RCB: ಇನ್ನೂ ಮೂರು ವರ್ಷ ಆಡಬಲ್ಲೆ, ಆದರೆ…: ನಿವೃತ್ತಿ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್
Team Udayavani, Jun 1, 2024, 12:15 PM IST
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾದ ದಿನೇಶ್ ಕಾರ್ತಿಕ್ ಅವರು ವೃತ್ತಿಪರ ಕ್ರಿಕೆಟ್ ಜೀವನಕ್ಕೆ ಅಂತ್ಯ ಹೇಳಿದ್ದಾರೆ. ಇತ್ತೀಚೆಗೆ ಮುಗಿದ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ಡಿಕೆ, ವಿದಾಯ ಹೇಳಿದ್ದಾರೆ.
ಈ ಬಾರಿಯು ಆರ್ ಸಿಬಿ ಪರ ಉತ್ತಮ ಆಟವಾಡಿದ್ದ ದಿನೇಶ್ ಕಾರ್ತಿಕ್, 187.36ರ ಸ್ಟ್ರೈಕ್ ರೇಟ್ ನಲ್ಲಿ 326 ರನ್ ಗಳಿಸಿದ್ದರು. ಸಂಕಷ್ಟದ ಸಮಯದಲ್ಲಿ ಬ್ಯಾಟ್ ಬೀಸಿದ್ದ ದಿನೇಶ್ ಕಾರ್ತಿಕ್ ಅವರು ಈ ಬಾರಿ ಆರ್ ಸಿಬಿ ಗ್ರೇಟ್ ಕಮ್ ಬ್ಯಾಕ್ ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ತಂಡವು ಮೊದಲ ಎಲಿಮಿನೇಟರ್ ನಲ್ಲಿ ಸೋಲು ಕಾಣುತ್ತಿದ್ದಂತೆ ಡಿಕೆ ಐಪಿಎಲ್ ಪ್ರಯಾಣ ಅಂತ್ಯವಾಗಿದೆ.
ಇದೀಗ ಕ್ರಿಕ್ ಬಜ್ ನಲ್ಲಿ ಮಾತನಾಡಿದ ಕಾರ್ತಿಕ್, ತಾನು ಇನ್ನೂ ಮೂರು ವರ್ಷ ಆಡುವಷ್ಟು ಫಿಟ್ ಆಗಿದ್ದೇನೆ ಎಂದು ಹೇಳಿದ್ದಾರೆ. ಆದರೆ ಮಾನಸಿಕ ಕಾರಣದಿಂದ ಅವರು ವಿದಾಯ ಹೇಳಲು ನಿರ್ಧರಿಸಿದರು ಎಂದು ದಿನೇಶ್ ಇದೇ ವೇಳೆ ಬಹಿರಂಗ ಪಡಿಸಿದರು.
“ನಾನು ಇನ್ನೂ ಮೂರು ವರ್ಷಗಳ ಕಾಲ ಆಡಲು ದೈಹಿಕವಾಗಿ ಸಿದ್ಧನಾಗಿದ್ದೇನೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಇಂಪ್ಯಾಕ್ಟ್ ಪ್ಲೇಯರ್ ನಿಯಮದಿಂದ ತುಂಬಾ ಸುಲಭವಾಗಿದೆ. ಆದ್ದರಿಂದ ಆಡುವ ವಿಷಯದಲ್ಲಿ, ನಾನು ಇನ್ನೊಂದು ಸೀಸನ್ ತಳ್ಳಬಹುದೆಂದು ನಾನು ಭಾವಿಸುತ್ತೇನೆ. ನನ್ನ ವೃತ್ತಿ ಜೀವನದಲ್ಲಿ ಹಲವಾರು ಸಮಸ್ಯೆಗಳಿಲ್ಲ, ಏಕೆಂದರೆ ನನ್ನ ಮೂರು ದಶಕಗಳಿಂದ ನಾನು ನನ್ನ ದೇಹ ಅಥವಾ ನನ್ನ ಫಿಟ್ನೆಸ್ ಬಗ್ಗೆ ಚಿಂತಿಸಲಿಲ್ಲ. ಆದರೆ ಎಲ್ಲವೂ ಇರುವುದು ಮಾನಸಿಕ ವಿಚಾರದ ಬಗ್ಗೆ” ಎಂದರು.
It’s a double birthday bash for our boys! 🎂🥳
Join us in wishing our Dependables Dinesh Karthik and Rajat Patidar the happiest of birthdays! 😎💯#PlayBold #ನಮ್ಮRCB pic.twitter.com/AnRV66L9pm
— Royal Challengers Bengaluru (@RCBTweets) June 1, 2024
ನಾನು ಏನು ಮಾಡಿದರೂ ನನ್ನ 100% ನೀಡಬೇಕು ಎಂದು ಬಯಸುವವನು, ಏನೇ ಮಾಡಿದರೂ ಅದರಲ್ಲಿ ಅತ್ಯುತ್ತಮವಾದುದನ್ನೇ ನೀಡಬೇಕು ಎಂದು ಬಯಸುತ್ತೇನೆ. ಇಲ್ಲಿಂದ ಒಂದಷ್ಟು ಪಂದ್ಯಗಳನ್ನು ಆಡುವುದು ಕಷ್ಟ ಎಂದು ನನಗನಿಸುತ್ತದೆ. ಎಲ್ಲವನ್ನೂ ಮುನ್ನಡೆಸುವ ವಿಷಯದಲ್ಲಿ ಮಾನಸಿಕವಾಗಿ ನನ್ನನ್ನು ಬಹಳ ಕಾಲ ತಳ್ಳುತ್ತಿದ್ದೇನೆ, ನಾನು ಸ್ವಲ್ಪ ಎಡವಿದ್ದರೂ ನಾನು ಆಗುವುದಿಲ್ಲ … ಹೊರಗಿನವರಿಗೆ ತಿಳಿದಿಲ್ಲದಿದ್ದರೂ, ಆಂತರಿಕವಾಗಿ ನಾನು ಅದನ್ನು ಕಂಡುಕೊಳ್ಳುತ್ತೇನೆ. ಇದು ನನಗೆ ಕಷ್ಟವಾಗಬಹುದು, ಮತ್ತೆ ಪಶ್ಷಾತಾಪ ಪಡಬೇಕಾಗಬಹುದು. ನಾನು ಅದನ್ನು ಬಯಸುವುದಿಲ್ಲ” ಎಂದು ಅವರು ಸೇರಿಸಿದರು.
“ಇದನ್ನೆಲ್ಲಾ ಪರಿಗಣಿಸಿಯೇ ನಾನು ನಿವೃತ್ತಿ ಹೊಂದಲು ಸರಿಯಾದ ಸಮಯ ಎಂದು ಭಾವಿಸಿದೆ. ಮುಖ್ಯ ವಿಚಾರವೆಂದರೆ ನಾನು ಏನೇ ಮಾಡಿದರೂ ಇನ್ನು ನಾನು ಭಾರತ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಿಲ್ಲ” ಎಂದು ದಿನೇಶ್ ಕಾರ್ತಿಕ್ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.