Brisbane International Tennis: ಎಲೆನಾ ರಿಬಾಕಿನಾ ಚಾಂಪಿಯನ್
ಆಕ್ಲೆಂಡ್ ಪ್ರಶಸ್ತಿ ಉಳಿಸಿಕೊಂಡ ಕೊಕೊ ಗಾಫ್ , 6 ವರ್ಷಗಳ ಬಳಿಕ ಡಿಮಿಟ್ರೋವ್ಗೆ ಪ್ರಶಸ್ತಿ
Team Udayavani, Jan 8, 2024, 12:08 AM IST
ಬ್ರಿಸ್ಬೇನ್: ವಿಶ್ವದ ನಂ. 2 ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು 6-0, 6-3 ಅಂತರ ದಿಂದ ಹಿಮ್ಮೆಟ್ಟಿಸಿದ ಎಲೆನಾ ರಿಬಾಕಿನಾ “ಬ್ರಿಸ್ಬೇನ್ ಇಂಟರ್ನ್ಯಾಶನಲ್’ ಟೆನಿಸ್ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ. ಇದರೊಂದಿಗೆ ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ ಫೈನಲ್ ಫಲಿತಾಂಶ ಪುನರಾ ವರ್ತನೆಗೊಂಡಂತಾಯಿತು.
ರಷ್ಯಾ ಮೂಲದ ಕಜಕಸ್ಥಾನದ ಆಟಗಾರ್ತಿ ಯಾಗಿರುವ ಎಲೆನಾ ರಿಬಾಕಿನಾ ಮೊದಲ 8 ಗೇಮ್ಗಳನ್ನು ತಮ್ಮದಾಗಿಸಿಕೊಂಡು ಸಬಲೆಂಕಾ ವಿರುದ್ಧ ಪ್ರಭುತ್ವ ಸಾಧಿಸಿದರು. 73 ನಿಮಿಷಗಳಲ್ಲಿ ಪಂದ್ಯವನ್ನು ವಶಪಡಿಸಿಕೊಂಡರು. ಇದು ವಿಶ್ವದ 6ನೇ ರ್ಯಾಂಕಿಂಗ್ ಆಟಗಾರ್ತಿಗೆ ಒಲಿದ 6ನೇ ಡಬ್ಲ್ಯುಟಿಎ ಪ್ರಶಸ್ತಿ. ಇದರೊಂದಿಗೆ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ಸ್ಲಾಮ್ ಪಂದ್ಯಾವಳಿಗೆ ಹೊಸ ಹುರುಪಿನಿಂದ ಸಜ್ಜುಗೊಂಡರು.
ಕೊಕೊ ಗಾಫ್ ಸಾಧನೆ
ಆಕ್ಲೆಂಡ್: ಅಮೆರಿಕದ 19 ವರ್ಷದ ಆಟಗಾರ್ತಿ ಕೊಕೊ ಗಾಫ್ “ಆಕ್ಲೆಂಡ್ ಕ್ಲಾಸಿಕ್’ ಟೆನಿಸ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರವಿವಾರದ ಫೈನಲ್ನಲ್ಲಿ ಅವರು ಉಕ್ರೇನ್ನ ಎಲಿನಾ ಸ್ವಿಟೋಲಿನಾ ವಿರುದ್ಧ 3 ಸೆಟ್ಗಳ ಹೋರಾಟ ನಡೆಸಿ 6-7 (4-7), 6-3, 6-3 ಅಂತರದ ಗೆಲುವು ಸಾಧಿಸಿದರು.
“ನಾನು ಉಳಿಸಿಕೊಂಡ ಮೊದಲ ಟೆನಿಸ್ ಪ್ರಶಸ್ತಿ ಇದಾಗಿದೆ. ಸಹಜ ವಾಗಿಯೇ ಹೆಚ್ಚು ಖುಷಿಯಾಗಿದೆ’ ಎಂದು 7ನೇ ಡಬ್ಲ್ಯುಟಿಎ ಪ್ರಶಸ್ತಿ ಗೆದ್ದ ಕೊಕೊ ಗಾಫ್ ಹೇಳಿದರು.
6 ವರ್ಷಗಳ ಬಳಿಕ ಡಿಮಿಟ್ರೋವ್ಗೆ ಪ್ರಶಸ್ತಿ
ಬ್ರಿಸ್ಬೇನ್ ಇಂಟರ್ನ್ಯಾಶನಲ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಬಲ್ಗೇರಿಯಾದ ಗ್ರಿಗರ್ ಡಿಮಿಟ್ರೋವ್ ಪಾಲಾಗಿದೆ. ಫೈನಲ್ನಲ್ಲಿ ಅವರು ಡೆನ್ಮಾರ್ಕ್ನ ಹೋಲ್ಗರ್ ರುನೆ ವಿರುದ್ಧ 7-6 (5), 6-4 ಅಂತರದ ಗೆಲುವು ಸಾಧಿಸಿ ಎಟಿಪಿ ಪ್ರಶಸ್ತಿ ಬರಗಾಲವನ್ನು ನೀಗಿಸಿಕೊಂಡರು. ಇದರೊಂದಿಗೆ ಸುದೀರ್ಘ 6 ವರ್ಷಗಳ ತರುವಾಯ ಡಿಮಿಟ್ರೋವ್ ಎಟಿಪಿ ಪ್ರಶಸ್ತಿಯೊಂದನ್ನು ತಮ್ಮದಾಗಿಸಿ ಕೊಂಡಂತಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Sydney Test; ಬದಲಾದ ನಾಯಕ; ಮುಂದುವರಿದ ಬ್ಯಾಟಿಂಗ್ ಪರದಾಟ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
PCB;ಕರಾಚಿ ಕ್ರೀಡಾಂಗಣದ ನವೀಕರಣ ಕಾರ್ಯ ಪೂರ್ಣಕ್ಕೆ ಹರಸಾಹಸ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.