ಸಿಂಧು, ಶ್ರೀಕಾಂತ್ ಗೆಲುವಿನ ಆರಂಭ
ವರ್ಲ್ಡ್ ಟೂರ್ ಬ್ಯಾಡ್ಮಿಂಟನ್ ಫೈನಲ್ಸ್
Team Udayavani, Dec 2, 2021, 5:00 AM IST
ಬಾಲಿ (ಇಂಡೋನೇಶ್ಯ): “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ‘ನಲ್ಲಿ ಪಿ.ವಿ. ಸಿಂಧು ಮತ್ತು ಕಿಡಂಬಿ ಶ್ರೀಕಾಂತ್ ಗೆಲುವಿನ ಆರಂಭ ಪಡೆದರು.
ಆರಂಭದಲ್ಲಿ ಕೆ. ಶ್ರೀಕಾಂತ್ ಫ್ರಾನ್ಸ್ನ ಟೋಮ ಪೊಪೋವ್ ಅವರನ್ನು ನೇರ ಗೇಮ್ಗಳಲ್ಲಿ ಮಣಿಸಿದರು. ಬಳಿಕ ಪಿ.ವಿ. ಸಿಂಧು ಡೆನ್ಮಾರ್ಕ್ನ ಲಿನ್ ಕ್ರಿಸ್ಟೋಫ್ಸೆನ್ ಅವರಿಗೆ ಆಘಾತವಿಕ್ಕಿದರು.
ಬುಧವಾರದ “ಬಿ’ ವಿಭಾಗದ 42 ನಿಮಿಷಗಳ ಕಾದಾಟದಲ್ಲಿ ಶ್ರೀಕಾಂತ್ 21-14, 21-16 ಅಂತರದಿಂದ ಪೊಪೋವ್ ಅವರನ್ನು ಪರಾಭವಗೊಳಿಸಿದರು.
ವಿಶ್ವದ ನಂ.33 ಆಟಗಾರನೆದುರು ವಿಶ್ವದ ಮಾಜಿ ನಂ.1 ಶಟ್ಲರ್ ಶ್ರೀಕಾಂತ್ ಎಚ್ಚರಿಕೆಯಿಂದಲೇ ಆಟ ಆರಂಭಿಸಿದರು. ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದರು. ದ್ವಿತೀಯ ಗೇಮ್ನ ಆರಂಭದಲ್ಲಿ 1-4ರ ಹಿನ್ನಡೆಯಲ್ಲಿದ್ದರೂ ಅಷ್ಟೇ ಬೇಗ ಲಯ ಸಾಧಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್
ಥಾಯ್ಲೆಂಡಿನ 3 ಬಾರಿಯ ಜೂನಿಯರ್ ವಿಶ್ವ ಚಾಂಪಿಯನ್ ವಿತಿದ್ಸರಣ್ ಅವರನ್ನು ಕೆ. ಶ್ರೀಕಾಂತ್ ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.
“ಎ’ ವಿಭಾಗದಲ್ಲಿ ಕಾಣಿಸಿಕೊಂಡಿರುವ ಪಿ.ವಿ. ಸಿಂಧು ಡೆನ್ಮಾರ್ಕ್ನ ಲಿನ್ ಕ್ರಿಸ್ಟೋಫ್ಸೆನ್ ಅವರನ್ನು 21-14, 21-16 ಅಂತರದಿಂದ ಪರಾಭವಗೊಳಿಸಿದರು. 2018ರ ಚಾಂಪಿಯನ್ ಆಗಿರುವ ಸಿಂಧು ಅವರ ಮುಂದಿನ ಎದುರಾಳಿ ಜರ್ಮನಿಯ ವ್ಯೋನ್ ಲೀ.
ಅಶ್ವಿನಿ-ಸಿಕ್ಕಿ ಪರಾಭವ
ವನಿತಾ ಡಬಲ್ಸ್ ವಿಭಾಗದ ಮೊದಲ ಪಂದ್ಯದಲ್ಲಿ ಅಶ್ವಿನಿ ಪೊನ್ನಪ್ಪ-ಎನ್. ಸಿಕ್ಕಿ ರೆಡ್ಡಿ ಪರಾಭವಗೊಂಡರು. “ಬಿ’ ವಿಭಾಗದ ಮುಖಾಮುಖೀಯಲ್ಲಿ ಭಾರತೀಯ ಜೋಡಿಯನ್ನು ಜಪಾನಿನ ದ್ವಿತೀಯ ಶ್ರೇಯಾಂಕಿತ ಜೋಡಿಯಾದ ನಾಮಿ ಮತ್ಸುಯಾಮಾ-ಚಿಹರು ಶಿದಾ 21-14, 21-18 ಅಂತರದಿಂದ ಹಿಮ್ಮೆಟ್ಟಿಸಿದರು. “ಎ’ ವಿಭಾಗದ ಪುರುಷರ ಡಬಲ್ಸ್ನ ಮೊದಲ ಪಂದ್ಯದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಅವರನ್ನು ಡೆನ್ಮಾರ್ಕ್ನ ಕಿಮ್ ಆ್ಯಸ್ಟ್ರಪ್-ಆ್ಯಂಡರ್ ರಾಸು¾ಸೆನ್ 21-16, 21-5 ಅಂತರದಿಂದ ಪರಾಭವಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.