Champions Trophy 2025: ಇಂಗೆಂಡ್ ಸೇರಿ 8 ತಂಡಗಳಿಗೆ ಅರ್ಹತೆ
Team Udayavani, Nov 14, 2023, 11:56 AM IST
ಮುಂಬೈ: ಪ್ರಸ್ತುತ ಏಕದಿನ ವಿಶ್ವಕಪ್‌ನ ಲೀಗ್ ಹಂತದಲ್ಲಿ ಯಾವ ತಂಡಗಳು ಅಗ್ರ 8ರಲ್ಲಿ ಸ್ಥಾನ ಪಡೆಯುತ್ತವೆಯೋ, ಅವು ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುತ್ತವೆ ಎಂದು ಐಸಿಸಿ ಆರಂಭದಲ್ಲೇ ಘೋಷಿಸಿತ್ತು.
ಭಾರತ-ನೆದರ್ಲೆಂಡ್ಸ್ ನಡುವಿನ ಪಂದ್ಯದೊಂದಿಗೆ ಭಾನುವಾರ ವಿಶ್ವಕಪ್ ಲೀಗ್ ಹಂತ ಮುಗಿದಿದೆ. ಅಗ್ರಸ್ಥಾನ ಪಡೆದ ಭಾರತ, ದ್ವಿತೀಯಸ್ಥಾನಿ ದ.ಆಫ್ರಿಕಾ, ತೃತೀಯ ಸ್ಥಾನಿ ಆಸ್ಟ್ರೇಲಿಯ, ನಾಲ್ಕನೇ ಸ್ಥಾನಿ ನ್ಯೂಜಿಲೆಂಡ್, 5ನೇ ಸ್ಥಾನಿಯಾಗಿ ಪಾಕಿಸ್ತಾನ (ಆತಿಥೇಯ ತಂಡವಾಗಿ ಅದಕ್ಕೆ ಈಗಾಗಲೇ ಅರ್ಹತೆಯಿತ್ತು), 6ನೇ ಸ್ಥಾನಿಯಾಗಿ ಅಫ್ಘಾನಿಸ್ತಾನ, 7ನೇ ಸ್ಥಾನಿಯಾಗಿ ಇಂಗ್ಲೆಂಡ್, 8ನೇ ಸ್ಥಾನಿಯಾಗಿ ಬಾಂಗ್ಲಾದೇಶ ಅರ್ಹತೆ ಪಡೆದಿವೆ.
ವಸ್ತುಸ್ಥಿತಿಯಲ್ಲಿ ಇಂಗ್ಲೆಂಡ್ ಅತ್ಯಂತ ಪ್ರಬಲ ತಂಡವಾಗಿತ್ತು. ಆದರೆ ಈ ಬಾರಿ ಎಂತಹ ಕಳಪೆ ಪ್ರದರ್ಶನ ನೀಡಿತೆಂದರೆ, ಕೊನೆಯ ಸ್ಥಾನಕ್ಕೆ ಹೋಗಿತ್ತು. ಕಡೆಯಲ್ಲಿ ಎರಡು ಪಂದ್ಯಗಳನ್ನು ಸತತವಾಗಿ ಗೆದ್ದು 7ನೇ ಸ್ಥಾನಿಯಾಗಿ ಬಚಾವಾಯಿತು.
ಬಾಂಗ್ಲಾದೇಶದ್ದೂ ಇಲ್ಲಿ ಕಳಪೆ ಪ್ರದರ್ಶನ. ಅಚ್ಚರಿಯೆಂದರೆ ಅಫ್ಘಾನಿಸ್ತಾನ ಆಡಿದ ರೀತಿ, ಅದ್ಭುತವಾಗಿ ಆಡಿ ಚಾಂಪಿಯನ್ಸ್ ಲೀಗ್‌ಗೆ ನೇರ ಅರ್ಹತೆ ಪಡೆಯಿತು. ಶ್ರೀಲಂಕಾ ಮಾತ್ರ ಮತ್ತೆ ಅರ್ಹತಾ ಸುತ್ತಿನಲ್ಲಿ ಆಡುವ ಪರಿಸ್ಥಿತಿಗೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Afghanistan Cricketer: ಏಕದಿನ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಫ್ಘಾನ್ ಆಲ್ರೌಂಡರ್
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Pro Kabaddi 2024: ಗೆಲುವಿನ ಹಳಿ ಏರಿದ ದಬಾಂಗ್ ಡೆಲ್ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.