ಅಂಡರ್ 17 ವಿಶ್ವಕಪ್ ಫುಟ್ಬಾಲ್: ಬ್ರಝಿಲ್ಗೆ ಕಂಚು
Team Udayavani, Oct 29, 2017, 6:50 AM IST
ಕೋಲ್ಕತಾ: ಮಾಲಿ ತಂಡವನ್ನು 2-0 ಗೋಲುಗಳಿಂದ ಸೋಲಿಸಿದ ಬ್ರಝಿಲ್ ತಂಡವು ಅಂಡರ್ 17 ವಿಶ್ವಕಪ್ ಫುಟ್ಬಾಲ್ ಕೂಟದಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.ಪಂದ್ಯದ 55ನೇ ನಿಮಿಷದಲ್ಲಿ ಮಾಲಿ ಗೋಲ್ಕೀಪರ್ ಯೂಸುಫ್ ಕೊಯಿಟ ಅವರು ಅಲನ್ ಅವರಿಗೆ ಗೋಲೊಂದನ್ನು ಉಡುಗೊರೆಯಾಗಿ ನೀಡಿದರೆ 88ನೇ ನಿಮಿಷದಲ್ಲಿ ಆಲ್ಬರ್ಟೊ ಗೋಲನ್ನು ಹೊಡೆದು ಬ್ರಝಿಲ್ ಗೆಲುವಿನ ಅಂತರವನ್ನು 2-0ಕ್ಕೇರಿಸಿದರು.
ಇಲ್ಲಿನ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯವನ್ನು ವೀಕ್ಷಿಸಲು 56,432 ಮಂದಿ ಬಂದಿದ್ದರು. ಫಿಫಾ ಅಂಡರ್ 17 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯವೊಂದನ್ನು ಗರಿಷ್ಠ ಸಂಖ್ಯೆಯಲ್ಲಿ ವೀಕ್ಷಿಸಿದ ಪಂದ್ಯ ಇದಾಗಿದೆ.ಆದರೆ ಬ್ರಝಿಲ್ ತನ್ನ ನೈಜ ಆಟ ಆಡದೇ ನಿರಾಶೆಗೊಳಿಸಿದೆ. ಆದರೆ ಮಾಲಿ ಗೆಲುವಿಗಾಗಿ ಬಹಳಷ್ಟು ಆಕ್ರಮಣಕಾರಿಯಾಗಿ ಆಡಿ ಬ್ರಝಿಲ್ಗೆ ಒತ್ತಡ ಹೇರಲು ಪ್ರಯತ್ನಿಸಿತು.
ಈ ಪಂದ್ಯದಲ್ಲಿ ಬ್ರಝಿಲ್ ಕೇವಲ ಮೂರು ಬಾರಿ ಗೋಲು ಹೊಡೆಯುವ ಪ್ರಯತ್ನ ನಡೆಸಿತ್ತು. ಆದರೆ ಮಾಲಿ ತೀವ್ರ ಪೈಪೋಟಿಯಿಂದ ಆಡಿತಲ್ಲದೇ 10 ಬಾರಿಯಾದರೂ ಗೋಲು ಹೊಡೆಯುವ ಪ್ರಯತ್ನ ಮಾಡಿತ್ತು.
ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿ ಭಾರತಕ್ಕೆ ಆಗಮಿಸಿದ್ದ ಬ್ರಝಿಲ್ ಸೆಮಿಫೈನಲ್ನಲ್ಲಿ ಇಂಗ್ಲೆಂಡಿಗೆ ಶರಣಾಗಿ ಮೂರನೇ ಸ್ಥಾನ ಪಡೆಯಲಷ್ಟೇ ಶಕ್ತವಾಯಿತು. 1985ರಲ್ಲಿ ಈ ಕೂಟ ಆರಂಭವಾದ ಬಳಿಕ ಬ್ರಝಿಲ್ ಎರಡನೇ ಬಾರಿ ಮೂರನೇ ಸ್ಥಾನ ಪಡೆದಿದೆ. ಮಾಲಿ ಈ ಹಿಂದಿನ ಕೂಟದಲ್ಲಿ ರನ್ನರ್ ಅಪ್ ಸ್ಥಾನ ಪಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
MUST WATCH
ಹೊಸ ಸೇರ್ಪಡೆ
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.