ಫಿಕ್ಸಿಂಗ್: ಶಟ್ಲರ್‌ಗಳಿಗೆ ನಿಷೇಧ
Team Udayavani, May 3, 2018, 6:45 AM IST
ಕೌಲಾಲಂಪುರ: ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾದ ಮಲೇಶ್ಯದ ಇಬ್ಬರು ಶಟ್ಲರ್‌ಗಳಿಗೆ “ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್’ (ಬಿ.ಡಬ್ಲ್ಯು.ಎಫ್.) ಭಾರೀ ನಿಷೇಧ ಹೇರಿದೆ.
ಮಾಜಿ ಜೂನಿಯರ್ ವಿಶ್ವ ಚಾಂಪಿಯನ್ ಜುಲ್ಫಾದಿ ಜುಲ್ಕಿಫ್ಲಿ (25) ಅವರಿಗೆ 20 ವರ್ಷ ನಿಷೇಧ ಹಾಗೂ 25 ಸಾವಿರ ಡಾಲರ್ ಜುಲ್ಮಾನೆ ವಿಧಿಸಲಾಗಿದೆ. ಮತ್ತೂಬ್ಬ ಆಟಗಾರ, 31ರ ಹರೆಯದ ಟಾನ್ ಚುನ್ ಅವರಿಗೆ 15 ವರ್ಷ ನಿಷೇಧದ ಜತೆಗೆ 15 ಸಾವಿರ ಡಾಲರ್ ಮೊತ್ತದ ದಂಡ ಹೇರಲಾಗಿದೆ. ಇದರೊಂದಿಗೆ ಇವರಿಬ್ಬರ ಬ್ಯಾಡ್ಮಿಂಟನ್ ಕ್ರೀಡಾ ಬಾಳ್ವೆ ಬಹುತೇಕ ಕೊನೆಗೊಂಡಂತಾಗಿದೆ. ಕಳೆದ ಜ. 12ರಿಂದ ಈ ನಿಷೇಧ ಜಾರಿಗೆ ಬರಲಿದೆ.
ಇದು 2013ರ ಪ್ರಕರಣವಾಗಿದೆ. ಕೆಲವು ಪಂದ್ಯಾವಳಿಗಳಲ್ಲಿ ಬೆಟ್ಟಿಂಗ್, ಫಿಕ್ಸಿಂಗ್ ಸೇರಿದಂತೆ ಅನಪೇಕ್ಷಿತ ಫಲಿತಾಂಶಗಳಿಗೆ ಕಾರಣವಾದ ಆರೋಪ ಇವರ ಮೇಲಿದೆ. ಇವರನ್ನು ಕಳೆದ ಫೆಬ್ರವರಿಯಲ್ಲಿ ಬಿ.ಡಬ್ಲ್ಯು.ಎಫ್. ಶಿಸ್ತು ಸಮಿತಿ ವಿಚಾರಣೆ ನಡೆಸಿ ಆರೋಪವನ್ನು ಖಚಿತಪಡಿಸಿತ್ತು.
ಜೂ. ವಿಶ್ವ ಚಾಂಪಿಯನ್
ನಿಷೇಧಿತ ಆಟಗಾರರಿಬ್ಬರೂ ಈಗ ಮಲೇಶ್ಯ ಬ್ಯಾಡ್ಮಿಂಟನ್ ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದರೆ ಟಾನ್ ಚುನ್ 2010ರ ಥಾಮಸ್ ಕಪ್ ಪಂದ್ಯಾವಳಿಗಾಗಿ ಮಲೇಶ್ಯ ತಂಡದಲ್ಲಿ ಸ್ಥಾನ ಪಡೆದಿದ್ದರು. ಜುಲ್ಫಾದಿ 2011ರಲ್ಲಿ ಈಗಿನ ವಿಶ್ವ ಚಾಂಪಿಯನ್ ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಮಣಿಸಿ ಜೂನಿಯರ್ ವರ್ಲ್ಡ್ ಚಾಂಪಿಯನ್ ಕಿರೀಟ ಏರಿಸಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.