22 ವರ್ಷಗಳ ವೃತ್ತಿಪರ ಆಟಕ್ಕೆ ತೆರೆ; ಟೆನಿಸ್‌ಗೆ ಗುಡ್‌ಬೈ ಹೇಳಿದ ಬ್ರಿಯಾನ್ ಸಹೋದರರು !
ಜತೆಯಾಗಿ 16 ಗ್ರಾನ್‌ಸ್ಲಾಮ್ ಸಹಿತ 119 ಪ್ರಶಸ್ತಿ ಗೆದ್ದ ಸಾಧನೆ
Team Udayavani, Aug 27, 2020, 7:32 PM IST
ಕ್ಯಾಲಿಫೋರ್ನಿಯಾ (ಯುಎಸ್‌ಎ): ಜಾಗತಿಕ ಟೆನಿಸ್ ಇತಿಹಾಸದ ಸರ್ವಶ್ರೇಷ್ಠ ಜೋಡಿಯೆನಿಸಿದ ಅಮೆರಿಕದ ಬ್ರಿಯಾನ್ ಸಹೋದರರಾದ ಬಾಬ್ ಮತ್ತು ಮೈಕ್ ತಮ್ಮ 22 ವರ್ಷಗಳ ವೃತ್ತಿಪರ ಆಟಕ್ಕೆ ಗುಡ್‌ಬೈ ಹೇಳಿದ್ದಾರೆ. ಅವಳಿ ಸೋದರರ ಈ ವಿದಾಯದ ಸುದ್ದಿಯನ್ನು “ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ. “ಆಟ ಮುಂದುವರಿಸುವುದನ್ನು ನಾವಿನ್ನೂ ಬಯಸುತ್ತೇವೆ. ನಮ್ಮಲ್ಲಿ ಇನ್ನೂ ಉತ್ತಮ ಆಟ ಉಳಿದುಕೊಂಡಿದೆ. ಆದರೆ ನಮ್ಮ ದೇಹ ಸ್ಪಂದಿಸದು. ಹೀಗಾಗಿ ಟೆನಿಸ್‌ನಿಂದ ದೂರ ಉಳಿಯುವ ಕಠಿನ ತೀರ್ಮಾನಕ್ಕೆ ಬಂದಿದ್ದೇವೆ’ ಎಂಬುದಾಗಿ ಬ್ರಿಯಾನ್ ಸೋದರರು ಹೇಳಿದ್ದಾರೆ.
ಒಲಿಂಪಿಕ್ಸ್ ಸ್ವರ್ಣ ಸಾಧಕರು
42 ವರ್ಷದ ಅವಳಿ ಸೋದರರು ಪುರುಷರ ಡಬಲ್ಸ್‌ನಲ್ಲಿ ಒಟ್ಟು 119 ಪ್ರಶಸ್ತಿಗಳನ್ನು ಜಯಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಇದರಲ್ಲಿ 16 ಗ್ರಾನ್‌ಸ್ಲಾಮ್, 39 ಎಟಿಪಿ ಮಾಸ್ಟರ್ 1000 ಮತ್ತು 4 ಎಟಿಪಿ ಫೈನಲ್ಸ್ ಪ್ರಶಸ್ತಿಗಳು ಸೇರಿವೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದು ಇವರ ಮಹಾನ್ ಸಾಧನೆಯಾಗಿದೆ. ರಾಬರ್ಟ್ ಚಾರ್ಲ್ಸ್ ಬಾಬ್ ಬ್ರಿಯಾನ್ ಮತ್ತು ಮೈಕಲ್ ಕಾರ್ಲ್ ಮೈಕ್ ಬ್ರಿಯಾನ್ ಎಂಬುದು ಇವರ ಪೂರ್ತಿ ಹೆಸರು. 1978ರ ಎಪ್ರಿಲ್ 29ರಂದು ಇವರ ಜನನವಾಗಿತ್ತು. ಇವರಲ್ಲಿ ಮೈಕ್ ಬ್ರಿಯಾನ್ ಎರಡು ನಿಮಿಷ ದೊಡ್ಡವರು. ಇವರಿಬ್ಬರಲ್ಲಿ ಮೈಕ್ ಬ್ರಿಯಾನ್ 2018ರಲ್ಲಿ ಹೆಚ್ಚುವರಿಯಾಗಿ 2 ಗ್ರಾನ್‌ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ. ಆಗ ಜಾಕ್ ಸಾಕ್ ಇವರ ಜೋಡಿಯಾಗಿದ್ದರು. ಅಂದು ಬಾಬ್ ಬ್ರಿಯಾನ್ ಗಾಯಾಳಾಗಿ ವಿಶ್ರಾಂತಿಯಲ್ಲಿದ್ದರು.
ಗೆಲುವಿನೊಂದಿಗೆ ವಿದಾಯ
ಬ್ರಿಯಾನ್ ಸೋದರರು ಗೆಲುವಿನೊಂದಿಗೇ ಟೆನಿಸ್ ಬದುಕಿಗೆ ವಿದಾಯ ಹೇಳಿರುವುದು ವಿಶೇಷ. ಫೆಬ್ರವರಿಯಲ್ಲಿ ನಡೆದ “ಡೆಲ್ರೆ ಬೀಚ್ ಓಪನ್’ ಟೆನಿಸ್ ಕೂಟದಲ್ಲಿ ಇವರು ಚಾಂಪಿಯನ್ ಆಗಿದ್ದರು. ಬಳಿಕ ಕೊರೊನಾದಿಂದಾಗಿ ಕ್ರೀಡಾ ಜಗತ್ತು ಸ್ತಬ್ಧಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.