ಚಾಂಪಿಯನ್ಸ್‌ ಟ್ರೋಫಿ ಕಠಿನ: ವಿರಾಟ್‌ ಕೊಹ್ಲಿ


Team Udayavani, May 25, 2017, 12:33 PM IST

PTI5_2v.jpg

ಮುಂಬಯಿ: ಬಲಿಷ್ಠ ಎಂಟು ತಂಡಗಳ ನಡುವೆ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಎಲ್ಲ ರೀತಿಯಲ್ಲೂ ವಿಶ್ವಕಪ್‌ಗಿಂತಲೂ ಹೆಚ್ಚಿನ ಸ್ಪರ್ಧಾತ್ಮಕ ಹೋರಾಟದಿಂದ ಕೂಡಿರುತ್ತದೆ ಎಂದು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಕೂಟದ ಸ್ಪರ್ಧಾತ್ಮಕ ಹೋರಾಟವು ಪಂದ್ಯ ಆರಂಭವಾದ ತತ್‌ಕ್ಷಣವೇ ಇತರ ಕೂಟಗಳಿಗಿಂತ ಉನ್ನತ ಮಟ್ಟದಲ್ಲಿರುತ್ತದೆ. ವಿಶ್ವಕಪ್‌ನಲ್ಲಿ ಲೀಗ್‌ ಹಂತದಲ್ಲಿ ನಾವು ಪಂದ್ಯಗಳನ್ನು ಆಡುತ್ತೇವೆ ಮತ್ತು ಎರಡನೇ ಹಂತದಲ್ಲಿ ಹೋರಾಟ ತೀವ್ರಗೊಳ್ಳುತ್ತದೆ. ಆದರೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹಾಗಲ್ಲ. ಪಂದ್ಯ ಒಂದರಿಂದಲೇ ನಾವು ಶ್ರೇಷ್ಠ ಮಟ್ಟದ ಆಟ ನೀಡಬೇಕಾಗಿದೆ. ನಾವು ಅಂತಹ ನಿರ್ವಹಣೆ ನೀಡದಿದ್ದರೆ ಮುನ್ನಡೆಯುವ ನಮ್ಮ ಅವಕಾಶ ಕ್ಷೀಣಿಸುತ್ತದೆ ಎಂದು ಟೀಮ್‌ ಇಂಡಿಯಾ ಲಂಡನ್‌ಗೆ ತೆರಳುವ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಭಾರತವು ಜೂನ್‌ 4ರಂದು ಬರ್ಮಿಂಗಂನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದು ರಿಸಲಿದೆ. ತನ್ನ ತಂಡ ಹಾಲಿ ಚಾಂಪಿಯನ್‌ ಪಟ್ಟಕ್ಕೆ ಹೆಚ್ಚಿನ ಮಹತ್ವ ನೀಡದಿರಲು ಬಯಸಿದೆ ಮತ್ತು ಪ್ರತಿಯೊಂದು ಪಂದ್ಯ ಗೆಲ್ಲುವ ಕಡೆಗೆ ಗಮನ ಹರಿಸುತ್ತೇವೆ ಎಂದು ಕೊಹ್ಲಿ ವಿವರಿಸಿದರು.ನಾವು ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಎಂಬ ಅಲೋಚನೆ ಮಾಡ ದಿರುವುದೇ ನಮ್ಮ ಮೊದಲ ಸವಾಲು ಆಗಿದೆ. ಕಳೆದ ಸಲ ನಾವು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆಡಲು ಲಂಡನ್‌ಗೆ ಹೋದಾಗ (2013) ಯುವ ತಂಡವಾಗಿ ಆಡಿ ಸಂಭ್ರಮಿಸುವುದನ್ನು ಬಯಸಿದ್ದೆವು ಮತ್ತು ಅಂತಿಮವಾಗಿ ನಾವು ಕೂಟ ಜಯಿಸಿದೆವು ಎಂದು ಕೊಹ್ಲಿ ಹೇಳಿದರು.
 
