ಯುನೈಟೆಡ್ ಕಪ್ ಟೆನಿಸ್ ಪಂದ್ಯಾವಳಿ: ರಫೆಲ್ ನಡಾಲ್‌ಗೆ ನೂರಿ ಆಘಾತ
Team Udayavani, Jan 1, 2023, 6:50 AM IST
ಬ್ರಿಸ್ಬೇನ್ : ಇದೇ ಮೊದಲ ಸಲ ಆಯೋಜನೆಗೊಂಡ “ಯುನೈಟೆಡ್ ಕಪ್’ ಟೆನಿಸ್ ಪಂದ್ಯಾವಳಿಯಲ್ಲಿ ರಫೆಲ್ ನಡಾಲ್ ಬ್ರಿಟನ್‌ನ ಕ್ಯಾಮರಾನ್ ನೂರಿ ಕೈಯಲ್ಲಿ ಸೋಲನುಭವಿಸಿದ್ದಾರೆ. ಇದರೊಂದಿಗೆ ಸ್ಪೇನ್ ವಿರುದ್ಧ ಬ್ರಿಟನ್ 1-0 ಮುನ್ನಡೆ ಸಾಧಿಸಿದೆ.
ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯಲ್ಲಿ 23ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸುವ ಯೋಜನೆಯಲ್ಲಿದ್ದ ರಫೆಲ್ ನಡಾಲ್‌ಗೆ ಈ ಸೋಲು ಭಾರೀ ಆಘಾತ ತಂದೊಡ್ಡಿದೆ. ನೂರಿ 3-6ರಿಂದ ಮೊದಲ ಸೆಟ್ ಕಳೆದುಕೊಂಡ ಬಳಿಕ 6-3, 6-4ರಿಂದ ಗೆದ್ದು ಬಂದರು.
ವನಿತಾ ವಿಭಾಗ
ವನಿತೆಯರ ಸ್ಪರ್ಧೆಯಲ್ಲಿ ನಂ.1 ಖ್ಯಾತಿಯ ಪೋಲೆಂಡ್‌ನ ಐಗಾ ಸ್ವಿಯಾಟೆಕ್ ಕಜಾಕ್‌ಸ್ಥಾನದ ಯುಲಿಯಾ ಪುಟಿನ್ಸೇವಾ ಅವರನ್ನು 6-1, 6-3ರಿಂದ ಮಣಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.