80ರ ವಯಸ್ಸಿನಲ್ಲೂ ಆಟೋ ಓಡಿಸುತ್ತಿರುವ ಬುಮ್ರಾ ಅಜ್ಜ !
Team Udayavani, Jul 5, 2017, 9:34 AM IST
ಹೊಸದಿಲ್ಲಿ: ವೃದ್ಧಾಪ್ಯದಲ್ಲೂ ಆಟೋ ಓಡಿಸಿ ಜೀವನ ಸಾಗಿಸುತ್ತಿರುವ ಅದೆಷ್ಟೋ ಮಂದಿಯನ್ನು ನಾವು ನೋಡಿದ್ದೇವೆ. ಕೆಲವರು ತುತ್ತಿನ ಕೂಳಿಗಾಗಿ, ಬದುಕಿನ ಬಂಡಿ ಎಳೆಯುವುದಕ್ಕಾಗಿ ಇನ್ನಿಲ್ಲದ ಪರಿ ಸರ್ಕಸ್ ನಡೆಸುತ್ತಿರುತ್ತಾರೆ.
ಆದರೆ ಇಲ್ಲೊಬ್ಬ ಮೊಮ್ಮಗ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿದ್ದರೂ, ಕೋಟ್ಯಂತರ ರೂ. ಸಂಪಾದನೆ ಮಾಡುತ್ತಿದ್ದರೂ ಆತನ ಅಜ್ಜ ಎಂಬತ್ತರ ಇಳಿ ವಯಸ್ಸಿನಲ್ಲಿ ಆಟೋ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಅಜ್ಜನನ್ನು ಇಳಿವಯಸ್ಸಿನಲ್ಲಿ ಬೀದಿಗೆ ಬಿಟ್ಟವರು ಬೇರಾರೂ ಅಲ್ಲ. ಭಾರತ ಕ್ರಿಕೆಟ್ ತಂಡದ ಖ್ಯಾತ ವೇಗಿ ಜಸ್‌ಪ್ರೀತ್ ಬುಮ್ರಾ!
ಹೌದು, ಆಂಗ್ಲ ಮಾಧ್ಯಮವೊಂದು ಇಂಥದೊಂದು ವರದಿ ಪ್ರಕಟಿಸಿದೆ. ಇದುವರೆಗೆ ಬುಮ್ರಾ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಅವರಿಬ್ಬರೂ ದೂರವಾಗಿದ್ದರೇ ಅಥವಾ ದೂರವಾಗಿದ್ದರೂ ಇಷ್ಟು ದಿನ ಪರಸ್ಪರ ಭೇಟಿಯಾಗಿಲ್ಲ ಏಕೆ ಎನ್ನುವ ಪ್ರಶ್ನೆಗಳಿಗೆ ಸ್ವತಃ ಜಸ್‌ಪ್ರೀತ್ ಬುಮ್ರಾ ಇನ್ನೂ ಉತ್ತರ ನೀಡಿಲ್ಲ.
ಉತ್ತರಾಖಂಡದಲ್ಲಿ ಆಟೋ ಅಜ್ಜ
ಅಲ್ಲಿ ಬುಮ್ರಾ ವೇಗದ ಬೌಲಿಂಗ್‌ನಿಂದ ವಿಕೆಟ್ ಕೀಳುತ್ತಿದ್ದರೆ ಉತ್ತರಾಖಂಡ್‌ನ ಉದಾಮ್ ಸಿಂಗ್ ನಗರದಲ್ಲಿ ಬುಮ್ರಾ ಅಜ್ಜ ಆಟೋ ಓಡಿಸಿಕೊಂಡು ಕಾಸು ಸಂಪಾದಿಸುತ್ತಿದ್ದಾರೆ. ಅಜ್ಜನ ಹೆಸರು ಸಂತೋಕ್ ಸಿಂಗ್ ಬುಮ್ರಾ. ಇವರಿಗೆ ಅಹ್ಮದಾಬಾದ್‌ನಲ್ಲಿ 3 ಕಾರ್ಖಾನೆಗಳಿದ್ದವು. ಇವರ ಮಗನ ಹೆಸರು ಜಸ್ವೀರ್ ಸಿಂಗ್ ಬುಮ್ರಾ. ಜಸ್ವೀರ್ ಮಗನೇ ಜಸ್‌ಪ್ರೀತ್ ಸಿಂಗ್ ಬುಮ್ರಾ.
ಮಗ ಜಸ್ವೀರ್ ಸಿಂಗ್ ತೀರಿಕೊಂಡ ಅನಂತರ ಸಂತೋಕ್ ಸಿಂಗ್ ಬುಮ್ರಾ ವ್ಯಾಪಾರದಲ್ಲಿ ಭಾರೀ ನಷ್ಟ ಉಂಟಾಯಿತು. ಅನಿವಾರ್ಯವಾಗಿ ಕಾರ್ಖಾನೆ ಮಾರಬೇಕಾಯಿತು. 2006ರಲ್ಲಿ ಸಂತೋಕ್ ಉದಾಮ್‌ನಗರಕ್ಕೆ ಆಗಮಿಸಿದರು. ಹೊಸ ಉದ್ಯಮ ಆರಂಭಿಸಿದರು. 4 ಆಟೋ ಟೆಂಪೋ ಖರೀದಿಸಿದರು. ಆದರೆ ಮತ್ತದೇ ಅದೃಷ್ಟ ಕೈಕೊಟ್ಟಿತು. ಸಂತೋಕ್ 3 ಆಟೋವನ್ನು ಮಾರಿದರು. ಸದ್ಯ ಒಂದು ಆಟೋ ಉಳಿದುಕೊಂಡಿದೆ. ಅದರಲ್ಲೇ ಜೀವನ ನಡೆಸುತ್ತಿದ್ದಾರೆ.
ಸಂತೋಕ್ ಎಲ್ಲೇ ಇದ್ದರೂ ಮೊಮ್ಮಗ ಜಸ್‌ಪ್ರೀತ್ ಆಟವನ್ನು ಮಿಸ್ ಮಾಡಲ್ಲ. ಈಗಲೂ ಮೊಮ್ಮಗನನ್ನು ನೋಡಲು, ಅಪ್ಪಿ ಮುದ್ದಾಡಲು ವೃದ್ಧನ ಕಣ್ಣುಗಳು ಹಪಹಪಿಸುತ್ತಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.