ಸಿಂಧು ಗೆಲುವಿನ ಓಟಕ್ಕೆ ಅಡೆತಡೆಯೇ ಇಲ್ಲ
Team Udayavani, Dec 16, 2017, 6:55 AM IST
ದುಬೈ: ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಭಾರತದ ಪಿ.ವಿ.ಸಿಂಧು ದುಬೈ ವಿಶ್ವ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಫೈನಲ್ ಕೂಟದಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. “ಎ’ ಗುಂಪಿನ ಅಂತಿಮ ಪಂದ್ಯದಲ್ಲಿಯೂ ಜಯ ಸಾಧಿಸಿದ ಸಿಂಧು ಗುಂಪಿನಲ್ಲಿ ಅಗ್ರಸ್ಥಾನದಲ್ಲಿಯೇ ಸೆಮಿಫೈನಲ್ಗೆ ಲಗ್ಗೆಹಾಕಿದ್ದಾರೆ.
ಸಿಂಧು ಈ ಪಂದ್ಯಕ್ಕೂ ಮುನ್ನವೇ ಸತತ 2 ಪಂದ್ಯದಲ್ಲಿ ಗೆದ್ದು ಸೆಮೀಸ್ ತಲುಪಿದ್ದರು. ಆದರೆ ಗುಂಪಿನ ಅಂತಿಮ ಪಂದ್ಯದಲ್ಲಿಯೂ ಗೆಲುವು ಪಡೆದು ಗುಂಪಿನಲ್ಲಿ ಒಟ್ಟು 3 ಅಂಕ ಸಂಪಾದಿಸಿ ಅಗ್ರಸ್ಥಾನದಲ್ಲಿಯೇ ಉಳಿದುಕೊಂಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಸಿಂಧು ಜಪಾನ್ನ ಯಮಗುಚಿ ವಿರುದ್ಧ 4-2ರ ಸೋಲು ಗೆಲುವಿನ ಅಂತರ ಹೊಂದಿದ್ದರು. ಗೆಲುವಿನ ನಂತರ ಈ ಅಂತರ 5-2ಕ್ಕೆ ಏರಿದೆ.
ಯಮಗುಚಿಗೆ ಆಘಾತ: ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ನಲ್ಲಿ ಸಿಂಧು 21-9, 21-13ರಿಂದ ಜಪಾನಿನ ಅಕಾನೆ ಯಮಗುಚಿ ವಿರುದ್ಧ ಜಯ ಸಾಧಿಸಿದರು. 36 ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ವಿಶ್ವ ನಂ.3ನೇ ಶ್ರೇಯಾಂಕಿತೆ ಸಿಂಧು ನೇರ ಸೆಟ್ನಲ್ಲಿಯೇ ಗೆಲುವು ಸಾಧಿಸಿದರು.
ಮೊದಲ ಗೇಮ್ನ ಆರಂಭದಲ್ಲಿಯೇ ಭರ್ಜರಿ ಪ್ರದರ್ಶನ ನೀಡಿದ ಸಿಂಧು ಭಾರೀ ಅಂತದಲ್ಲಿಯೇ ಮುನ್ನಡೆ ಪಡೆಯುತ್ತಾ ಸಾಗಿದರು. ಸಿಂಧು ಒಂದು ಹಂತದಲ್ಲಿ 5-0, ಮತ್ತೂಮ್ಮೆ 11-1ರಿಂದ ಮುನ್ನಡೆಯಲ್ಲಿದ್ದರು. ಅಂತಿಮವಾಗಿ ಸಿಂಧು 21-9ರಿಂದ ಗೆದ್ದು ಮೇಲುಗೈ ಸಾಧಿಸಿದರು.
ನಿರೀಕ್ಷೆ ಸುಳ್ಳಾಯಿತು: 2ನೇ ಗೇಮ್ನಲ್ಲಿ ವಿಶ್ವ ನಂ.2 ಶ್ರೇಯಾಂಕಿತೆ ಜಪಾನ್ ಆಟಗಾರ್ತಿ ತಿರುಗೇಟು ನೀಡುವ ನಿರೀಕ್ಷೆ ಇತ್ತು. ಆದರೆ ಸಿಂಧು ಅದ್ಯಾವುದಕ್ಕೂ ಅವಕಾಶ ನೀಡಲಿಲ್ಲ. ಆರಂಭದಲ್ಲಿ ಇಬ್ಬರ ನಡುವೆ ಸಮಬಲದ ಹೋರಾಟವಿತ್ತು. ಆದರೆ ಮತ್ತೆ ಚುರುಕುಕೊಂಡ ಸಿಂಧು ಪ್ರಬಲ ಸ್ಮ್ಯಾಷ್ಗಳನ್ನು ಸಿಡಿಸುವ ಮೂಲಕ ಎದುರಾಳಿ ಮೇಲೆ ದಾಳಿ ನಡೆಸಿದರು. ಯಾವುದೇ ಹಂತದಲ್ಲಿಯೂ ಎದುರಾಳಿಗೆ ಮುನ್ನಡೆ ಪಡೆಯಲು ಅವಕಾಶವನ್ನೇ ನೀಡಲಿಲ್ಲ. ಅಂತಿಮ ಹಂತದಲ್ಲಿ ನಿರಂತರ ವಾಗಿ ಅಕಾನೆ ಮೇಲೆ ಒತ್ತಡ ಹೇರಿದ ಯಮಗುಚಿ ಗೇಮನ್ನು ವಶಪಡಿಸಿಕೊಂಡು ಪಂದ್ಯವನ್ನೂ ಗೆದ್ದರು.
