ಅಗ್ರಸ್ಥಾನಿ ಚೆನ್ನೈ ವಿರುದ್ಧ ಕೆಕೆಆರ್‌ಗೆ ಸೇಡಿನ ತವಕ


Team Udayavani, May 3, 2018, 7:30 AM IST

6.jpg

ಕೋಲ್ಕತಾ: ಅಗ್ರಸ್ಥಾನದೊಂದಿಗೆ ಮುನ್ನುಗ್ಗುತ್ತಿರುವ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌ ಪಡೆಗೆ ಗುರುವಾರ ಕೋಲ್ಕತಾದ “ಈಡನ್‌ ಗಾರ್ಡನ್ಸ್‌’ನಲ್ಲಿ ಅಗ್ನಿಪರೀಕ್ಷೆಯೊಂದು ಎದುರಾಗುವ ಸಾಧ್ಯತೆ ಇದೆ. ಅದು ಕೋಲ್ಕತಾ ನೈಟ್‌ರೈಡರ್ ವಿರುದ್ಧ ಮರು ಪಂದ್ಯವನ್ನು ಆಡಲಿದ್ದು, ಭಾರೀ ಹೋರಾಟವನ್ನು ನಿರೀಕ್ಷಿಸಲಾಗಿದೆ.

ಸದ್ಯ ಚೆನ್ನೈ 8 ಪಂದ್ಯ ಗಳಿಂದ 12 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಎಲ್ಲರಿಗಿಂತ ಮೇಲಿದೆ. ಇತ್ತ ಕೆಕೆಆರ್‌ 8ರಲ್ಲಿ  4ನ್ನು ಗೆದ್ದು 4ನೇ ಸ್ಥಾನದಲ್ಲಿ ಉಳಿದಿದೆ. ಇಲ್ಲಿಂದ ಮೇಲೇರಬೇಕಾದರೆ ಕೆಕೆಆರ್‌ ತವರಿನಂಗಳದ ಲಾಭವನ್ನು ಎತ್ತಬೇಕಾ ದುದು ಅನಿವಾರ್ಯ. ಇದೂ ಸೇರಿದಂತೆ ಕೆಕೆಆರ್‌ ಈಡನ್‌ನಲ್ಲಿ ಒಟ್ಟು 3 ಲೀಗ್‌ ಪಂದ್ಯಗಳನ್ನು ಆಡಲಿಕ್ಕಿದೆ. 

ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಅವರ ಭರ್ಜರಿ ಫಾರ್ಮ್  ಚೆನ್ನೈಗೆ ವರವಾಗಿ ಪರಿಣಮಿಸಿದೆ. ಆರ್‌ಸಿಬಿಯಲ್ಲಿರುವಾಗ ರನ್ನಿಗಾಗಿ ಚಡ ಪಡಿಸುತ್ತಿದ್ದ ವಾಟ್ಸನ್‌ ಪ್ರಸಕ್ತ ಋತುವಿನ ಸರ್ವಾ ಧಿಕ ವೈಯಕ್ತಿಕ ಗಳಿಕೆಯನ್ನು (106) ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಂಬಾಟಿ ರಾಯುಡು ಕೂಡ ಸಖತ್‌ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದು, 370 ರನ್‌ ಬಾರಿಸಿ ಅಗ್ರಸ್ಥಾನಿಯಾಗಿದ್ದಾರೆ; ಆರಂಭಿಕನಾಗಿಯೂ ಸೈ, ಮಧ್ಯಮ ಕ್ರಮಾಂಕಕ್ಕೂ ಸೈ ಎಂಬುದಾಗಿ ಸಾಧಿಸಿ ತೋರಿಸಿದ್ದಾರೆ. 

