ಬಜೆಟ್‌ನಲ್ಲಿ ಖೇಲೋ ಇಂಡಿಯಾಗೆ ಬಂಪರ್
Team Udayavani, Feb 2, 2018, 6:20 AM IST
ಹೊಸದಿಲ್ಲಿ: ಗುರುವಾರ ಮಂಡಿಸಲಾದ 2018-19ರ ಬಜೆಟ್‌ನಲ್ಲಿ ಕೇಂದ್ರ ಕ್ರೀಡಾ ಇಲಾಖೆಗೆ ನೀಡಲಾದ ಅನುದಾನವನ್ನು 2,396.35 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಕಳೆದ ಸಲ 1943.21 ಕೋಟಿ ರೂ. ನೀಡಲಾಗಿತ್ತು.
ಈ ಸಲ ಖೇಲೋ ಇಂಡಿಯಾಗೆ 520.09 ಕೋಟಿ ರೂ. ಬಂಪರ್ ಕೊಡುಗೆ ಪ್ರಕಟಿಸಲಾಗಿದೆ. ಕಳೆದ ವರ್ಷ 320 ಕೋಟಿ ರೂ. ನೀಡಲಾಗಿತ್ತು. ಈ ಬಾರಿ ಖೇಲೋ ಇಂಡಿಯಾ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಹೆಚ್ಚು ಒತ್ತು ನೀಡಿರುವುದು ವಿಶೇಷ. ಸಾಯ್‌ಗೆ 429.56 ಕೋಟಿ ರೂ., ರಾಷ್ಟ್ರೀಯ ಸೇವಾ ಯೋಜನೆಗೆ 160 ಕೋಟಿ ರೂ., ರಾಷ್ಟ್ರೀಯ ಯುವ ಕಾಪ್ಸ್ìಗೆ 80 ಕೋಟಿ ರೂ., ರಾಷ್ಟ್ರೀಯ ನ್ಪೋರ್ಟ್ಸ್ ಫೆಡರೇಷನ್‌ಗೆ 342 ಕೋಟಿ ರೂ., ನೆಹರೂ ಯುವ ಕೇಂದ್ರಕ್ಕೆ 255 ಕೋಟಿ ರೂ., ಕ್ರೀಡೆ ಹಾಗೂ ಯುವ ಸೇವೆಗಳು 1935.15 ಕೋಟಿ ರೂ., ಈಶಾನ್ಯ ರಾಜ್ಯಗಳ ಅಭಿವೃದ್ದಿಗೆ 173.16 ಕೋಟಿ ರೂ., ಜಮ್ಮು ಕಾಶ್ಮೀರದಲ್ಲಿ ಕ್ರೀಡಾ ಚಟುವಟಿಕೆಗಳ ಅಭಿವೃದ್ದಿಗೆ 50 ಕೋಟಿ ರೂ. ಮೀಸಲಿರಿಸಲಾಗಿದೆ. ಕಳೆದ ವರ್ಷ ಜಮ್ಮು ಕಾಶ್ಮೀರ ಕ್ರೀಡಾ ಅಭಿವೃದ್ದಿಗೆ 75 ಕೋಟಿ ರೂ. ನೀಡಲಾಗಿತ್ತು. ಈ ವರ್ಷ 25 ಕೋಟಿ ರೂ. ಕಡಿಮೆ ನೀಡಲಾಗಿದೆ.
ಅಂಗವಿಕಲ ಕ್ರೀಡಾಪಟುಗಳಿಗೆ ಈ ಬಾರಿ ಹೊಸ ಯೋಜನೆಗಳೆನೂ ಪ್ರಕಟವಾಗಿಲ್ಲ. ಇದಕ್ಕೆ ಕ್ರೀಡಾ ವಲಯದಿಂದ ಬಾರೀ ಟೀಕೆ ವ್ಯಕ್ತವಾಗಿದೆ.
ಈ ಬಜೆಟ್‌ನಲ್ಲಿ ಪ್ರಕಟಗೊಂಡ ಹಣ ಮುಂಬರುವ ಕಾಮನ್ವೆಲ್ತ್ ಗೇಮ್ಸ್, ಏಷ್ಯಾಡ್ ಗೇಮ್ಸ್ ಹಾಗೂ 2020ರ ಟೀಕಿಯೋ ಒಲಿಂಪಿಕ್ಸ್ ವೇಳೆ ಆ್ಯತ್ಲೀಟ್‌ಗಳಿಗೆ ನೆರವಾಗಲಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.