IPL 2020 : ಕೊಲ್ಕತ್ತಾ – ಚೆನ್ನೈ ಮುಖಾಮುಖಿ : ಕೆಕೆಆರ್‌ಗೆ ಕಂಟಕವಾಗಿ ಪರಿಣಮಿಸಿದ ಚೆನ್ನೈ
Team Udayavani, Oct 29, 2020, 11:08 PM IST
ದುಬಾೖ: ಪ್ರಸಕ್ತ ಸಾಲಿನ ಮತ್ತೂಂದು ರೋಚಕ ಪಂದ್ಯಕ್ಕೆ ಸಾಕ್ಷಿಯಾದ ಗುರುವಾರದ ಐಪಿಎಲ್ ಮೇಲಾಟದಲ್ಲಿ ಕೋಲ್ಕತಾವನ್ನು 6 ವಿಕೆಟ್‌ಗಳಿಂದ ಮಣಿಸಿದ ಚೆನ್ನೈ ತಾನಿನ್ನೂ ಕೂಟದಿಂದ ಅಧಿಕೃತವಾಗಿ ನಿರ್ಗಮಿಸಿಲ್ಲ ಎಂದು ಸಾರಿದೆ. ಮುನ್ನಡೆಯ ಕನಸು ಕಾಣುತ್ತಿದ್ದ ಕೆಕೆಆರ್‌ಗೆ ಈ ಸೋಲಿನಿಂದ ತೀವ್ರ ಆಘಾತವಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ ಎಡಗೈ ಆರಂಭಕಾರ ನಿತೀಶ್ ರಾಣಾ ಅವರ ಜಬರ್ದಸ್ತ್ ಬ್ಯಾಟಿಂಗ್ ಸಾಹಸದಿಂದ 5 ವಿಕೆಟಿಗೆ 172 ರನ್ ಬಾರಿಸಿ ಸವಾಲೊಡ್ಡಿದರೆ, ಚೆನ್ನೈ ಋತುರಾಜ್ ಗಾಯಕ್ವಾಡ್ ಮತ್ತು ರವೀಂದ್ರ ಜಡೇಜ ಸಾಹಸದಿಂದ ಭರ್ತಿ 20 ಓವರ್‌ಗಳಲ್ಲಿ 4ಕ್ಕೆ 178 ರನ್ ಬಾರಿಸಿ ಸಂಭ್ರಮಿಸಿತು. ಕಮಲೇಶ್ ನಾಗರಕೋಟಿ ಪಾಲಾದ ಅಂತಿಮ ಓವರಿನಲ್ಲಿ ಜಡೇಜ ಸಿಡಿಲಾಗಿ ಎರಗಿದರು. ಅಂತಿಮ 2 ಎಸೆತಗಳನ್ನು ಸಿಕ್ಸರ್‌ಗೆ ಬಡಿದಟ್ಟಿ ಚೆನ್ನೈ ಜಯವನ್ನು ಸಾರಿದರು. ಜಡೇಜ ಕೇವಲ 11 ಎಸೆತಗಳಿಂದ 31 ರನ್ ಬಾರಿಸಿ ಅಜೇಯರಾಗಿ ಉಳಿದರು. ಈ ಮ್ಯಾಚ್ ವಿನ್ನಿಂಗ್ ಬ್ಯಾಟಿಂಗ್‌ನಲ್ಲಿ 3 ಸಿಕ್ಸರ್, 2 ಬೌಂಡರಿ ಒಳಗೊಂಡಿತ್ತು. ಆರಂಭಕಾರ ಗಾಯಕ್ವಾಡ್ 18ನೇ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿ 53 ಎಸೆತಗಳಿಂದ 72 ರನ್ ಬಾರಿಸಿದರು (6 ಬೌಂಡರಿ, 2 ಸಿಕ್ಸರ್). ರಾಯುಡು 38 ರನ್ ಕೊಡುಗೆ ಸಲ್ಲಿಸಿದರು.
