ಚೆನ್ನೈ ಓಪನ್ ಟೆನಿಸ್ಇನ್ನು ಮಹಾರಾಷ್ಟ್ರ ಓಪನ್!
Team Udayavani, Jul 22, 2017, 10:26 AM IST
ಪುಣೆ: ಕಳೆದ 21 ವರ್ಷಗಳಿಂದ ಚೆನ್ನೈನಲ್ಲಿ ನಡೆಸಿಕೊಂಡು ಬರುತ್ತಿದ್ದ ಚೆನ್ನೈ ಓಪನ್ ಎಟಿಪಿ ಟೆನಿಸ್ ಕೂಟವನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಲಾಗಿದೆ. ಇನ್ನು ಮುಂದೆ ಮಹಾರಾಷ್ಟ್ರ ಓಪನ್ ಟೆನಿಸ್ ಕೂಟ ಎಂದು ಪರಿಷ್ಕೃತ ಹೆಸರಿನಲ್ಲಿ ಕೂಟ ನಡೆಯಲಿದೆ. ದೇಶದಲ್ಲೇ ಏಕೈಕ ಎಟಿಪಿ ಮಾನ್ಯತೆಯಿರುವ ಟೆನಿಸ್ ಕೂಟವೆಂದು ಕರೆಸಿಕೊಂಡಿರುವ ಚೆನ್ನೈ ಓಪನ್ ಸ್ಥಳಾಂತರಕ್ಕೆ ತಮಿಳುನಾಡಿನಲ್ಲಿ ಆಕ್ಷೇಪ ಕೇಳಿಬಂದಿದೆ.
ಪುಣೆಯಲ್ಲಿ 2018ರಿಂದ ಮಹಾರಾಷ್ಟ್ರ ಓಪನ್ ನಡೆಯಲಿದೆ. ಇದನ್ನು ಕೂಟದ ಸಂಘಟಕರಾದ ಐಎಂಜಿ-ರಿಲೈಯನ್ಸ್ ಹಾಗೂ ಮಹಾರಾಷ್ಟ್ರ ಲಾನ್ ಟೆನಿಸ್ ಸಂಸ್ಥೆ ಶುಕ್ರವಾರ ಘೋಷಿಸಿದವು. ವಿಶ್ವ ಮಟ್ಟದ ಕೂಟವನ್ನು ನಮ್ಮಲ್ಲಿ ಆಯೋಜಿಸುತ್ತಿರುವುದು ಹೆಮ್ಮೆಯ ವಿಷಯ. ಪ್ರತಿ ವರ್ಷವೂ ಹೊಸ ರೀತಿಯಲ್ಲಿ ಕೂಟವನ್ನು ನಡೆಸಿಕೊಂಡು ಹೋಗುವ ವಿಶ್ವಾಸವಿದೆ. ಚೆನ್ನೈ ಓಪನ್ ಕೂಟಕ್ಕೆ ಹೊಸ ದಿಕ್ಕು ನೀಡಿದ ತಮಿಳುನಾಡು ಸರ್ಕಾರಕ್ಕೆ, ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ
ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.