Ashes: ಹೇಡಿಂಗ್ಲೆ ಮೈದಾನದೊಳಗೆ ಕೋಚ್ ಬ್ರೆಂಡನ್ ಮೆಕಲಮ್ ಗೆ ಪ್ರವೇಶ ನಿರಾಕರಣೆ
Team Udayavani, Jul 8, 2023, 2:33 PM IST
ಹೇಡಿಂಗ್ಲೆ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಸರಣಿಯ ಮೂರನೇ ಪಂದ್ಯ ನಡೆಯುತ್ತಿದೆ. ಈಗಾಗಲೇ ಸರಣಿಯಲ್ಲಿ 2-0 ಅಂತರದಿಂದ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ಹೇಡಿಂಗ್ಲೆಯಲ್ಲಿ ನಡೆಯುತ್ತಿರುವ ಮೂರನೇ ಪಂದ್ಯದಲ್ಲಿ ಹಿನ್ನಡೆ ಸಾಧಿಸಿದೆ.
ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನವೇ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲೇ ವಿಚಿತ್ರ ಘಟನೆಯೊಂದು ನಡೆದಿದೆ. ಟೈಮ್ಸ್ ಯುಕೆ ನಲ್ಲಿನ ವರದಿಯ ಪ್ರಕಾರ, ಇಂಗ್ಲೆಂಡ್ ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರು ಪಾಸ್ ಹೊಂದಿಲ್ಲದ ಕಾರಣ ಹೆಡಿಂಗ್ಲಿಗೆ ಮೈದಾನಕ್ಕೆ ಅವರ ಪ್ರವೇಶವನ್ನು ನಿರಾಕರಿಸಲಾಗಿತ್ತು.
“ಇಂಗ್ಲೆಂಡ್ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಬ್ರೆಂಡನ್ ಮೆಕಲಮ್ ಅವರು ಮೂರನೇ ಆಶಸ್ ಟೆಸ್ಟ್‌ನ ಆರಂಭಿಕ ದಿನದ ಮೊದಲು ಹೆಡಿಂಗ್ಲಿಗೆ ಪ್ರವೇಶ ನಿರಾಕರಿಸಲಾಗಿತ್ತು” ಎಂದು ವರದಿ ಹೇಳಿದೆ.
ಇದನ್ನೂ ಓದಿ:ಪ. ಬಂಗಾಳ: ಚುನಾವಣೆ ನಡೆಯುತ್ತಿದ್ದ ವೇಳೆ ಮತಪೆಟ್ಟಿಗೆಯನ್ನೇ ಹೊತ್ತೊಯ್ದ ಯುವಕ
ಮೆಕಲಮ್ ಅವರನ್ನು ಗುರುತಿಸುವಲ್ಲಿ ಭದ್ರತಾ ಸಿಬ್ಬಂದಿ ವಿಫಲರಾಗಿದ್ದಾರೆ. ಅಂತಿಮವಾಗಿ ಇಂಗ್ಲೆಂಡ್ ಕೋಚ್ ತಾಳ್ಮೆ ಕಳೆದುಕೊಂಡರು ಎಂದು ವರದಿ ತಿಳಿಸಿದೆ.
“ಡ್ಯೂಟಿಯಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಮೆಕಲಮ್ ಅವರನ್ನು ಗುರುತಿಸಲಿಲ್ಲ, ಆದರೆ ಮೆಕಲಮ್ ಜೊತೆಗಿದ್ದ ವ್ಯಕ್ತಿಯು ಈತ ಇಂಗ್ಲೆಂಡ್ ತಂಡದ ಪ್ರಮುಖ ಸದಸ್ಯ ಎಂದು ಸೂಚಿಸಿದರು. ಬಳಿಕ ಗಾರ್ಡ್ ತನ್ನ ಹಿರಿಯ ಅಧಿಕಾರಿಯ ಜತೆ ಚರ್ಚೆ ನಡೆಸಿದ. ಈ ವೇಳೆ ತಾಳ್ಮೆ ಕಳೆದುಕೊಂಡ ಮೆಕಲಮ್, ‘ಇದೆಲ್ಲಾ ನೀವೆ ಬಗೆಹರಿಸಿಕೊಳ್ಳಿ’ ಎಂದು ನಡೆದರು” ಎಂದು ವರದಿ ಹೇಳಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.