ಚಕ್ರವರ್ತಿ, ರಸೆಲ್ ದಾಳಿಗೆ ಆರ್‌ಸಿಬಿ ಕಂಗಾಲು
Team Udayavani, Sep 20, 2021, 10:53 PM IST
ಅಬುಧಾಬಿ: ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ಪೇಸ್ ಬೌಲರ್‌ಗಳಾದ ಆ್ಯಂಡ್ರೆ ರಸೆಲ್ ಮತ್ತು ಕಾಲಮ್ ಫರ್ಗ್ಯುಸನ್ ಅವರ ಬೌಲಿಂಗ್ ದಾಳಿಗೆ ಧೂಳೀಪಟಗೊಂಡ ರಾಯಲ್ ಚಾಲೆಂಜರ್ ಬೆಂಗಳೂರು, ಸೋಮವಾರದ ಕೋಲ್ಕತಾ ನೈಟ್‌ರೈಡರ್ ಎದುರಿನ ಪಂದ್ಯದಲ್ಲಿ 9 ವಿಕೆಟ್‌ಗಳ ಸೋಲಿಗೆ ತುತ್ತಾಗಿದೆ.
ನೀಲಿ ಜೆರ್ಸಿಯೊಂದಿಗೆ ಆಡಲಿಳಿದ ಆರ್‌ಸಿಬಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ A19 ಓವರ್‌ಗಳಲ್ಲಿ 92 ರನ್ನಿಗೆ ಸರ್ವಪತನ ಕಂಡಿತು. ಈ ಸುಲಭ ಸವಾಲನ್ನು ಬೆನ್ನಟ್ಟತೊಡಗಿದ ಕೆಕೆಆರ್ 10 ಓವರ್‌ಗಳಲ್ಲಿ ಒಂದು ವಿಕೆಟ್‌ನಷ್ಟಕ್ಕೆ 94 ರನ್ ಬಾರಿಸಿ ಗುರಿ ಮುಟ್ಟಿತು. ಮೊದಲ ಸುತ್ತಿನ ಸೋಲಿಗೆ ಸೇಡು ತೀರಿಸಿಕೊಂಡಿತು. ಕೆಕೆಆರ್ ಪರ ಆರಂಭಕಾರ ಶುಭಮನ್ ಗಿಲ್(48), ವೆಂಕಟೇಶ್ವರ್ ಅಯ್ಯರ್ ಅಜೇಯ 41 ರನ್ ಗಳಿಸಿದರು. ಆರ್‌ಸಿಬಿ ಪರ ಚಹಲ್ ಒಂದು ವಿಕೆಟ್ ಉರುಳಿಸಿದರು.
ಆರ್‌ಸಿಬಿ ಒಂದೊಂದು ರನ್ನಿಗಾಗಿ ಪರದಾಡುತ್ತ ಹೋಯಿತು. ನಾಯಕ ವಿರಾಟ್ ಕೊಹ್ಲಿ ಕೇವಲ 5 ರನ್ ಮಾಡಿ ದ್ವಿತೀಯ ಓವರ್‌ನಲ್ಲೇ ಪ್ರಸಿದ್ಧ್ ಕೃಷ್ಣ ಎಸೆತದಲ್ಲಿ ಲೆಗ್ ಬಿಫೋರ್ ಬಲೆಗೆ ಬಿದ್ದರು. ಅಲ್ಲಿಂದಲೇ ತಂಡದ ಕುಸಿತ ಮೊದಲ್ಗೊಂಡಿತು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ.
ಎಡಗೈ ಆಟಗಾರ ದೇವದತ್ತ ಪಡಿಕ್ಕಲ್ ಭರವಸೆ ಮೂಡಿಸಿದರೂ 22 ರನ್ (20 ಎಸೆತ, 3 ಬೌಂಡರಿ) ಮಾಡಿ ಫರ್ಗ್ಯುಸನ್ ಎಸೆತದಲ್ಲಿ ಕೀಪರ್ ಕಾರ್ತಿಕ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಗೆ ಪವರ್ ಪ್ಲೇ ಕೂಡ ಮುಗಿಯಿತು. ಈ ಅವಧಿಯಲ್ಲಿ ಆರ್‌ಸಿಬಿ ಆರಂಭಿಕರನ್ನು ಕಳೆದುಕೊಂಡು 41 ರನ್ ಮಾಡಿತ್ತು. ಆದರೆ ಪಡಿಕ್ಕಲ್ ಅವರದೇ ಆರ್‌ಸಿಬಿ ಸರದಿಯ ಸರ್ವಾಧಿಕ ವೈಯಕ್ತಿಕ ಗಳಿಕೆ ಆಗಲಿದೆ ಎಂದು ಯಾರೂ ಭಾವಿಸಿರಲಿಲ್ಲ.
ರಸೆಲ್, ಚಕ್ರವರ್ತಿ ಘಾತಕ:
9ನೇ ಓವರ್‌ನಲ್ಲಿ ಆ್ಯಂಡ್ರೆ ರಸೆಲ್ ಅವಳಿ ಆಘಾತವನ್ನಿಕ್ಕಿ ಆರ್‌ಸಿಬಿ ಸಂಕಟವನ್ನು ಬಿಗಡಾಯಿಸುವಂತೆ ಮಾಡಿದರು. ವನ್‌ಡೌನ್‌ನಲ್ಲಿ ಬಂದ ಕೀಪರ್ ಶ್ರೀಕರ್ ಭರತ್ (19 ಎಸೆತಗಳಿಂದ 16 ರನ್) ಡೀಪ್ ಮಿಡ್ ವಿಕೆಟ್ ಫೀಲ್ಡರ್ ಗಿಲ್‌ಗೆ ಕ್ಯಾಚ್ ನೀಡಿದರೆ, 4ನೇ ಎಸೆತದಲ್ಲಿ ಎಬಿ ಡಿ ವಿಲಿಯರ್ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. 52ಕ್ಕೆ 4 ವಿಕೆಟ್ ಬಿತ್ತು. ಆರ್‌ಸಿಬಿಯ ದೊಡ್ಡ ಮೊತ್ತದ ಕನಸು ಕಮರತೊಡಗಿತು.
