ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್: ಆಟ ಮುಗಿಸಿದ ಸೈನಾ, ಲಕ್ಷ್ಯ ಸೇನ್
Team Udayavani, Aug 25, 2022, 10:09 PM IST
ಟೋಕಿಯೊ: ಸ್ಟಾರ್ ಆಟಗಾರ್ತಿ ಪಿ.ವಿ. ಸಿಂಧು ಗೈರಲ್ಲಿ ಭಾರತದ ವನಿತಾ ವಿಭಾಗದ ಭರವಸೆಯಾಗಿದ್ದ ಸೈನಾ ನೆಹ್ವಾಲ್ “ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್’ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡು ಕೂಟದಿಂದ ಹೊರಬಿದ್ದರು. ಹಾಗೆಯೇ ಪುರುಷರ ವಿಭಾಗದ ನೆಚ್ಚಿನ ಆಟಗಾರ ಲಕ್ಷ್ಯ ಸೇನ್ “ಆಲ್ ಇಂಡಿಯನ್’ ಪಂದ್ಯವೊಂದರಲ್ಲಿ ಎಚ್.ಎಸ್. ಪ್ರಣಯ್ ವಿರುದ್ಧ ಸೋತು ಹೋದರು.
ಥಾಯ್ಲೆಂಡ್‌ನ ಬುಸನಾನ್ ಒಂಗ್ಬಾಮ್ರುಂಗಫನ್ ವಿರುದ್ಧ ಸೈನಾ 3 ಗೇಮ್‌ಗಳ ಹೋರಾಟ ನೀಡಿ ಶರಣಾದರು. ಅಂತರ 17-21, 21-16, 13-21. ಇದರೊಂದಿಗೆ ಸೈನಾ ವಿರುದ್ಧ ಥಾಯ್ ಆಟಗಾರ್ತಿಯ ಗೆಲುವಿನ ದಾಖಲೆ 5-3ಕ್ಕೆ ಏರಿತು.
ಆದರೆ ಭಾರತದ ಎರಡು ಪುರುಷರ ಜೋಡಿ ಕ್ವಾರ್ಟರ್ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಶ್ರೇಯಾಂಕ ರಹಿತ ಜೋಡಿಯಾದ ಎಂ.ಆರ್. ಅರ್ಜುನ್-ಧ್ರುವ ಕಪಿಲ 58 ನಿಮಿಷಗಳ ಹೋರಾಟದ ಬಳಿಕ ಸಿಂಗಾಪುರದ ಟೆರ್ರಿ ಹೀ-ಲೋಹ್ ಕೀನ್ ಹೀನ್ ವಿರುದ್ಧ 18-21, 21-15, 21-16 ಅಂತರದ ಗೆಲುವು ಸಾಧಿಸಿದರು. ಕ್ವಾರ್ಟರ್ ಫೈನಲ್‌ನಲ್ಲಿ ಇವರು ಇಂಡೋನೇಷ್ಯಾದ ತೃತೀಯ ಶ್ರೇಯಾಂಕದ ಮೊಹಮ್ಮದ್ ಅಹಸಾನ್-ಹೆಂಡ್ರ ಸೆತಿಯವಾನ್ ವಿರುದ್ಧ ಆಡುವರು.
ಅನಂತರ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಸೇರಿಕೊಂಡು ಡೆನ್ಮಾರ್ಕ್‌ನ ಜೆಪ್ಪ ಬೇ-ಲಸ್ಸೆ ಮೊಹೆಡ್ ಜೋಡಿಯನ್ನು 21-12, 21-10 ನೇರ ಗೇಮ್‌ಗಳಿಂದ ಮಣಿಸಿದರು. ಇವರ ಮುಂದಿನ ಎದುರಾಳಿ ಜಪಾನ್‌ನ ಟಕುರೊ ಹೋಕಿ-ಯುಗೊ ಕೊಬಯಾಶಿ.
ಸೇನ್ ವಿರುದ್ಧ ಗೆದ್ದ ಪ್ರಣಯ್
“ಆಲ್ ಇಂಡಿಯನ್’ ಪಂದ್ಯವೊಂದರಲ್ಲಿ ನೆಚ್ಚಿನ ಆಟಗಾರ ಲಕ್ಷ್ಯ ಸೇನ್ ಅವ ರನ್ನು ಪರಾಭವಗೊಳಿಸಿದ ಎಚ್.ಎಸ್. ಪ್ರಣಯ್ ಕ್ವಾರ್ಟರ್ ಫೈನಲ್ ತಲುಪಿ ದರು. 3 ಗೇಮ್‌ಗಳ ಈ ಕಾಳಗದಲ್ಲಿ ಪ್ರಣಯ್ 17-21, 21-16, 21-17 ಅಂತರದ ಮೇಲುಗೈ ಸಾಧಿಸಿದರು. ಈ ಪಂದ್ಯಕ್ಕೂ ಮುನ್ನ ಇಬ್ಬರೂ 2-2 ಗೆಲುವಿನ ದಾಖಲೆ ಹೊಂದಿದ್ದರು. ಪ್ರಣಯ್ ಅವರಿನ್ನು ಚೀನದ ಜಾವೊ ಜುನ್ ಪೆಂಗ್ ಅವರನ್ನು ಎದುರಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.