ಭಾರತ ಕ್ರಿಕೆಟ್ ನಾಯಕತ್ವಕ್ಕಾಗಿ ನಡೆಯುತ್ತಿದೆಯೇ ಪೈಪೋಟಿ?
Team Udayavani, Nov 12, 2020, 4:49 PM IST
ಮುಂಬೈ: ಒಂದೆರಡು ವರ್ಷಗಳಿಂದ ಭಾರತ ತಂಡದಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದೆ ಎಂದು ಹೇಳಲಾಗಿದೆ. ಟಿ20 ತಂಡದ ನಾಯಕತ್ವ ವಹಿಸಿದ್ದಾಗಲೆಲ್ಲ ಯಶಸ್ವಿಯಾಗಿರುವ ರೋಹಿತ್, ಒಂದು ಸಂದರ್ಭದಲ್ಲಿ, ನನಗೂ ಧೋನಿಗೆ ಇರುವ ಹಾಗೆ ಶಾಂತ ಸ್ವಭಾವವಿದೆ. ನಾಯಕತ್ವ ಕೊಟ್ಟರೆ ನಿಭಾಯಿಸಲು ಸಿದ್ಧ ಎಂದಿದ್ದರು. ಅನಂತರ ಇಬ್ಬರ ನಡುವೆ ನಾಯಕತ್ವಕ್ಕಾಗಿ ಸಂಘರ್ಷವಿದೆ ಎಂಬ ಊಹೆಗಳಿವೆ.
ಇಷ್ಟರ ನಡುವೆ ರೋಹಿತ್ ರನ್ನು ಪ್ರಸ್ತುತ ಆಸ್ಟ್ರೇಲಿಯ ಪ್ರವಾಸದಿಂದ ಪೂರ್ಣ ಕೈಬಿಟ್ಟದ್ದರ ಬಗ್ಗೆ ಭಾರೀ ಆಕ್ರೋಶವೆದ್ದಿತ್ತು. ಅವರಿಗೆ ಗಾಯವಾಗಿದೆ ಎಂದು ಬಿಸಿಸಿಐ ಹೇಳಿದ್ದರೂ, ಮುಂಬೈ ಇಂಡಿಯನ್ಸ್ ವೆಬ್‌ಸೈಟ್‌ನಲ್ಲಿ ಅವರು ಸಲೀಸಾಗಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಪ್ರಕಟವಾಗಿತ್ತು! ಇದು ಭಾರೀ ಗೊಂದಲ ಮೂಡಿಸಿತ್ತು.
ನಾಲ್ಕು ಪಂದ್ಯಗಳ ನಂತರ ರೋಹಿತ್ ಮತ್ತೆ ಮುಂಬೈ ತಂಡಕ್ಕೆ ಮರಳಿ, ಫೈನಲ್‌ನಲ್ಲಿ ಅಮೋಘವಾಗಿಯೂ ಆಡಿದರು. ಅಷ್ಟಾಗಿಯೂ ಭಾರತ ತಂಡದ ಪರಿಷ್ಕೃತ ಪಟ್ಟಿಯಲ್ಲಿ, ರೋಹಿತ್ ಟೆಸ್ಟ್ ತಂಡದಲ್ಲಿ ಮಾತ್ರ ಸ್ಥಾನ ಪಡೆದಿದ್ದಾರೆ. ಇದು ಹಲವು ಪ್ರಶ್ನೆಗಳು, ಚರ್ಚೆಗಳಿಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ಸರಣಿಯ ನಿಗದಿತ ಓವರ್ ಪಂದ್ಯಗಳಲ್ಲಿ ರೋಹಿತ್ ಗೆ ಸ್ಥಾನ ಸಿಕ್ಕಿಲ್ಲವಾದ ಕಾರಣ ತಂಡದ ಉಪನಾಯಕನ ಜವಾಬ್ದಾರಿಯನ್ನು ಕೆ ಎಲ್ ರಾಹುಲ್ ಗೆ ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
INDvsNZ; ಗಿಲ್, ಪಂತ್, ವಾಷಿಂಗ್ಟನ್ ಬ್ಯಾಟಿಂಗ್ ನೆರವು; ಅಲ್ಪ ಮುನ್ನಡೆ ಸಾಧಿಸಿದ ಭಾರತ
IPL ಚಾಂಪಿಯನ್ ಕ್ಯಾಪ್ಟನ್ ಅಯ್ಯರ್ ನನ್ನು ಕೆಕೆಆರ್ ಕೈಬಿಟ್ಟಿದ್ಯಾಕೆ?: ಉತ್ತರಿಸಿದ ಸಿಇಒ
Hong Kong Sixes 2024: ಒಂದೇ ಓವರ್ ನಲ್ಲಿ 37 ರನ್ ಬಿಟ್ಟುಕೊಟ್ಟ ರಾಬಿನ್ ಉತ್ತಪ್ಪ
KKR: ಕೆಕೆಆರ್‌ಗೆ ಅಗರ್ತಲಾ ಮೈದಾನ 2ನೇ ತವರು ಅಂಗಳ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.