ಚೆನ್ನೈ ಸೂಪರ್ ಕಿಂಗ್ಸ್‌ಗೆ 4 ರನ್ನುಗಳ ರೋಚಕ ಗೆಲುವು
Team Udayavani, Apr 23, 2018, 6:25 AM IST
ಹೈದರಾಬಾದ್: ಆಲ್‌ರೌಂಡ್ ಆಟದ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರವಿವಾರದ ಮೊದಲ ಪಂದ್ಯದಲ್ಲಿ ಸನ್‌ರೈಸರ್ ಹೈದರಾಬಾದ್ ತಂಡವನ್ನು 4 ರನ್ನುಗಳಿಂದ ರೋಚಕವಾಗಿ ಸೋಲಿಸಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಚೆನ್ನೈ ತಂಡವು ಆರಂಭಿಕ ಆಘಾತ ಅನುಭವಿಸಿದರೂ ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರ ಭರ್ಜರಿ ಬ್ಯಾಟಿಂಗ್‌ನಿಂದಾಗಿ 3 ವಿಕೆಟಿಗೆ 182 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಆಬಳಿಕ ಚೆನ್ನೈ ಬಿಗು ಬೌಲಿಂಗ್ ದಾಳಿ ಸಂಘಟಿಸಿದ್ದರಿಂದ ಹೈದರಾಬಾದ್ ತಂಡವು 6 ವಿಕೆಟಿಗೆ 178 ರನ್ ಪೇರಿಸಿ ನಾಲ್ಕು ರನ್ನಿನಿಂದ ಶರಣಾಯಿತು. ಈ ಗೆಲುವಿನಿಂದ ಚೆನ್ನೈ ತಾನಾಡಿದ ಐದು ಪಂದ್ಯಗಳಿಂದ ನಾಲ್ಕನೇ ಜಯ ಸಾಧಿಸಿ ಎಂಟು 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಪಂಜಾಬ್ ಕೂಡ ಎಂಟು ಅಂಕ ಹೊಂದಿದ್ದು ರನ್‌ಧಾರಣೆಯ ಆಧಾರದಲ್ಲಿ ದ್ವಿತೀಯ ಸ್ಥಾನದಲ್ಲಿದೆ.
ವಿಲಿಯಮ್ಸನ್ ಹೋರಾಟ
ಗೆಲ್ಲಲು ಕಠಿನ ಗುರಿ ಪಡೆದ ರಾಜಸ್ಥಾನ ತಂಡವು ಆರಂಭಿಕ ಆಘಾತ ಅನುಭವಿಸಿತು. 22 ರನ್ ತಲುಪುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡು ಒದ್ದಾಡುತ್ತಿತ್ತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಅವರ ಸಾಹಸದಿಂದ ತಂಡದ ಗೆಲ್ಲುವ ಪ್ರಯತ್ನ ಮುಂದುವರಿದಿತ್ತು. ಅವರಿಗೆ ಯೂಸುಫ್ ಪಠಾಣ್ ಉತ್ತಮ ಬೆಂಬಲ ನೀಡಿದರು. ಐದನೇ ವಿಕೆಟಿಗೆ ಅವರಿಬ್ಬರು 79 ರನ್ ಪೇರಿಸಿದ್ದರಿಂದ ತಂಡ ಗೆಲ್ಲುವ ಸಾಧ್ಯತೆ ತೆರೆದಿಟ್ಟಿತ್ತು. ಆದರೆ 18ನೇ ಓವರಿನಲ್ಲಿ 84 ರನ್ ಗಳಿಸಿದ ವಿಲಿಯಮ್ಸನ್ ಔಟಾಗುತ್ತಲೇ ತಂಡಕ್ಕೆ ಮತ್ತೆ ಹೊಡೆತ ಬಿತ್ತು. ಮುಂದಿನ ಓವರಿನಲ್ಲಿ ಯೂಸುಫ್ ಕೂಡ ಔಟಾದರು. ಅಂತಿಮ ಓವರಿನಲ್ಲಿ ರಶೀದ್ ಖಾನ್ ಸಿಕ್ಸರ್ ಸಿಡಿಸಿದರೂ ತಂಡಕ್ಕೆ ಗೆಲುವು ದೊರಕಿಸಿಕೊಡಲು ಸಾಧ್ಯವಾಗಲಿಲ್ಲ.
ವಾಟ್ಸನ್ ಸಿಡಿಯಲಿಲ್ಲ
ಈ ಹಿಂದಿನ ಪಂದ್ಯದಲ್ಲಿ ಶತಕ ಸಿಡಿಸಿದ್ದ ಶೇನ್ ವಾಟ್ಸನ್ ಇಲ್ಲಿ ಭುವನೇಶ್ವರ್ ದಾಳಿಯನ್ನು ಅಥೆìçಸಿಕೊಳ್ಳಲು ಅಸಮರ್ಥರಾದರು. 9 ರನ್ ಗಳಿಸಲು 15 ಎಸೆತ ತೆಗೆದುಕೊಂಡ ಅವರು ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿದರು. ಫಾ ಡು ಪ್ಲೆಸಿಸ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಪ್ಲೆಸಿಸ್ ಔಟಾಗುವ ತನಕ ತಂಡದ ರನ್‌ವೇಗವೂ ಸಾಧಾರಣ ಮಟ್ಟದಲ್ಲಿತ್ತು.
