ಮಾರುತಿಯಿಂದ ಬಿಎಸ್-4 ಕಾರು ಉತ್ಪಾದನೆ ಸ್ಥಗಿತ
Team Udayavani, Dec 20, 2018, 6:50 AM IST
ನವದೆಹಲಿ: ದೇಶದ ಪ್ರಮುಖ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ 2019ರ ಡಿಸೆಂಬರ್‌ನಲ್ಲಿ ಬಿಎಸ್-4 ಮಾದರಿ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಲಿದೆ. 2020ರ ಜ.1ರಿಂದ ಕೇಂದ್ರ ಸರ್ಕಾರದ ಸೂಚನೆಯಂತೆ ಬಿಎಸ್-6 ಮಾದರಿ ಪರಿಸರ ಸಂರಕ್ಷಣಾ ವ್ಯವಸ್ಥೆ ಇರುವ ಕಾರುಗಳನ್ನು ಉತ್ಪಾದಿಸಲಿದೆ. ಸಂಸ್ಥೆಯ ಅಧ್ಯಕ್ಷ ಆರ್.ಸಿ.ಭಾರ್ಗವ ಬುಧವಾರ ಈ ಮಾಹಿತಿ ನೀಡಿದ್ದಾರೆ.
ಬಿಎಸ್-6 ಪರಿಸರ ನಿಯಮಗಳನ್ನು ಹೊಂದಿರುವ ಡೀಸೆಲ್ ಕಾರುಗಳ ದರ ಪೆಟ್ರೋಲ್ ಕಾರುಗಳಿಗಿಂತ ಹೆಚ್ಚಾಗಲಿದೆ. ಹೀಗಾಗಿ ಅವುಗಳ ಮಾರಾಟ ಕುಗ್ಗುವ ಸಾಧ್ಯತೆ ಎಂದು ಹೇಳಿದ್ದಾರೆ. 2019ರ ಡಿಸೆಂಬರ್ ಬಳಿಕ ಬಿಎಸ್-4 ಮಾದರಿ ಕಾರುಗಳ ಉತ್ಪಾದನೆ ಮುಂದುವರಿಯಲಿದ್ದರೂ, ಅದು ನಿಯಮಿತವಾಗಿರಲಿದೆ ಎಂದಿದ್ದಾರೆ. ಇದೇ ವೇಳೆ ಮುಂದಿನ ವರ್ಷ 2 ಹೊಸ ಮಾದರಿ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಅವು ಬಿಎಸ್-6 ಪರಿಸರ ನಿಯಮಗಳಿಗೆ ಅನ್ವಯವಾಗಿರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.