ಎರಡೂ ತಂಡಗಳು ತಮ್ಮ ಹಿಂದಿನ ಪಂದ್ಯವನ್ನು ಗೆದ್ದು ಹೆಚ್ಚಿನ ಆತ್ಮವಿಶ್ವಾಸ ಸಂಪಾದಿಸಿದ್ದನ್ನು ಮರೆಯುವಂತಿಲ್ಲ. ಕೆಕೆಆರ್‌ ಬೆಂಗಳೂರಿನಲ್ಲಿ ಆರ್‌ಸಿಬಿ ನೀಡಿದ 176 ರನ್‌ ಗುರಿಯನ್ನು ನಾಲ್ಕೇ ವಿಕೆಟ್‌ ನಷ್ಟದಲ್ಲಿ ಯಶಸ್ವಿಯಾಗಿ ಬೆನ್ನಟ್ಟಿತ್ತು. ಇತ್ತ ತನ್ನ 2ನೇ ತವರಾದ ಪುಣೆಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಡೆ ಡೆಲ್ಲಿಯನ್ನು 13 ರನ್ನುಗಳಿಂದ ಸೋಲಿಸಿತ್ತು. ವೇಗಿಗಳಾದ ಲುಂಗಿ ಎನ್‌ಗಿಡಿ ಮತ್ತು ಕೆ.ಎಂ. ಆಸಿಫ್ ಸೇರಿಕೊಂಡು ಮುನ್ನುಗ್ಗಿ ಬಂದ ಡೆಲ್ಲಿಗೆ ಲಗಾಮು ತೊಡಿಸುವಲ್ಲಿ ಯಶಸ್ವಿಯಾಗಿದ್ದರು. ಕೇರಳದ ಆಸಿಫ್ ಪಾಲಿಗೆ ಇದು ಮೊದಲ ಐಪಿಎಲ್‌ ಪಂದ್ಯವಾಗಿತ್ತು. 3 ಓವರ್‌ಗಳಿಂದ 43 ರನ್‌ ಸೋರಿಹೋದರೂ 2 ವಿಕೆಟ್‌ ಹಾರಿಸಿ ಗಮನ ಸೆಳೆದಿದ್ದರು. 

ಕಾರ್ತಿಕ್‌ಗೆ ಸವಾಲು
ಚೆನ್ನೈಯವರೇ ಆದ ಕೆಕೆಆರ್‌ ಕಪ್ತಾನ ದಿನೇಶ್‌ ಕಾರ್ತಿಕ್‌ ಚೆನ್ನೈ ಸವಾಲನ್ನು ಹೇಗೆ ಎದುರಿಸಲಿ ದ್ದಾರೆ ಎಂಬುದು ಈ ಪಂದ್ಯದ ಮತ್ತೂಂದು ಕುತೂಹಲ. ಚೆನ್ನೈಯಲ್ಲಿ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಕೆಕೆಆರ್‌ 6ಕ್ಕೆ 202 ರನ್‌ ಪೇರಿಸಿಯೂ ಸೋಲಿನ ಆಘಾತಕ್ಕೆ ಸಿಲುಕಿತ್ತು. ಚೆನ್ನೈ ಒಂದು ಎಸೆತ ಬಾಕಿ ಇರುವಂತೆಯೇ 5ಕ್ಕೆ 205 ರನ್‌ ಬಾರಿಸಿ ಅಮೋಘ ಜಯ ಸಾಧಿಸಿತ್ತು. 23 ಎಸೆತಗಳಿಂದ 56 ರನ್‌ ಬಾರಿಸಿದ ಸ್ಯಾಮ್‌ ಬಿಲ್ಲಿಂಗ್ಸ್‌ ಗೆಲುವಿನ ರೂವಾರಿಯಾಗಿದ್ದರು. ಈ ಸೋಲಿಗೆ ತವರಿನಲ್ಲಿ ಸೇಡು ತೀರಿಸಿಕೊಳ್ಳಬೇಕಾದ ಒತ್ತಡ ಕೋಲ್ಕತಾ ಮೇಲಿದೆ.

ಸ್ಪಿನ್ನರ್‌ಗಳು ಪ್ರಧಾನ ಪಾತ್ರ
ಲಿನ್‌, ಉತ್ತಪ್ಪ, ರಸೆಲ್‌, ಕಾರ್ತಿಕ್‌ ಅವರೆಲ್ಲ ಕೆಕೆಆರ್‌ನ ಬ್ಯಾಟಿಂಗ್‌ ಹುರಿಯಾಳಾಗಿದ್ದಾರೆ. ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳು ಪ್ರಧಾನ ಅಸ್ತ್ರವಾಗಿದ್ದಾರೆ. ಸುನೀಲ್‌ ನಾರಾಯಣ್‌, ಕುಲದೀಪ್‌ ಯಾದವ್‌, ಪೀಯೂಷ್‌ ಚಾವ್ಲಾ ಎಸೆತಗಳು ಈಡನ್‌ ಅಂಗಳದಲ್ಲಿ ಟರ್ನ್ ಪಡೆದದ್ದೇ ಆದಲ್ಲಿ ಚೆನ್ನೈ ಸಂಕಟಕ್ಕೆ ಸಿಲುಕುವುದರಲ್ಲಿ ಅನುಮಾನವೇ ಇಲ್ಲ.
ಕೆಕೆಆರ್‌ ತನ್ನ ಕೊನೆಯ ತವರು ಪಂದ್ಯವನ್ನು ಎ. 21ರಂದು ಪಂಜಾಬ್‌ ವಿರುದ್ಧ ಆಡಿತ್ತು. ಮಳೆಪೀಡಿತ ಈ ಪಂದ್ಯದಲ್ಲಿ ಡಿ-ಎಲ್‌ ನಿಯಮದಂತೆ 9 ವಿಕೆಟ್‌ಗಳಿಂದ ಕಳೆದುಕೊಂಡಿತ್ತು.

