ವೋಜ್ನಿಯಾಕಿಗೆ ಪ್ರಶಸ್ತಿ
Team Udayavani, Sep 25, 2017, 11:57 AM IST
ಟೋಕಿಯೊ: ಕ್ಯಾರೋಲಿನ್ ವೋಜ್ನಿಯಾಕಿ ಅವರು ಫೈನಲ್ ಹೋರಾಟದಲ್ಲಿ ರಶ್ಯದ ಅನಾಸ್ತಾಸಿಯಾ ಪಾವ್ಲಿ ಚೆಂಕೋವಾ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಪಾನ್ ಪೆಸಿಫಿಸಕ್ ಓಪನ್ ಟೆನಿಸ್ ಕೂಟದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪ್ರಶಸ್ತಿ ಗೆಲ್ಲುವ ಮೂಲಕ ಅವರು ಫೈನಲ್ ಹಂತದಲ್ಲಿ ಸತತ ಸೋಲಿನ ಸರಮಾಲೆಗೆ ಅಂತ್ಯ ಹಾಡಿದ್ದಾರೆ.
ಮೂರನೇ ಶ್ರೇಯಾಂಕದ ಡೆನ್ಮಾರ್ಕ್‌ನ ವೋಜ್ನಿಯಾಕಿ 6-0, 7-5 ಸೆಟ್‌ಗಳಿಂದ ಗೆಲುವು ಸಾಧಿಸಿದರು. ಈ ಋತುವಿನಲ್ಲಿ ಏಳನೇ ಬಾರಿ ಫೈನಲ್‌ನಲ್ಲಿ ಆಡಿದ ಅವರು ಗೆಲುವಿನ ನಗೆ ಚೆಲ್ಲಿದರು. ಈ ಮೊದಲಿನ ಆರು ಫೈನಲ್‌ಗಳಲ್ಲಿ ಅವರು ಸೋತಿದ್ದರು. ಇದು ಅವರ ಬಾಳ್ವೆಯ 26ನೇ ಪ್ರಶಸ್ತಿಯಾಗಿದೆ. ಮೂರು ಅಥವಾ ಅದಕ್ಕಿಂತ ಹೆಚ್ಚಿನ ಬಾರಿ ಈ ಪ್ರಶಸ್ತಿ ಗೆದ್ದ ನಾಲ್ಕನೇ ಆಟಗಾರ್ತಿ ಎಂಬ ಗೌರವಕ್ಕೆ ವೋಜ್ನಿಯಾಕಿ ಪಾತ್ರರಾಗಿದ್ದಾರೆ.
ವೋಜ್ನಿಯಾಕಿ ಈ ಹಿಂದಿನ ಪಂದ್ಯದಲ್ಲಿ ವಿಶ್ವದ ನಂಬರ್ ವನ್ ಗಾರ್ಬಿನ್ ಮುಗುರುಜಾ ಅವರನ್ನು ಸೋಲಿಸಿದ್ದರೆ ಪಾವಿÉಚೆಂಕೋವಾ ಅವರು ಆ್ಯಂಜೆಲಿಕ್ ಕೆರ್ಬರ್ ಅವರನ್ನು ಉರುಳಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.