ಸೆಮೀಸ್ನಲ್ಲಿ ಚೆನ್ ಎದುರಾಳಿ: ಸಿಂಧುಗೆ ಇದು ಗುಂಪು ಹಂತದಲ್ಲಿ ಕೊನೆಯ ಪಂದ್ಯವಾಗಿತ್ತು. ಇದಕ್ಕೂ ಮುನ್ನ ಚೀನಾದ ಹಿ ಬಿಂಗ್ಜಿಯೊ, ಮತ್ತೂಂದು ಪಂದ್ಯದಲ್ಲಿ ಜಪಾನ್ನ ಸಾಯಕ ಸ್ಯಾಟೊ ವಿರುದ್ಧ ಗೆಲುವು ಪಡೆದಿದ್ದರು. ಎಲ್ಲಾ ಪಂದ್ಯದಲ್ಲಿಯೂ ನೇರ ಸೆಟ್ನಲ್ಲಿಯೇ ಜಯ ಸಾಧಿಸಿರುವುದು ವಿಶೇಷ. ಶನಿವಾರ ನಡೆಯಲಿರುವ ಸೆಮಿಫೈನಲ್ನಲ್ಲಿ ಸಿಂಧು ಚೀನಾದ ಚೆನ್ ಯುಫೈ ಸವಾಲನ್ನು ಎದುರಿಸಲಿದ್ದಾರೆ.
ಮೊದಲ ಬಾರಿ ದುಬೈ
ಓಪನ್ ಗೆಲ್ಲುವ ಗುರಿ
ಭಾರತದ ತಾರಾ ಆಟಗಾರ್ತಿ ಸಿಂಧು ಒಲಿಂಪಿಕ್ಸ್ ಬೆಳ್ಳಿ ಪದಕ ಸೇರಿದಂತೆ ವಿಶ್ವ ಮಟ್ಟದಲ್ಲಿ ಅನೇಕ ಮಹತ್ವದ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ ಈವರೆಗೂ ದುಬೈ ವಿಶ್ವ ಸೂಪರ್ ಸೀರೀಸ್ ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ಪ್ರಸಕ್ತ ಕೂಟದಲ್ಲಿ ಸಿಂಧು ಈ ಸಾಧನೆಯನ್ನು ಮಾಡುವ ಸಾಧ್ಯತೆ ಇದೆ.
ಸದ್ಯ ಸಿಂಧು ಭರ್ಜರಿ ಫಾರ್ಮ್ನಲ್ಲಿರುವುದರಿಂದ ಗುಂಪು ಹಂತದಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದಾರೆ. ಪ್ರಬಲ ಆಟಗಾರ್ತಿಯರಿಗೆ ಆಘಾತ ನೀಡಿದ್ದಾರೆ. ಎಲ್ಲಾ ಪಂದ್ಯದಲ್ಲಿಯೂ ನೇರ ಸೆಟ್ನಲ್ಲಿಯೇ ಗೆಲುವು ಸಾಧಿಸಿರುವುದು ವಿಶೇಷವಾಗಿದೆ.
ಗುಂಪು ಹಂತದಲ್ಲಿ ಅಗ್ರ ಸ್ಥಾನದಲ್ಲಿಯೇ ಸೆಮಿಫೈನಲ್ಗೆ ಲಗ್ಗೆ ಹಾಕಿದ ಸಿಂಧು ಚೀನಾದ ಚೆನ್ ಯುಫೈ ಸವಾಲು ಎದುರಿಸಲಿದ್ದಾರೆ. ಈ ಪಂದ್ಯವೂ ಕೂಡ ಸಿಂಧುಗೆ ಸುಲಭ ಜಯ ಆಗುವ ಸಾಧ್ಯತೆ ಇದೆ. ಯಾಕೆಂದರೆ ಈ ಹಿಂದೆ ಎದುರಾದ ಮುಖಾಮುಖೀಯಲ್ಲಿ ಸಿಂಧು ಚೀನಾ ಆಟಗಾರ್ತಿಯನ್ನು ಸೋಲಿಸಿದ್ದಾರೆ. ಈ ಎಲ್ಲಾ ದೃಷ್ಟಿಯಲ್ಲಿ ಸಿಂಧು ಮೊದಲ ಬಾರಿಗೆ ದುಬೈ ಸೂಪರ್ ಸೀರೀಸ್ ಪ್ರಶಸ್ತಿ ಗೆಲ್ಲುವ ಎಲ್ಲಾ ಸಾಧ್ಯಗಳು ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Pro Kabaddi League-11: ಇಂದು ಎಲಿಮಿನೇಟರ್ ಸ್ಪರ್ಧೆ ಸೋತವರು ಮನೆಗೆ, ಗೆದ್ದವರು ಸೆಮಿಗೆ
ICC : 904 ರೇಟಿಂಗ್ ಅಂಕ ನೂತನ ಎತ್ತರಕ್ಕೆ ಜಸ್ಪ್ರೀತ್ ಬುಮ್ರಾ
Vijay Hazare Trophy: ಇಂದು ರಾಜ್ಯಕ್ಕೆ ಪಂಜಾಬ್ ಎದುರಾಳಿ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.