Canadian Open: ಸಿನ್ನರ್, ಜೆಸ್ಸಿಕಾ ಪೆಗುಲಾಗೆ ಪ್ರಶಸ್ತಿ
Team Udayavani, Aug 14, 2023, 11:10 PM IST
ಟೊರೊಂಟೊ: ಇಟಲಿಯ ಏಳನೇ ಶ್ರೇಯಾಂಕದ ಜಾನ್ನಿಕ್ ಸಿನ್ನರ್ ಅವರು ಆಸ್ಟ್ರೇಲಿಯದ ಅಲೆಕ್ಸ್ ಡಿ ಮಿನೌರ್ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಕೆನಡಿಯನ್ ಓಪನ್ ಟೆನಿಸ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದು ಅವರ ಚೊಚ್ಚಲ ಮಾಸ್ಟರ್ 1000 ಕೂಟದ ಪ್ರಶಸ್ತಿಯಾಗಿದೆ.
ಮಾಸ್ಟರ್ 1000 ಕೂಟದಲ್ಲಿ ಮೂರನೇ ಬಾರಿ ಫೈನಲಿನಲ್ಲಿ ಆಡಿದ ಸಿನ್ನರ್ ಅಮೋಘವಾಗಿ ಆಡಿ 6-4, 6-1 ನೇರ ಸೆಟ್‌ಗಳಿಂದ ಮಿನೌರ್ ಅವರನ್ನು ಉರುಳಿಸಿ ಪ್ರಶಸ್ತಿ ಗೆದ್ದರು. ಅವರು ಈ ಹಿಂದೆ 2021 ಮತ್ತು ಈ ವರ್ಷ ಮಿಯಾಮಿ ಓಪನ್ ಕೂಟದ ಫೈನಲ್‌ಗೇರಿದ್ದು ರನ್ನರ್ ಅಪ್ ಸ್ಥಾನ ಪಡೆದಿದ್ದರು.
ಕಳೆದ ತಿಂಗಳು ವಿಂಬಲ್ಡನ್ ಕೂಟದಲ್ಲಿ ಸೆಮಿಫೈನಲ್ ತಲುಪಿದ್ದ 21ರ ಹರೆಯದ ಸಿನ್ನರ್ ಒತ್ತಡದ ಪರಿಸ್ಥಿತಿಯಲ್ಲಿಯೂ ತಾಳ್ಮೆಯ ಆಟದ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದರು.
ಜೆಸ್ಸಿಕಾ ಪೆಗುಲಾಗೆ ಪ್ರಶಸ್ತಿ
ವನಿತೆಯರ ಫೈನಲ್‌ನಲ್ಲಿ ಅಮೆ ರಿಕದ ಜೆಸ್ಸಿಕಾ ಪೆಗುಲಾ ಅವರು ರಷ್ಯಾದ ಲುಡ್ಮಿಲಾ ಸಾಮೊÕನೋವಾ ಅವರನ್ನು 6-1, 6-0 ನೇರ ಸೆಟ್‌ಗಳಿಂದ ಉರುಳಿಸಿ ಪ್ರಶಸ್ತಿ ಗೆದ್ದರು. ಇದು ಡಬ್ಲ್ಯುಟಿಎ ಟೂರ್‌ನಲ್ಲಿ ಅವರ ಬಾಳ್ವೆಯ ಮೂರನೇ ಪ್ರಶಸ್ತಿಯಾಗಿದೆ.
ನೀವು ಬಹಳಷ್ಟು ಪಂದ್ಯಗಳನ್ನು ಗೆದ್ದರೂ ಕೂಟದ ಪ್ರಶಸ್ತಿ ಗೆಲ್ಲುವದು ಅಪರೂಪ. ಹಾಗಾಗಿ ಪ್ರತಿಯೊಂದು ಕೂಟವೂ ಕಠಿನವಾಗಿ ಇರಲಿದೆ. ಈ ವಾರ ಇಲ್ಲಿ ಗೆದ್ದಿರುವುದು ಖುಷಿ ನೀಡಿದೆ ಮತ್ತು ಇದೇ ಉತ್ಸಾಹದಲ್ಲಿ ಮುಂದೆಯೂ ಆಡುವೆ ಎಂದು ಪೆಗುಲಾ ಹೇಳಿದ್ದಾರೆ.
ಫೈನಲ್ ಪಂದ್ಯ ಆಡುವುದ ಕ್ಕಿಂತ ಮೊದಲು ಸಾಮೊನೋವಾ ಅವರು ಸೆಮಿಫೈನಲ್‌ನಲ್ಲಿ ಕಝಾಕ್‌ಸ್ಥಾನದ ಎಲೆನಾ ರಿಬಕಿನಾ ಅವರನ್ನು 1-6, 6-1, 6-2 ಸೆಟ್‌ಗಳಿಂದ ಸೋಲಿಸಿದ್ದರು. ಮಳೆಯಿಂದಾಗಿ ಈ ಪಂದ್ಯ ಮುಂದೂಡಲ್ಪಟ್ಟಿದ್ದು ರವಾವರ ಬೆಳಗ್ಗೆ ಅಂತ್ಯಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.