನಾವು ಮುಂಬರುವ ಪಂದ್ಯಗಳತ್ತ ಗಮನ ಹರಿಸಬೇಕು ಮತ್ತು ನಾವು ಮತ್ತೆ ಗೆಲುವಿನ ಹಳಿಗೆ ಮರಳುವ ವಿಶ್ವಾಸವಿದೆ” ಎಂದು ರೆಹಮಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.