ಕೆಕೆಆರ್ ಪರ ರಾಣಾ 87 ರನ್ ಬಾರಿಸಿ ತಮ್ಮ ಪ್ರತಾಪ ಮೆರೆದರು. 18ನೇ ಓವರ್ ವರೆಗೆ ಬ್ಯಾಟಿಂಗ್ ವಿಸ್ತರಿಸಿದ ಅವರು 61 ಎಸೆತಗಳಿಂದ ಈ ಇನ್ನಿಂಗ್ಸ್ ಕಟ್ಟಿದರು. 10 ಫೋರ್, 4 ಸಿಕ್ಸರ್ ಸಿಡಿಸಿ ಚೆನ್ನೈ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. ಇದು ಐಪಿಎಲ್‌ನಲ್ಲಿ ರಾಣಾ ಅವರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವಾಗಿದೆ. ಕಳೆದ ವರ್ಷ ಆರ್‌ಸಿಬಿ ಎದುರು ಅಜೇಯ 85 ರನ್ ಗಳಿಸಿದ್ದು ಈವರೆಗಿನ ಅತ್ಯಧಿಕ ಗಳಿಕೆ ಆಗಿತ್ತು.
ಮೊದಲ ಓವರಿನಲ್ಲೇ 3 ಬೌಂಡರಿ ಬಾರಿಸುವ ಮೂಲಕ ಕೋಲ್ಕತಾ ಬಿರುಸಿನ ಆರಂಭದ ಮುನ್ಸೂಚನೆ ನೀಡಿತು. ಶುಭಮನ್ ಗಿಲ್ ಮತ್ತು ರಾಣಾ ಚೆನ್ನೈ ಬೌಲರ್‌ಗಳನ್ನು ದಿಟ್ಟ ರೀತಿಯಲ್ಲಿ ನಿಭಾಯಿಸತೊಡಗಿದರು. ಪವರ್ ಪ್ಲೇ ವೇಳೆ ಕೆಕೆಆರ್ ವಿಕೆಟ್ ನಷ್ಟವಿಲ್ಲದೆ 48 ರನ್ ಮಾಡಿತ್ತು. ಆಗ ಆರಂಭಿಕರಿಬ್ಬರೂ 24ರಲ್ಲಿದ್ದರು.
ಗಿಲ್-ರಾಣಾ ಜತೆಯಾಟ 7.2 ಓವರ್ ತನಕ ಸಾಗಿತು. ಈ ಅವಧಿಯಲ್ಲಿ 53 ರನ್ ಒಟ್ಟುಗೂಡಿತು. ಲೆಗ್ ಬ್ರೇಕ್ ಬೌಲರ್ ಕಣ್ì ಶರ್ಮ ಎರಡನೇ ಎಸೆತದಲ್ಲೇ ಗಿಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಚೆನ್ನೈಗೆ ಮೊದಲ ಯಶಸ್ಸು ತಂದಿತ್ತರು. ಗಿಲ್ ಗಳಿಕೆ 17 ಎಸೆತಗಳಿಂದ 26 ರನ್ (4 ಬೌಂಡರಿ).
