ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್: ಸಾತ್ವಿಕ್-ಚಿರಾಗ್ ಶೆಟ್ಟಿ; ಪದಕ ಗಟ್ಟಿ
ವಿಶ್ವ ಚಾಂಪಿಯನ್‌ಶಿಪ್ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ
Team Udayavani, Aug 27, 2022, 12:16 AM IST
ಟೋಕಿಯೊ: ಬಿಡಬ್ಲ್ಯುಎಫ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್‌ನಲ್ಲಿ ಭಾರತಕ್ಕೆ ಇದೇ ಮೊದಲ ಬಾರಿಗೆ ಪದಕವೊಂದು ಒಲಿದು ಬರಲಿದೆ. ಇದನ್ನು ಖಾತ್ರಿಗೊಳಿಸಿದವರು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿ. ಇವರಿಬ್ಬರೂ ಸೆಮಿಫೈನಲ್ ಪ್ರವೇಶಿಸುವ ಮೂಲಕ ಐತಿಹಾಸಿಕ ಸಾಧನೆಗೈದರು. ಆದರೆ ಪುರುಷರ ಸಿಂಗಲ್ಸ್‌ನಲ್ಲಿ ಎಡವಿದ ಎಚ್.ಎಸ್. ಪ್ರಣಯ್ ಪದಕದಿಂದ ವಂಚಿತರಾಗಬೇಕಾಯಿತು.
ಶುಕ್ರವಾರ ನಡೆದ ಜಿದ್ದಾಜಿದ್ದಿ ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ 7ನೇ ನಂಬರ್ ಜೋಡಿಯಾದ ಸಾತ್ವಿಕ್-ಚಿರಾಗ್ ಸೇರಿಕೊಂಡು ಜಪಾನ್‌ನ ಟಕುರೊ ಹೊಕಿ-ಯುಗೊ ಕೊಬಯಾಶಿ ಅವರನ್ನು 24-22, 15-21, 21-14 ಅಂತರದಿಂದ ಮಣಿಸಿದರು. ಒಂದು ಗಂಟೆ, 15 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು.
ಸಾತ್ವಿಕ್-ಚಿರಾಗ್ ಕಳೆದ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಇಲ್ಲಿಯೂ ದೊಡ್ಡ ಪದಕವೊಂದರ ನಿರೀಕ್ಷೆ ಇರಿಸಲಾಗಿದೆ. ಸೆಮಿಫೈನಲ್‌ನಲ್ಲಿ ಇವರ ಎದುರಾಳಿ ಮಲೇಷ್ಯಾದ ಆರನ್ ಚಿಯ-ಸೋಹ್ ವೂಯಿ ಯಿಕ್.
ಪ್ರಣಯ್‌ಗೆ ಸೋಲು
ಭಾರತದವರೇ ಆದ ಲಕ್ಷ್ಯ ಸೇನ್ ಅವರನ್ನು ಮಣಿಸಿ ಮುನ್ನಡೆದಿದ್ದ ಎಚ್.ಎಸ್. ಪ್ರಣಯ್ ಅವರ ಆಟ ಚೀನದ ಜಾವೊ ಜುನ್ ಪೆಂಗ್ ಮುಂದೆ ಸಾಗ ಲಿಲ್ಲ. ಪೆಂಗ್ 19-21, 21-6, 21-18 ರಿಂದ ಪ್ರಣಯ್ ಅವರನ್ನು ಪರಾಭವ ಗೊಳಿಸಿ ಸೆಮಿಫೈನಲ್ ತಲುಪಿದರು.
ಪುರುಷರ ಡಬಲ್ಸ್‌ನಲ್ಲಿ ಕಣದಲ್ಲಿದ್ದ ಭಾರತದ ಮತ್ತೊಂದು ಜೋಡಿ ಎಂ.ಆರ್. ಅರ್ಜುನ್-ಧ್ರುವ ಕಪಿಲ 3 ಬಾರಿಯ ಚಾಂಪಿಯನ್ ಮೊಹಮ್ಮದ್ ಅಹಸಾನ್-ಹೆಂಡ್ರಾ ಸೆತಿಯವಾನ್ ಕೈಯಲ್ಲಿ 8-21, 14-21 ಅಂತರದಿಂದ ಸೋತಿತು.
ಭಾರತ ಗೆದ್ದ
13ನೇ ಪದಕ
ಇದು ವಿಶ್ವ ಚಾಂಪಿಯನ್‌ಶಿಪ್ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ಒಲಿಯಲಿರುವ ದ್ವಿತೀಯ ಪದಕ. ಇದಕ್ಕೂ ಮುನ್ನ 2011ರ ವನಿತಾ ಡಬಲ್ಸ್‌ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಕಂಚಿನ ಪದಕ ತಂದಿತ್ತಿದ್ದರು.
ಒಟ್ಟಾರೆಯಾಗಿ ಈ ಕೂಟದಲ್ಲಿ ಭಾರತದ 13ನೇ ಪದಕ ಇದಾಗಲಿದೆ. ಇದರಲ್ಲಿ ಗರಿಷ್ಠ 5 ಪದಕಗಳನ್ನು ಗೆದ್ದ ಹಿರಿಮೆ ಪಿ.ವಿ. ಸಿಂಧು ಅವರದು. 2019ರಲ್ಲಿ ಅವರು ಬಂಗಾರದಿಂದ ಸಿಂಗಾರಗೊಂಡಿದ್ದರು. ಸೈನಾ ನೆಹ್ವಾಲ್ 2 ಪದಕ ಜಯಿಸಿದ್ದಾರೆ (ಬೆಳ್ಳಿ, ಕಂಚು). ಕೆ. ಶ್ರೀಕಾಂತ್ (ಬೆಳ್ಳಿ), ಪ್ರಕಾಶ್ ಪಡುಕೋಣೆ (ಕಂಚು), ಲಕ್ಷ್ಯ ಸೇನ್ (ಕಂಚು) ಮತ್ತು ಬಿ. ಸಾಯಿ ಪ್ರಣೀತ್ (ಕಂಚು) ಇತರ ಪದಕವೀರರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.