![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 21, 2019, 11:21 PM IST
ಕರಾಚಿ: ಪಾಕಿಸ್ಥಾನದ ಆರಂಭಕಾರ ಅಬಿದ್ ಅಲಿ ತಾನಾಡಿದ ಮೊದಲ ಎರಡೂ ಟೆಸ್ಟ್‌ಗಳಲ್ಲಿ ಶತಕ ಬಾರಿಸಿದ ಪಾಕಿಸ್ಥಾನದ ಮೊದಲ ಹಾಗೂ ವಿಶ್ವದ 9ನೇ ಕ್ರಿಕೆಟಿಗನೆಂಬ ದಾಖಲೆಗೆ ಪಾತ್ರರಾಗಿದ್ದಾರೆ. ಪ್ರವಾಸಿ ಶ್ರೀಲಂಕಾ ಎದುರಿನ ಕರಾಚಿ ಟೆಸ್ಟ್ ಪಂದ್ಯದ 3ನೇ ದಿನದಾಟದಲ್ಲಿ ಅವರು ಈ ಸಾಧನೆ ಮಾಡಿದರು.
ರಾವಲ್ಪಿಂಡಿಯ ಪದಾರ್ಪಣ ಟೆಸ್ಟ್ ಪಂದ್ಯದಲ್ಲಿ 109 ರನ್ ಬಾರಿಸಿದ ಅಬಿದ್ ಅಲಿ, ಕರಾಚಿ ಪಂದ್ಯದ ದ್ವಿತೀಯ ಇನ್ನಿಂಗ್ಸ್ ನಲ್ಲಿ 174 ರನ್ ಹೊಡೆದರು (281 ಎಸೆತ, 21 ಬೌಂಡರಿ, 1 ಸಿಕ್ಸರ್). ಮತ್ತೋರ್ವ ಆರಂಭಕಾರ ಶಾನ್ ಮಸೂದ್ 135 ರನ್ ಮಾಡಿದರು (198 ಎಸೆತ, 7 ಬೌಂಡಿ, 3 ಸಿಕ್ಸರ್). ಇವರಿಬ್ಬರ ಮೊದಲ ವಿಕೆಟ್ ಜತೆಯಾಟದಲ್ಲಿ 278 ರನ್ ಹರಿದು ಬಂತು. 3ನೇ ದಿನದಾಟ ಅಂತ್ಯಕ್ಕೆ ಪಾಕಿಸ್ಥಾನ 2 ವಿಕೆಟಿಗೆ 395 ರನ್ ಗಳಿಸಿದ್ದು, 315 ರನ್ನುಗಳ ಮುನ್ನಡೆಯಲ್ಲಿದೆ.
ಅಜರುದ್ದೀನ್ 3 ಶತಕ
ಭಾರತದ ಮೊಹಮ್ಮದ್ ಅಜರುದ್ದೀನ್ ತಮ್ಮ ಮೊದಲ 3 ಟೆಸ್ಟ್‌ಗಳಲ್ಲಿ ಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ್ದಾರೆ. 1984ರ ಇಂಗ್ಲೆಂಡ್ ಎದುರಿನ ತವರಿನ ಸರಣಿಗಳಲ್ಲಿ ಅವರು ಈ ಸಾಧನೆಗೈದಿದ್ದರು.
ಮೊದಲೆರಡು ಟೆಸ್ಟ್‌ಗಳಲ್ಲಿ ಶತಕ ಹೊಡೆದ ಇತರ ಕ್ರಿಕೆಟಿಗರೆಂದರೆ ಆಸ್ಟ್ರೇಲಿಯದ ವಿಲಿಯಂ ಪೋನ್ಸ್‌ಫೋರ್ಡ್, ಡಗ್ ವಾಲ್ಟರ್, ಗ್ರೆಗ್ ಬ್ಲೆವೆಟ್; ಭಾರತದ ಸೌರವ್ ಗಂಗೂಲಿ, ರೋಹಿತ್ ಶರ್ಮ; ವೆಸ್ಟ್ ಇಂಡೀಸಿನ ಅಲ್ವಿನ್ ಕಾಳೀಚರಣ್ ಮತ್ತು ನ್ಯೂಜಿಲ್ಯಾಂಡಿನ ಜಿಮ್ಮಿ ನೀಶಮ್.
ಸಂಕ್ಷಿಪ್ತ ಸ್ಕೋರ್: ಪಾಕಿಸ್ಥಾನ-191 ಮತ್ತು 2 ವಿಕೆಟಿಗೆ 395 (ಅಬಿದ್ ಅಲಿ 174, ಶಾನ್ ಮಸೂದ್ 135, ಲಹಿರು ಕುಮಾರ 88ಕ್ಕೆ 2). ಶ್ರೀಲಂಕಾ-271.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.