ಬೆಂಗಳೂರು ತಂಡಕ್ಕೆ ಮತ್ತೂಂದು ಅವಳಿ ಆಘಾತವಿಕ್ಕಿದವರು ವರುಣ್ ಚಕ್ರವರ್ತಿ. 12ನೇ ಓವರ್‌ನ ಸತತ ಎಸೆತಗಳಲ್ಲಿ ಅವರು ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊದಲ ಐಪಿಎಲ್ ಪಂದ್ಯವಾಡಿದ ವನಿಂದು ಹಸರಂಗ ವಿಕೆಟ್ ಹಾರಿಸಿದರು. ಮ್ಯಾಕ್ಸ್‌ವೆಲ್ 10 ರನ್ನಿಗೆ 17 ರನ್ ಎಸೆತ ತೆಗೆದುಕೊಂಡರು. ಇದರಲ್ಲಿ ಒಂದೂ ಬೌಂಡರಿ ಶಾಟ್ ಇರಲಿಲ್ಲ. ಹಸರಂಗ ಮೊದಲ ಎಸೆತದಲ್ಲೇ ಎಲ್‌ಬಿಡಬ್ಲ್ಯು ಆದರು. ಕೈಲ್ ಜಾಮೀಸನ್ ಲೆಗ್ ಬಿಫೋರ್‌ನಿಂದ ಪಾರಾಗುವುದರೊಂದಿಗೆ ಚಕ್ರವರ್ತಿಗೆ ಹ್ಯಾಟ್ರಿಕ್ ತಪ್ಪಿತು.
ಚಕ್ರವರ್ತಿ ಬೇಟೆ ಇಲ್ಲಿಗೇ ಮುಗಿಯಲಿಲ್ಲ. ತಮ್ಮ ಮುಂದಿನ ಓವರ್‌ನಲ್ಲಿ ಸಚಿನ್ ಬೇಬಿಗೆ ಪೆವಿಲಿಯನ್ ಹಾದಿ ತೋರಿಸಿದರು. 17 ಎಸೆತ ಎದುರಿಸಿದ ಸಚಿನ್ ಗಳಿಸಿದ್ದು ಏಳೇ ರನ್. 15 ಓವರ್ ಮುಕ್ತಾಯಕ್ಕೆ ಆರ್‌ಸಿಬಿ 75ಕ್ಕೆ 7 ವಿಕೆಟ್ ಉದುರಿಸಿಕೊಂಡು ಒದ್ದಾಡುತ್ತಿತ್ತು. ಕೋಲ್ಕತಾ ಬೌಲರ್ ಸಂಪೂರ್ಣ ಮೇಲುಗೈ ಸಾಧಿಸಿದ್ದರು. ಚಕ್ರವರ್ತಿ 4 ಓವರ್‌ಗಳ ಕೋಟಾದಲ್ಲಿ ಕೇವಲ 13 ರನ್ ನೀಡಿ 3 ವಿಕೆಟ್ ಉರುಳಿಸಿದರು. ರಸೆಲ್ ಇದಕ್ಕಿಂತ ಉತ್ತಮ ಪ್ರದರ್ಶನ ನೀಡಿ 9 ರನ್ನಿಗೆ 3 ವಿಕೆಟ್ ಕೆಡವಿದರು.
ಆರ್‌ಸಿಬಿಯ 6ನೇ ಕನಿಷ್ಠ ಗಳಿಕೆ:
ಇದು ಐಪಿಎಲ್‌ನಲ್ಲಿ ದಾಖಲಾದ ಆರ್‌ಸಿಬಿಯ 6ನೇ ಕನಿಷ್ಠ ಮೊತ್ತ. ಈ ಆರರಲ್ಲಿ 3 ಕನಿಷ್ಠ ಸ್ಕೋರ್ ಕೆಕೆಆರ್ ವಿರುದ್ಧವೇ ದಾಖಲಾಗಿದೆ. ಈ ತಂಡದೆದುರಿನ ಹಿಂದಿನೆರಡು ಸಣ್ಣ ಮೊತ್ತವೆಂದರೆ, 2017ರ ಕೋಲ್ಕತಾ ಪಂದ್ಯದಲ್ಲಿ 49ಕ್ಕೆ ಕುಸಿದದ್ದು. ಇದು ಐಪಿಎಲ್‌ನಲ್ಲಿ ಬೆಂಗಳೂರು ತಂಡದ ಅತೀ ಕಡಿಮೆ ಸ್ಕೋರ್ ಕೂಡ ಆಗಿದೆ. ಇದಕ್ಕೂ ಮುನ್ನ 2008ರ ಬೆಂಗಳೂರು ಪಂದ್ಯದಲ್ಲಿ 82 ರನ್ನಿಗೆ ಸರ್ವಪತನ ಕಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.