ಸುರೇಶ್ ರೈನಾ ಏಕೆ ಬೇಡವಾದರು? ಕಾರಣ ನೀಡಿದ ಚೆನ್ನೈ ಸಿಇಒ
Team Udayavani, Feb 15, 2022, 6:20 AM IST
ಚೆನ್ನೈ: ಮೆಗಾ ಹರಾಜಿನ ಅಚ್ಚರಿ ಹಾಗೂ ಆಘಾತಕಾರಿ ಸುದ್ದಿಯೆಂದರೆ, ಐಪಿಎಲ್ ಹೀರೋ ಸುರೇಶ್ ರೈನಾ “ಅನ್‌ಸೋಲ್ಡ್’ ಆದದ್ದು. ಎರಡು ಕೋಟಿ ರೂ. ಮೂಲ ಬೆಲೆಯ ಆಟಗಾರನನ್ನು ಚೆನ್ನೈ ಕೂಡ ಖರೀದಿಸಲು ಮುಂದಾಗಲಿಲ್ಲ. ಇದರೊಂದಿಗೆ ಅವರ ಐಪಿಎಲ್ ಜೈತ್ರಯಾತ್ರೆ ಬಹುತೇಕ ಕೊನೆಗೊಂಡಂತಾಗಿದೆ.
ಸುರೇಶ್ ರೈನಾ ಏಕೆ ಬೇಡವಾದರು ಎಂಬ ಕುರಿತು ಚೆನ್ನೈ ಸಿಇಒ ಕಾಶಿ ವಿಶ್ವನಾಥನ್ ಹೇಳಿಕೆಯೊಂದನ್ನು ನೀಡಿದ್ದಾರೆ. “ರೈನಾ ನಮ್ಮ ತಂಡದ ಅತ್ಯಂತ ಯಶಸ್ವಿ ಹಾಗೂ ಸ್ಥಿರ ಪ್ರದರ್ಶನ ನೀಡಿದ ಆಟಗಾರ. ಅವರನ್ನು ಖರೀದಿಸದಿದ್ದುದು ನಿಜಕ್ಕೂ ಒಂದು ಕಠಿನ ನಿರ್ಧಾರ. ಮೆಗಾ ಹರಾಜಿನ ವೇಳೆ ನಾವು ತಂಡದ ಸಂಯೋಜನೆ, ಆಟಗಾರರ ಫಾರ್ಮ್ ಹಾಗೂ ತಂಡವೊಂದು ಯಾವ ರೀತಿ ಇರಬೇಕೆಂಬ ಕುರಿತಾಗಿ ಕೈಗೊಂಡ ನಿರ್ಧಾರಗಳಿಗೆ ರೈನಾ ಹೊಂದಿಕೊಳ್ಳುತ್ತಿರಲಿಲ್ಲ’ ಎಂದು ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕಾರಣ ನೀಡಿದರು.
ಇದನ್ನೂ ಓದಿ:ಸೇಂಟ್ ಪೀಟರ್ಬರ್ಗ್ ಟೆನಿಸ್: ಕೊಂಟಾವೀಟ್ ಚಾಂಪಿಯನ್
ಐಪಿಎಲ್ ಇತಿಹಾಸದಲ್ಲಿ 5 ಸಾವಿರ ರನ್ ಪೇರಿಸಿದ ಮೊದಲ ಆಟಗಾರ, ಚೆನ್ನೈ ಪರ ಅತ್ಯಧಿಕ ರನ್, ಅತ್ಯಧಿಕ ಅರ್ಧ ಶತಕ, ಅತ್ಯಧಿಕ ಸಿಕ್ಸರ್ ಬಾರಿಸಿದ ಹೆಗ್ಗಳಿಕೆ ಸುರೇಶ್ ರೈನಾ ಅವರದು. ಆದರೆ ವೈಯಕ್ತಿಕ ಕಾರಣಗಳಿಂದ ಕಳೆದ ಯುಎಇ ಆವೃತ್ತಿಯನ್ನು ತ್ಯಜಿಸಿ ಭಾರತಕ್ಕೆ ವಾಪಸಾದ ಬಳಿಕ ರೈನಾ ಮೂಲೆಗುಂಪಾಗಬೇಕಾಯಿತು. ಜತೆಗೆ ಅವರ ಫಾರ್ಮ್ ಕೂಡ ಕೈಕೊಟ್ಟಿತ್ತು. ಪರಿಣಾಮ, ಅನ್‌ಸೋಲ್ಡ್!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.