ಚಾಂಪಿಯನ್ ವೆಸ್ಟ್ ಇಂಡೀಸ್ ಔಟ್
Team Udayavani, Jan 18, 2018, 12:46 PM IST
ಮೌಂಟ್ ಮಾಂಗನಿ: ದಕ್ಷಿಣ ಆಫ್ರಿಕಾ ವಿರುದ್ಧ 76 ರನ್ನುಗಳ ಸೋಲನುಭವಿಸಿದ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಕೂಟದಿಂದ ಹೊರಬಿದ್ದಿದೆ. ಇದು ವಿಂಡೀಸಿಗೆ ಎದುರಾದ ಸತತ 2ನೇ ಸೋಲು. “ಎ’ ವಿಭಾಗದಲ್ಲಿ ಸತತ 2 ಪಂದ್ಯಗಳನ್ನು ಗೆದ್ದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲ್ಯಾಂಡ್ ನಾಕೌಟ್ ಪ್ರವೇಶಿಸಿವೆ.
ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 8 ವಿಕೆಟಿಗೆ 282 ರನ್ ಪೇರಿಸಿದರೆ, ವೆಸ್ಟ್ ಇಂಡೀಸ್ 45.3 ಓವರ್‌ಗಳಲ್ಲಿ 206 ರನ್ನಿಗೆ ಕುಸಿಯಿತು. ವಿಜೇತ ತಂಡದ ಪರ ಕೀಪರ್ ಮ್ಯಾಕ್ವೆಟು ಅಜೇಯ 99 ರನ್ ಹೊಡೆದರೆ, ರಾಲ್ಫೆಸ್ 33 ರನ್ನಿತ್ತು 4 ವಿಕೆಟ್ ಉಡಾಯಿಸಿದರು. ಅಲಿಕ್ ಅತನೇಜ್ (76) ಮತ್ತು ಕರ್ಸ್ಟನ್ ಕಾಳೀಚರಣ್ (44) ಸೇರಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಹೋರಾಟವೊಂದನ್ನು ಸಂಘಟಿಸಿದರೂ ವಿಂಡೀಸಿಗೆ ಲಾಭವಾಗಲಿಲ್ಲ. ಕೊನೆಯ 6 ವಿಕೆಟ್‌ಗಳು 29 ರನ್ ಅಂತರದಲ್ಲಿ ಹಾರಿ ಹೋದವು!
ಅಫ್ಘಾನಿಸ್ಥಾನ ಗೆಲುವಿನ ಓಟ
ವಾಂಗರಿ: ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾ ವಳಿಯ “ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಪಾಕಿಸ್ಥಾನವನ್ನು ಮಣಿಸಿ ಸುದ್ದಿಯಾಗಿದ್ದ ಅಫ್ಘಾನಿಸ್ಥಾನ, ಬುಧವಾರದ ದ್ವಿತೀಯ ಮುಖಾಮುಖೀಯಲ್ಲಿ ಏಷ್ಯಾದ ಮತ್ತೂಂದು ಬಲಿಷ್ಠ ತಂಡವಾದ ಶ್ರೀಲಂಕಾವನ್ನು 32 ರನ್ನುಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ 7 ವಿಕೆಟಿಗೆ 284 ರನ್ನುಗಳ ಬೃಹತ್ ಮೊತ್ತ ಒಟ್ಟುಗೂಡಿಸಿದರೆ, ಶ್ರೀಲಂಕಾ ಚೇಸಿಂಗ್ ವೇಳೆ ಮಳೆ ಸುರಿಯಿತು. ಹೀಗಾಗಿ 38 ಓವರ್‌ಗಳಲ್ಲಿ 235 ರನ್ನುಗಳ ಗುರಿ ನಿಗದಿಗೊಳಿಸಲಾಯಿತು. ಆದರೆ ಕಮಿಂಡು ಮೆಂಡಿಸ್ ಪಡೆ 37.3 ಓವರ್‌ಗಳಲ್ಲಿ 202 ರನ್ನಿಗೆ ಆಲೌಟ್ ಆಯಿತು.
ಅಫ್ಘಾನ್ ಪರ ಇಬ್ರಾಹಿಂ ಜದ್ರಾನ್ 86, ದಾರ್ವಿಶ್ ರಸೂಲ್ 63, ಇಕ್ರಮ್ ಅಲಿ ಖೀಲ್ 55 ರನ್ ಬಾರಿಸಿದರು. ನವೀದ್ ಉಲ್ ಹಕ್ 4 ವಿಕೆಟ್ ಹಾರಿಸಿ ಲಂಕೆಗೆ ಕಂಟಕವಾಗಿ ಪರಿಣಮಿಸಿದರು.
ನ್ಯೂಜಿಲ್ಯಾಂಡ್ ಬೃಹತ್ ಮೊತ್ತ
ಕ್ರೈಸ್ಟ್‌ಚರ್ಚ್: ಕೀನ್ಯಾ ವಿರುದ್ಧ ನ್ಯೂಜಿಲ್ಯಾಂಡ್ 243 ರನ್ನುಗಳ ಪ್ರಚಂಡ ಜಯಭೇರಿ ಮೊಳಗಿಸಿದೆ. ಕಿವೀಸ್ 4 ವಿಕೆಟಿಗೆ 436 ರನ್ ಪೇರಿಸಿತು. ಇದು ಅಂಡರ್-19 ವಿಶ್ವಕಪ್ ಇತಿಹಾಸದ 2ನೇ ಸರ್ವಾಧಿಕ ಮೊತ್ತ. ಜವಾಬಿತ್ತ ಕೀನ್ಯಾ ಪೂರ್ತಿ 50 ಓವರ್ ಆಡಿ 4 ವಿಕೆಟಿಗೆ 193 ರನ್ ಗಳಿಸಿ ಶರಣಾಯಿತು. ನ್ಯೂಜಿಲ್ಯಾಂಡ್ ಪರ ಆರಂಭಿಕರಾದ ಜೇಕಬ್ ಭುಲ 180 ಹಾಗೂ ರಚಿನ್ ರವೀಂದ್ರ 117 ರನ್ ಹೊಡೆದರು. ನ್ಯೂಜಿಲ್ಯಾಂಡ್ ಎರಡೂ ಪಂದ್ಯಗಳನ್ನು ಗೆದ್ದಿದ್ದು, ನಾಕೌಟ್‌ಗೆ ಲಗ್ಗೆ ಇರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka Bypoll Results:ಮೂರು ಕ್ಷೇತ್ರಗಳಲ್ಲೂ “ಕೈ” ಮೇಲುಗೈ, ಬಿಜೆಪಿ ಮೈತ್ರಿಗೆ ಮುಖಭಂಗ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.