ಧೋನಿ ಕಪ್ತಾನನ ಆಟ
ಕೆಕೆಆರ್‌ ವಿರುದ್ಧ 12-7ರ ಗೆಲುವಿನ ದಾಖಲೆ ಹೊಂದಿರುವ ಚೆನ್ನೈ ಗುರುವಾರದ ಫೇವರಿಟ್‌ ತಂಡ ಎಂಬುದು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರ. ಹಾಗೆಯೇ ಸದ್ಯದ ಫಾರ್ಮ್ ಕಂಡಾಗ ಧೋನಿ ಪಡೆಯೇ ಒಂದು ತೂಕ ಮೇಲಿದೆ ಎನ್ನಲಡ್ಡಿಯಿಲ್ಲ. ಸ್ವತಃ ಧೋನಿ ಕಳೆದ 3 ಇನ್ನಿಂಗ್ಸ್‌ಗಳಲ್ಲಿ ಕಪ್ತಾನನ ಆಟ ಪ್ರದರ್ಶಿಸುತ್ತ ಬಂದಿರುವುದು ತಂಡದ ಬ್ಯಾಟಿಂಗ್‌ ಚಿಂತೆಯನ್ನು ದೂರಗೊಳಿಸಿದೆ. ಧೋನಿಯ ಹಿಂದಿನ 3 ಇನ್ನಿಂಗ್ಸ್‌ಗಳಲ್ಲಿ 2 ಅರ್ಧ ಶತಕಗಳಿದ್ದವು. ಆರ್‌ಸಿಬಿ ವಿರುದ್ಧ 34 ಎಸೆತಗಳಿಂದ ಅಜೇಯ 70 ರನ್‌ ಸಿಡಿಸಿ 206 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ್ದು ಧೋನಿಯ ತಾಜಾ ಸಾಹಸಕ್ಕೊಂದು ಉತ್ತಮ ನಿದರ್ಶನ.

ಟಾಪ್ ನ್ಯೂಸ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

ADGP V/s HDK: ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಎಫ್‌ ಐಆರ್‌ ದಾಖಲು-HDK ಎ1

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUDA Case: ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಸಿದ್ದರಾಮಯ್ಯ

MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ  ಪ್ರತಿಭಟನೆ

Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rwqeqwqw

BCCI ಕಾರ್ಯದರ್ಶಿಯಾಗಿ ರೋಹನ್‌ ಜೇಟ್ಲಿ?

1-frr

Ranji; ಕರ್ನಾಟಕ-ಬೆಂಗಾಲ್‌ ಪಂದ್ಯ ನಾಳೆಯಿಂದ: ತಂಡದಲ್ಲಿ ಶಮಿ ಇಲ್ಲ

IPL 2

IPL; ರಿಯಾದ್‌ನಲ್ಲಿ ಮಹಾ ಹರಾಜು?: 204 ಸ್ಥಾನಗಳಿಗೆ ಪೈಪೋಟಿ

ICC

ICC; ವನಿತಾ ಕ್ರಿಕೆಟ್‌ ಫ್ಯೂಚರ್‌ ಪ್ರವಾಸ ವೇಳಾಪಟ್ಟಿ ಪ್ರಕಟ

Hockey

National Hockey; ಕರ್ನಾಟಕಕ್ಕೆ ಜಯ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್‌

2(1)

Puttur: ವಿದ್ಯುತ್‌ ಕಂಬ ಏರುವ ತರಬೇತಿ!; ಪವರ್‌ಮನ್‌ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ

1(1)

Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Bhairathi Ranagal Trailer: ʼರೋಣಪುರʼದ ರಣ ಬೇಟೆಗಾರ ಈ ʼಭೈರತಿ ರಣಗಲ್ʼ; ಟ್ರೇಲರ್‌ ಔಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.