2013ರಲ್ಲಿ ನಮ್ಮ ತಂಡ ಸಂಘಟಿತವಾಗಿ ಉತ್ತಮ ಸಾಧನೆಗೈದ ಕಾರಣ ಗೆಲುವು ಸಾಧಿಸಿದೆವು. ಹಾಲಿ ತಂಡದಲ್ಲಿ ಕೆಲವು ಬದಲಾವಣೆಗಳಿರಬಹುದು. ಆದರೆ ನಮ್ಮ ಮನಃಸ್ಥಿತಿಯಲ್ಲಿ ಯಾವುದೇ ಬದಲಾವಣೆ ಯಾಗಿಲ್ಲ. ಅಲ್ಲಿಗೆ ಹೋಗಿ ನಮ್ಮ ಕ್ರಿಕೆಟ್‌ ಆಟವನ್ನು ಆನಂದಿಸುವುದು ನಮ್ಮ ಯೋಜನೆ. ಅಂತಹ ಮನಃಸ್ಥಿತಿಯಿದ್ದರೆ ಉನ್ನತ ಹಂತಕ್ಕೆ ನಾವು ತಲುಪುವ ಸಾಧ್ಯತೆ ಯಿದೆ. ಗೆಲುವಿನ ಹಸಿವು ಮತ್ತು ಎಲ್ಲ ಮಾದರಿಯಲ್ಲೂ ಮೇಲುಗೈ ಸಾಧಿಸಲು ನಾವು ಬಯಸಿದ್ದೇವೆ ಎಂದು ಕೊಹ್ಲಿ ವಿವರಿಸಿದರು.

ತಂಡದಲ್ಲಿರುವ ಇಬ್ಬರು ಹಿರಿಯ ಆಟಗಾರರಾದ ಮಾಜಿ ನಾಯಕ ಎಂಎಸ್‌ ಧೋನಿ ಮತ್ತು ಆಕರ್ಷಕ ಶೈಲಿಯ ಯುವರಾಜ್‌ ಸಿಂಗ್‌ ಮುಕ್ತ ಮನಸ್ಸಿ ನಿಂದ ಆಡುವ ನಿರೀಕ್ಷೆಯನ್ನು ಕೊಹ್ಲಿ ಇಟ್ಟು ಕೊಂಡಿ ದ್ದಾರೆ. ಅವರಿಬ್ಬರು ಅಪಾರ ಅನುಭವ ಹೊಂದಿದವರು. ಮಧ್ಯಮ ಕ್ರಮಾಂಕದಲ್ಲಿ ಅವರಿಗೆ ಮುಕ್ತವಾಗಿ ಆಡಲು ಸ್ವಾತಂತ್ರ್ಯ ನೀಡಿದರೆ ತಂಡಕ್ಕೆ ಗೆಲುವು ಒದಗಿಸಿಕೊಡುವ ಅಥವಾ ಒಳ್ಳೆಯ ಜತೆಯಾಟ ಸಂಘಟಿಸುವ ಅಥವಾ ಕಠಿನ ಪರಿಸ್ಥಿತಿಯಲ್ಲೂ ಎದುರಾಳಿ ತಂಡವನ್ನು ಹೇಗೆ ಉರುಳಿಸುವ ಕುರಿತು ಅವರಿಗೆ ಒಳ್ಳೆಯ ಜ್ಞಾನವಿದೆ ಎಂದು ಕೊಹ್ಲಿ ತಿಳಿಸಿದರು.

