ಸಿನ್ಸಿನಾಟಿ ಓಪನ್ ಟೆನಿಸ್ : ಸಿಸಿಪಸ್- ಬೋರ್ನ ಕೊರಿಕ್ ಫೈನಲ್ ಕಾಳಗ
Team Udayavani, Aug 21, 2022, 10:33 PM IST
ಸಿನ್ಸಿನಾಟಿ: ವಿಶ್ವದ ನಂ.1 ಟೆನಿಸಿಗ ಡ್ಯಾನಿಲ್ ಮೆಡ್ವೆಡೇವ್ ಅವರಿಗೆ ಆಘಾತವಿಕ್ಕಿದ 4ನೇ ಶ್ರೇಯಾಂಕದ ಗ್ರೀಸ್ ಆಟಗಾರ ಸ್ಟೆಫನಸ್ ಸಿಸಿಪಸ್ “ಸಿನ್ಸಿನಾಟಿ ಓಪನ್’ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ಇವರ ಎದುರಾಳಿ ಕ್ರೊವೇಶಿಯಾದ ಬೋರ್ನ ಕೊರಿಕ್.
ತೀವ್ರ ಪೈಪೋಟಿಯಿಂದ ಕೂಡಿದ ಸೆಮಿಫೈನಲ್ ಸೆಣಸಾಟದಲ್ಲಿ ಸ್ಟೆಫನಸ್ ಸಿಸಿಪಸ್ 7-6 (6), 3-6, 6-3 ಅಂತರದಿಂದ ಮೆಡ್ವೆಡೇವ್ ವಿರುದ್ಧ ಮೇಲುಗೈ ಸಾಧಿಸಿದರು. ಮೊದಲ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ ಗೆದ್ದ ಸಿಸಿಪಸ್, ದ್ವಿತೀಯ ಸೆಟ್ ಕಳೆದುಕೊಂಡರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಗ್ರೀಕ್ ಆಟಗಾರನ ಕೈ ಮೇಲಾಯಿತು. ಇದು ಮೆಡ್ವೆಡೇವ್ ವಿರುದ್ಧ ಆಡಿದ 10 ಪಂದ್ಯಗಳಲ್ಲಿ ಸಿಸಿಪಸ್ ಸಾಧಿಸಿದ ಕೇವಲ ಮೂರನೇ ಗೆಲುವು. ಮೊದಲ ಸಿನ್ಸಿನಾಟಿ ಫೈನಲ್. ಹಾಗೆಯೇ ಈ ವರ್ಷದ 5ನೇ ಪ್ರಶಸ್ತಿ ಸೆಣಸಾಟ.
ಇನ್ನೊಂದೆಡೆ ಬೋರ್ನ ಕೊರಿಕ್ ಆಡುತ್ತಿರುವ 2ನೇ ಎಟಿಪಿ ಮಾಸ್ಟರ್-1000 ಫೈನಲ್. ಅವರಿಗೆ ಬ್ರಿಟನ್‌ನ ನಂ. 1 ಆಟಗಾರ ಕ್ಯಾಮರಾನ್ ನೂರಿ ಸುಲಭದಲ್ಲಿ ಶರಣಾದರು. ಕೊರಿಕ್ ಗೆಲುವಿನ ಅಂತರ 6-3, 6-4.
ಕ್ವಿಟೋವಾ ವರ್ಸಸ್ ಗಾರ್ಸಿಯಾ
ವನಿತಾ ಫೈನಲ್‌ನಲ್ಲಿ ಪೆಟ್ರಾ ಕ್ವಿಟೋವಾ ಮತ್ತು ಕ್ಯಾರೋಲಿನ್ ಗಾರ್ಸಿಯಾ ಎದುರಾಗಲಿದ್ದಾರೆ. ಇವರಲ್ಲಿ ಗಾರ್ಸಿಯಾ ಅರ್ಹತಾ ಸುತ್ತನ್ನು ಆಡಿಬಂದವರು. ಹಾಗೆಯೇ ಅರ್ಹತಾ ಸುತ್ತಿನ ಮೂಲಕ ಡಬ್ಲ್ಯುಟಿಎ-1000 ಕೂಟದ ಫೈನಲ್‌ಗೆ ಲಗ್ಗೆಯಿರಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಅವರಿಗೆ 2019ರ ಚಾಂಪಿಯನ್, ಅಮೆರಿಕದ ಮ್ಯಾಡಿಸನ್ ಕೀಸ್ ಪ್ರಬಲ ಸವಾಲೊಡ್ಡಿದರು. ಆದರೆ ಅಮೆರಿಕನ್ನಳಿಗೆ ಅದೃಷ್ಟ ಇರಲಿಲ್ಲ. ಕ್ವಿಟೋವಾ 6-7 (6), 6-4, 6-3ರಿಂದ ಗೆಲುವು ಸಾಧಿಸಿದರು. ಕ್ವಿಟೋವಾ ಸಿನ್ಸಿನಾಟಿಯಲ್ಲಿ ಫೈನಲ್ ಪ್ರವೇಶಿಸಿದ್ದು ಇದೇ ಮೊದಲು.
ಮಳೆಯಿಂದ ಎರಡು ಸಲ ಅಡಚಣೆಗೊಳಾದ ಮತ್ತೂಂದು ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ನ ಕ್ಯಾರೋಲಿನ್ ಗಾರ್ಸಿಯಾ 6-2, 4-6, 6-1ರಿಂದ ಬೆಲರೂಸ್‌ನ 6ನೇ ಶ್ರೇಯಾಂಕಿತ ಆಟಗಾರ್ತಿ ಅರಿನಾ ಸಬಲೆಂಕಾಗೆ ಸೋಲುಣಿಸಿದರು.
ಫೈನಲ್ ಹಾದಿಯಲ್ಲಿ ಕ್ಯಾರೋಲಿನ್ ಗಾರ್ಸಿಯಾ ಮೂರು ಮಂದಿ ಟಾಪ್-10 ಆಟಗಾರ್ತಿಯರನ್ನು ಮಣಿಸಿದ್ದರು. ಇವರಿಗೆ ಶರಣಾದವರೆಂದರೆ ಮರಿಯಾ ಸಕ್ಕರಿ (4), ಅರಿನಾ ಸಬಲೆಂಕಾ (7) ಮತ್ತು ಜೆಸ್ಸಿಕಾ ಪೆಗುಲಾ (8).
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.