Asia Cup ; ಒಂದು ತಂಡಕ್ಕೆ ನಿಯಮ ಬದಲಾಯಿಸಿದರೆ ಕ್ರಿಕೆಟ್‌ಗೆ ಅಪಾಯ: ರಣತುಂಗ ಆಕ್ರೋಶ
ವೈಫಲ್ಯ ಎಂದು ಎಸಿಸಿ ಮತ್ತು ಐಸಿಸಿ ವಿರುದ್ಧ ಕಿಡಿ ಕಾರಿದ ಲಂಕಾ ಮಾಜಿ ನಾಯಕ
Team Udayavani, Sep 15, 2023, 7:56 PM IST
ಕೊಲಂಬೊ : ಭಾರತ ಮತ್ತು ಪಾಕಿಸ್ಥಾನ ನಡುವಿನ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯಕ್ಕೆ ಮಾತ್ರ ಮೀಸಲು ದಿನವನ್ನು ನಿಗದಿಪಡಿಸಿದ ನಿರ್ಧಾರವನ್ನು ಖಂಡಿಸಿ, ಒಂದು ತಂಡಕ್ಕೆ ಒಲವು ತೋರುವುದು ಕ್ರಿಕೆಟ್‌ಗೆ ಅಪಾಯವನ್ನುಂಟುಮಾಡುತ್ತದೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ ರಣತುಂಗ ಶುಕ್ರವಾರ ಆಕ್ರೋಶ ಹೊರ ಹಾಕಿದ್ದಾರೆ.
“ನೀವು ಏಷ್ಯಾ ಕಪ್ ತೆಗೆದುಕೊಳ್ಳಿ. ಪಂದ್ಯಾವಳಿಯ ಮೊದಲು ನೀವು ನಿಯಮಗಳನ್ನು ನೀಡಿದ್ದೀರಿ, ಆದರೆ ಅದಕ್ಕೂ ಮೊದಲು ಅವರು ನಿಯಮಗಳನ್ನು ಬದಲಾಯಿಸಿದರು. ಎಸಿಸಿ ಎಲ್ಲಿದೆ? ಐಸಿಸಿ ಎಲ್ಲಿದೆ?” ಎಂದು ರಣತುಂಗ ಆಯ್ದ ಮಾಧ್ಯಮಗಳೊಂದಿಗೆ ಸಂವಾದದ ಸಂದರ್ಭದಲ್ಲಿ ಕಿಡಿ ಕಾರಿದ್ದಾರೆ.
‘ಒಂದು ಅಥವಾ ಎರಡು ತಂಡಗಳಿಗೆ ಸರಿಹೊಂದುವಂತೆ ಪಂದ್ಯಾವಳಿಯ ನಿಯಮಗಳನ್ನು ಬದಲಾಯಿಸುವುದು ಆಟವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಭವಿಷ್ಯದಲ್ಲಿ ವಿಪತ್ತನ್ನು ನೋಡುತ್ತಿದ್ದೀರಿ’ ಎಂದು ICC ಮತ್ತು ACC ವಿರುದ್ಧ ಆಕ್ರೋಶ ಹೊರ ಹಾಕಿದರು.
ಕೊಲಂಬೊದಲ್ಲಿ ಭಾರತ -ಪಾಕ್ ಪಂದ್ಯಕ್ಕೆ ಮೀಸಲು ದಿನ ಕೊಟ್ಟಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕ್ರಮವು ಹಲವಾರು ಮಂದಿ ಪ್ರಶ್ನಿಸಿದ್ದು, ಪ್ರತಿಕೂಲ ಹವಾಮಾನವನ್ನು ಕಾರಣವೆಂದು ಪಟ್ಟಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.