ಈ ಭಾರತೀಯ ಆಟಗಾರ ಏಷ್ಯಾಕಪ್ ನಲ್ಲಿ ದೊಡ್ಡ ಸ್ಕೋರ್ ಮಾಡಬಲ್ಲ: ರಶೀದ್ ಖಾನ್
ಇತ್ತೀಚೆಗಷ್ಟೇ ಐಸಿಸಿ ಟಿ-20 ರ‍್ಯಾಕಿಂಗ್ ನಲ್ಲಿ ನಂ.2 ಬ್ಯಾಟರ್ ಆಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ
Team Udayavani, Aug 27, 2022, 3:46 PM IST
ಯುಎಇ: ಏಷ್ಯಾಕಪ್ ಕ್ರಿಕೆಟ್ ಟೂರ್ನಮೆಂಟ್ ಇಂದಿನಿಂದ ಆರಂಭವಾಗಲಿದೆ. ಭಾರತ – ಪಾಕಿಸ್ತಾನದ ಹಣಾಹಣಿ ನಾಳೆ ( ಭಾನುವಾರ) ನಡೆಯಲಿದೆ. ಇಂದು ಶ್ರೀಲಂಕಾ – ಅಫ್ಘಾನಿಸ್ತಾನ ತಂಡಗಳ ಪಂದ್ಯ ನಡೆಯಲಿದೆ.
ಭಾರತ ತಂಡ ನಾಳೆ (ಭಾನುವಾರ) ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಅಫ್ಘಾನಿಸ್ತಾನದ ಸ್ಟಾರ್ ಆಲ್ ರೌಂಡರ್ ರಶೀದ್ ಖಾನ್, ಭಾರತೀಯ ಆಟಗಾರನೊಬ್ಬನ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ, ಆ ಆಟಗಾರ ಏಷ್ಯಾಕಪ್ ನಲ್ಲಿ ದೊಡ್ಡ ಸ್ಕೋರ್ ಮಾಡಬಹುದು ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಇತ್ತೀಚೆಗಷ್ಟೇ ಐಸಿಸಿ ಟಿ-20 ರ‍್ಯಾಕಿಂಗ್ ನಲ್ಲಿ ನಂ.2 ಬ್ಯಾಟರ್ ಆಗಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮೊದಲ ರ‍್ಯಾಕ್ ನಲ್ಲಿದ್ದಾರೆ.
ಪತ್ರಕರ್ತರೊಬ್ಬರ ಜೊತೆ ಮಾತಾನಾಡಿದ ರಶೀದ್ ಖಾನ್, ಸೂರ್ಯಕುಮಾರ್ ಅವರ ಬ್ಯಾಟಿಂಗ್ ಪ್ರತಿಭೆಗೆ ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ.
ಸೂರ್ಯಕುಮಾರ್ ಒಬ್ಬ ಧೈರ್ಯವಂತ ಆಟಗಾರ. ಐಪಿಎಲ್ ನಲ್ಲಿ ಅವರ ಬ್ಯಾಟಿಂಗ್ ಪ್ರತಿಭೆಯನ್ನು ಅವರು ತೋರಿಸಿದ್ದಾರೆ. ಯಾವಾಗಲೂ ಪಾಸಿಟಿವ್ ಆಗಿ ಕ್ರೀಸ್ ನಲ್ಲಿ ಬ್ಯಾಟ್ ಬೀಸುತ್ತಾರೆ. ಏಷ್ಯಾಕಪ್ ನಲ್ಲಿ ಅವರು ಹೆಚ್ಚು ಹಾಗೂ ದೊಡ್ಡ ಸ್ಕೋರ್ ಮಾಡಬಲ್ಲರು ಎಂದು ಹೇಳಿದ್ದಾರೆ.
ಐಪಿಎಲ್ ನಲ್ಲಿ ಅವರಿಗೆ ಬೌಲಿಂಗ್ ಮಾಡುವುದು ಕಠಿಣವಾಗಿತ್ತು. ಅದೊಂದು ಆರೋಗ್ಯಕರ ಸ್ಪರ್ಧೆಯಾಗಿತ್ತು ಎಂದು ರಶೀಶ್ ಖಾನ್ ಹೇಳಿದ್ದಾರೆ. ರಶೀದ್ ಖಾನ್ ಮಾತ್ರವಲ್ಲದೆ ಈ ಹಿಂದೆ ಆಸ್ಟ್ರೇಲಿಯಾದ ಮಾಜಿ ಕಪ್ತಾನ ರಿಕಿ ಪಾಟಿಂಗ್ ಸೂರ್ಯಕುಮಾರ್ ಪ್ರತಿಭೆಯನ್ನು ಹೊಗಳುತ್ತಾ, ಸೂರ್ಯಕುಮಾರ್ ಎಬಿ ಡಿವಿಲಿಯರ್ಸ್ ಹಾಗೆ 360 ಮಾದರಿಯಲ್ಲಿ ಬ್ಯಾಟ್ ಬೀಸುತ್ತಾರೆ ಎಂದು ಹೋಲಿಕೆ ಮಾಡಿದ್ದರು.
ವಾಸಿಂ ಅಕ್ರಂ ಕೂಡ, ಈ ಬಾರಿ ಏಷ್ಯಾ ಕಪ್ ನಲ್ಲಿ ಭಾರತ ತಂಡಕ್ಕೆ ನಿರ್ಣಾಯ ಹಾಗೂ ಇತರ ತಂಡಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಆಟಗಾರನೆಂದರೆ ಸೂರ್ಯಕುಮಾರ್ ಯಾದವ್ ಎಂದು ಶ್ಲಾಘಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
udupi: ಮಗನ ಅರಸುತ್ತಾ ಬಂದ ತಾಯಿ: ಇಬ್ಬರು ಮಕ್ಕಳ ಸಹಿತ ವೃದ್ಧೆಯ ರಕ್ಷಣೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.