ಅವರಿಬ್ಬರು ನಮ್ಮ ತಂಡದ ಬಲಿಷ್ಠ ಆಧಾರಸ್ತಂಭಗಳು ಮತ್ತು ಅದಕ್ಕಿಂತ ಮಿಗಿಲಾಗಿ ಒಳ್ಳೆಯ ಮನಃಸ್ಥಿತಿಯಲ್ಲಿ ಇರುವವರು. ಇದರಿಂದ ತಂಡಕ್ಕೆ ಲಾಭ ವಾಗಲಿದೆ ಎಂದು ಕೊಹ್ಲಿ ನುಡಿದರು. 2013ರ ಚಾಂಪಿಯನ್ಸ್‌ ಟ್ರೋಫಿಯಿಂದ ನಾವು ಪಡೆಯಲಿರುವ ದೊಡ್ಡ ಲಾಭವೆಂದರೆ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮ ಅವರ ಆರಂಭಿಕ ಜತೆಯಾಟವಾಗಿದೆ. ಅವರು ಪಂದ್ಯಕ್ಕೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟಿದ್ದಾರೆ. ಕಳೆದ ಚಾಂಪಿಯನ್ಸ್‌ ಟ್ರೋಫಿ ವೇಳೆ ರೋಹಿತ್‌ ಮತ್ತು ಧವನ್‌ ಅವರ ಯಶಸ್ವಿ ಆರಂಭಿಕ ಜೋಡಿಯಾಗಿದೆ. ಇದು ತಂಡಕ್ಕೆ ಮತ್ತು ಅಭಿಮಾನಿಗಳಿಗೆ ಖುಷಿ ನೀಡಿದೆ. ಅವರಿಬ್ಬರ ಉಪಸ್ಥಿತಿಯಿಂದ ಚಾಂಪಿಯನ್ಸ್‌ ಟ್ರೋಫಿ ಗೆಲ್ಲಲು ನಾವು ಪ್ರಯತ್ನಿಸಬಹುದಾಗಿದೆ. ಎರಡನೆಯದಾಗಿ ಅಶ್ವಿ‌ನ್‌ ಮತ್ತು ರವೀಂದ್ರ ಜಡೇಜ ಅತ್ಯುತ್ತಮ ಫಾರ್ಮ್ನಲ್ಲಿರುವುದು ಆಗಿದೆ. ಇದರ ಜತೆ ನಮ್ಮ ವೇಗಿಗಳ ನಿರ್ವಹಣೆ ಮತ್ತು ಫೀಲ್ಡಿಂಗ್‌ನಿಂದಾಗಿ ನಾವು 2013ರಲ್ಲಿ ಪ್ರಶಸ್ತಿ ಜಯಿಸಿದ್ದೆವು. ಅದೇ ಶಕ್ತಿಯೊಂದಿಗೆ ಹೋರಾಡಿ ಗೆಲ್ಲುವುದು ನಮ್ಮ ಯೋಜನೆಯಾಗಿದೆ ಎಂದು ಕೊಹ್ಲಿ ವಿವರಿಸಿದರು.

ವಿಶ್ವಕಪ್‌ನಲ್ಲಿ ಲೀಗ್‌ ಹಂತದಲ್ಲಿ ನಾವು ಪಂದ್ಯಗಳನ್ನು ಆಡುತ್ತೇವೆ ಮತ್ತು ಎರಡನೇ ಹಂತ ದಲ್ಲಿ ಹೋರಾಟ ತೀವ್ರ ಗೊಳ್ಳುತ್ತದೆ. ಆದರೆ ಚಾಂಪಿಯನ್ಸ್‌ ಟ್ರೋಫಿ ಯಲ್ಲಿ ಹಾಗಲ್ಲ. ಪಂದ್ಯ ಒಂದರಿಂದಲೇ ನಾವು ಶ್ರೇಷ್ಠ ಮಟ್ಟದ ಆಟ 
ನೀಡಬೇಕಾಗಿದೆ. 

– ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ 

ಟಾಪ್ ನ್ಯೂಸ್

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Hubli: Sri Shivlingeshwar Swamiji of Advisiddeswar Mutt passed away

Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Boxing legend Mike Tyson hints at retirement

Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್‌ ದಿಗ್ಗಜ ಮೈಕ್‌ ಟೈಸನ್

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

8

ಗಂಭೀರ್‌ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್‌ ಪೇನ್‌

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.