ರೈನಾ ಅವರನ್ನು ಸೇರಿಕೊಂಡ ಅಂಬಾಟಿ ರಾಯುಡು ಬಿರುಸಿನ ಆಟಕ್ಕೆ ಇಳಿದರು. ಹೈದರಬಾದ್ ದಾಳಿಯನ್ನು ದಂಡಿಸಲು ಮುಂದಾದರು. ಸುಮಾರು 9 ಓವರ್ ಆಡಿದ ಅವರಿಬ್ಬರು ಮೂರನೇ ವಿಕೆಟಿಗೆ 112 ರನ್ನುಗಳ ಜತೆಯಾಟ ನಡೆಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣದರು. ರೈನಾ ನಿಧಾನವಾಗಿ ಆಡಿದ್ದರೆ ರಾಯುಡು ಆಟ ಬಿರುಸಿನಿಂದ ಕೂಡಿತ್ತು. 79 ರನ್ ಗಳಿಸಿದ ವೇಳೆ ರಾಯುಡು ದುರದೃಷ್ಟವಶಾತ್ ರನೌಟ್ ಆಗಬೇಕಾಯಿತು. 37 ಎಸೆತ ಎದುರಿಸಿದ ಅವರು 9 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ್ದರು.
ರೈನಾ ಮತ್ತು ನಾಯಕ ಧೋನಿ ಎಂದಿನಂತೆ ಕೊನೆಹಂತದಲ್ಲಿ ಸಿಡಿದ ಕಾರಣ ಚೆನ್ನೈ ಮೊತ್ತ 182ರ ತನಕ ಬೆಳೆಯಿತು. ಧೋನಿ 12 ಎಸೆತಗಳಿಂದ 25 ರನ್ ಹೊಡೆದರೆ ರೈನಾ 43 ಎಸೆತಗಳಿಂದ 54 ರನ್ ಗಳಿಸಿ ಅಜೇಯರಾಗಿ ಉಳಿದರು.
ಸ್ಕೋರುಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್
ಶೇನ್ ವಾಟ್ಸನ್ ಸಿ ಹೂಡ ಬಿ ಕುಮಾರ್ 9
ಫಾ ಡು ಪ್ಲೆಸಿಸ್ ಸ್ಟಂಪ್ಡ್ ಸಾಹಾ ಬಿ ರಶೀದ್ 11
ಸುರೇಶ್ ರೈನಾ ಔಟಾಗದೆ 54
ಅಂಬಾಟಿ ರಾಯುಡು ರನೌಟ್ 79
ಎಂಎಸ್ ಧೋನಿ ಔಟಾಗದೆ 25
ಇತರ: 4
ಒಟ್ಟು (20 ಓವರ್‌ಗಳಲ್ಲಿ 3 ವಿಕೆಟಿಗೆ) 182
ವಿಕೆಟ್ ಪತನ: 1-14, 2- 32, 3-144
ಬೌಲಿಂಗ್:
ಭುವನೇಶ್ವರ್ ಕುಮಾರ್ 3-0-22-1
ಬಿಲ್ಲಿ ಸ್ಟಾನ್‌ಲೇಕ್ 4-0-38-0
ಶಕಿಬ್ ಅಲ್ ಹಸನ್ 4-0-32-0
ಸಿದ್ಧಾರ್ಥ್ ಕೌಲ್ 4-0-33-0
ರಶೀದ್ ಖಾನ್ 4-0-49-1
ದೀಪಕ್ ಹೂಡ 1-0-8-0
ಸನ್‌ರೈಸರ್ ಹೈದರಾಬಾದ್
ರಿಕಿ ಭುಯಿ ಸಿ ವಾಟ್ಸನ್ ಬಿ ಚಾಹರ್ 0
ಕೇನ್‌ವಿಲಿಯಮ್ಸನ್ ಸಿ ಜಡೇಜ ಬಿ ಬ್ರಾವೊ 84
ಮನೀಷ್ ಪಾಂಡೆ ಸಿ ಶರ್ಮ ಬಿ ಚಾಹರ್ 0
ದೀಪಕ್ ಹೂಡ ಸಿ ಜಡೇಜ ಬಿ ಚಾಹರ್ 1
ಶಕಿಬ್ ಅಲ್ ಹಸನ್ ಸಿ ರೈನಾ ಬಿ ಶರ್ಮ 24
ಯೂಸುಫ್ ಪಠಾಣ್ ಸಿ ರೈನಾ ಬಿ ಥಾಕುರ್ 45
ವೃದ್ಧಿಮಾನ್ ಸಾಹಾ ಔಟಾಗದೆ 5
ರಶೀದ್ ಖಾನ್ ಔಟಾಗದೆ 17
ಇತರ: 2
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ) 178
ವಿಕೆಟ್ ಪತನ: 1-0, 2-10, 3-22, 4-71, 5-150, 6-157
ಬೌಲಿಂಗ್:
ದೀಪಕ್ ಚಾಹರ್ 4-1-15-3
ಶಾದೂìಲ್ ಠಾಕುರ್ 4-0-45-1
ಶೇನ್ ವಾಟ್ಸನ್ 2-0-23-0
ರವೀಂದ್ರ ಜಡೇಜ 4-0-28-0
ಕಣ್ì ಶರ್ಮ 3-0-30-1
ಡ್ವೇನ್ ಬ್ರಾವೊ 3-0-37-1
ಪಂದ್ಯಶ್ರೇಷ್ಠ: ದೀಪಕ್ ಚಾಹರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.