ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
Team Udayavani, Jan 8, 2025, 11:15 PM IST
ದುಬಾೖ: ಐಸಿಸಿ ಟೆಸ್ಟ್ ಬೌಲಿಂಗ್ ರ್‍ಯಾಂಕಿಂಗ್‌ನಲ್ಲಿ ಜಸ್‌ಪ್ರೀತ್ ಬುಮ್ರಾ ತಮ್ಮ ಅಗ್ರಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಜೀವನಶ್ರೇಷ್ಠ 908 ಅಂಕಗಳೊಂದಿಗೆ ನಂ.1 ಬೌಲರ್ ಆಗಿ ಮುಂದುವರಿದಿದ್ದಾರೆ.
ಆಸ್ಟ್ರೇಲಿಯ ಎದುರಿನ ಸಿಡ್ನಿ ಟೆಸ್ಟ್ ಪಂದ್ಯದ ವೇಳೆ ಬುಮ್ರಾ 907 ಅಂಕ ಗಳಿಸಿ ಭಾರತೀಯ ದಾಖಲೆ ಸ್ಥಾಪಿಸಿದ್ದರು. ಸಿಡ್ನಿ ಸಾಧನೆಗೆ ಒಂದಂಕ ಲಭಿಸಿತು. ದ್ವಿತೀಯ ಸರದಿಯಲ್ಲಿ ಬೌಲಿಂಗ್‌ಗೆ ಇಳಿಯದ ಕಾರಣ ಒಂದಷ್ಟು ಅಂಕ ಕೈತಪ್ಪಿತು.
ಇದೇ ವೇಳೆ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಒಂದು ಸ್ಥಾನ ಮೇಲೇರಿದ್ದು, ಸ್ಕಾಟ್ ಬೋಲ್ಯಾಂಡ್ ಅವರೊಂದಿಗೆ ಜಂಟಿ 9ನೇ ಸ್ಥಾನಿಯಾಗಿದ್ದಾರೆ (745). ಟಾಪ್-10 ಯಾದಿಯಲ್ಲಿರುವ ಭಾರತದ ಬೌಲರ್‌ಗಳೆಂದರೆ ಬುಮ್ರಾ ಮತ್ತು ಜಡೇಜ ಮಾತ್ರ. ಸರಣಿಯ ನಡುವೆ ನಿವೃತ್ತಿ ಘೋಷಿಸಿದ ಆರ್. ಅಶ್ವಿನ್ ರ್‍ಯಾಂಕಿಂಗ್ ಯಾದಿಯಿಂದ ಬೇರ್ಪಟ್ಟಿದ್ದಾರೆ.
ರಿಷಭ್ ಪಂತ್ ಪ್ರಗತಿ
ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಜೋ ರೂಟ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ (895). ಯಶಸ್ವಿ ಜೈಸ್ವಾಲ್ 847 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಸಿಡ್ನಿ ಟೆಸ್ಟ್ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ 61 ರನ್ ಬಾರಿಸಿದ ರಿಷಭ್ ಪಂತ್ ಟಾಪ್-10 ಯಾದಿಗೆ ಮರಳಿದ್ದಾರೆ. 3 ಸ್ಥಾನ ಮೇಲೇರಿದ ಪಂತ್ 9ನೇ ರ್‍ಯಾಂಕ್ ಗಳಿಸಿದ್ದಾರೆ (739).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Kinnigoli: ಕೃತಕ ನೆರೆ ಸಮಸ್ಯೆಗೆ ಪರಿಹಾರ
Mangaluru: ಗುಜ್ಜರಕೆರೆ ನೀರು ಬಳಕೆ ಯೋಗ್ಯವಲ್ಲ; ಪ್ರಯೋಗಾಲಯ ವರದಿಯಿಂದ ಮತ್ತೆ ಸಾಬೀತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.