ವನ್‌ಡೌನ್‌ನಲ್ಲಿ ಬಂದ ಸುನೀಲ್ ನಾರಾಯಣ್ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಿಚೆಲ್ ಸ್ಯಾಂಟ್ನರ್ ಅವರ ಮುಂದಿನ ಓವರಿನಲ್ಲೇ ದೊಡ್ಡ ಹೊಡೆತ ಬಾರಿಸಲು ಹೋಗಿ ಡೀಪ್ ಮಿಡ್ ವಿಕೆಟ್‌ನಲ್ಲಿದ್ದ ಜಡೇಜಾಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಾರಾಯಣ್ 7 ಎಸೆತಗಳಿಂದ 7 ರನ್ ಮಾಡಿದ್ದರು. ಇದರಲ್ಲೊಂದು ಸಿಕ್ಸರ್ ಸೇರಿತ್ತು. ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ರಿಂಕು ಸಿಂಗ್ 11 ರನ್ನಿಗೆ ಆಟ ಮುಗಿಸಿದರು. ಈ ವಿಕೆಟ್ ಜಡೇಜ ಬುಟ್ಟಿಗೆ ಬಿತ್ತು. ಅರ್ಧ ಹಾದಿ ಕ್ರಮಿಸುವ ವೇಳೆ ಕೆಕೆಆರ್ ಏಳರ ಸರಾಸರಿಯಲ್ಲಿ ಭರ್ತಿ 70 ರನ್ ಮಾಡಿತ್ತು. ಮುಂದಿನ 5 ಓವರ್‌ಗಳಲ್ಲಿ ರನ್‌ರೇಟ್ ಕುಸಿಯಿತು. 15 ಓವರ್ ಮುಕ್ತಾಯಕ್ಕೆ 106 ರನ್ ದಾಖಲಾಗಿತ್ತು. 44 ಎಸೆತಗಳಿಂದ ಅರ್ಧ ಶತಕ ಪೂರ್ತಿಗೊಳಿಸಿದ್ದ ರಾಣಾ ಇಲ್ಲಿಂದ ಮುಂದೆ ಬಿರುಸಿನ ಆಟಕ್ಕಿಳಿದರು. ಕಣ್ì ಶರ್ಮ ಅವರಿಗೆ ಹ್ಯಾಟ್ರಿಕ್ ಸಿಕ್ಸರ್ ರುಚಿ ತೋರಿಸಿದರು. 3ನೇ ಸ್ಪೆಲ್ ದಾಳಿಗಿಳಿದ ಎನ್‌ಗಿಡಿ, ರಾಣಾ ಆಟವನ್ನು ಕೊನೆಗೊಳಿಸಿದರು.
ಬಳಿಕ ದಿನೇಶ್ ಕಾರ್ತಿಕ್ ಸಿಡಿಯಲಾರಂಭಿಸಿದರು. 10 ಎಸೆತ ಎದುರಿಸಿ, 3 ಬೌಂಡರಿ ನೆರವಿನಿಂದ 21 ರನ್ ಮಾಡಿ ಅಜೇಯರಾಗಿ ಉಳಿದರು. ಚೆನ್ನೈ ಪರ ಎನ್‌ಗಿಡಿ 2 ವಿಕೆಟ್ ಉರುಳಿಸಿದರು.
ಡು ಪ್ಲೆಸಿಸ್, ತಾಹಿರ್ ಹೊರಕ್ಕೆ
ಚೆನ್ನೈ ದಕ್ಷಿಣ ಆಫ್ರಿಕಾ ಆಟಗಾರರಾದ ಫಾ ಡು ಪ್ಲೆಸಿಸ್ ಮತ್ತು ಇಮ್ರಾನ್ ತಾಹಿರ್ ಅವರನ್ನು ಕೈಬಿಟ್ಟಿತು. ಇವರ ಬದಲು ಶೇನ್ ವಾಟ್ಸನ್ ಮತ್ತು ಹರಿಣಗಳ ನಾಡಿನ ಮತ್ತೋರ್ವ ಕ್ರಿಕೆಟಿಗ ಲುಂಗಿ ಎನ್‌ಗಿಡಿ ಅವರನ್ನು ಹನ್ನೊಂದರ ಬಳಗಕ್ಕೆ ಸೇರಿಸಿಕೊಂಡಿತು.
ಕೋಲ್ಕತಾ ತಂಡದಲ್ಲಿ ಒಂದು ಬದಲಾವಣೆ ಮಾಡಿಕೊಳ್ಳಲಾಯಿತು. ಪ್ರಸಿದ್ಧ್ ಕೃಷ್ಣ ಬದಲು ರಿಂಕು ಸಿಂಗ್ ಬಂದರು. ಇನ್ನೂ ಚೇತರಿಸದ ಗಾಯಾಳು ರಸೆಲ್ ಈ ಪಂದ್ಯದಿಂದಲೂ ದೂರ ಉಳಿದರು.
ಸ್ಕೋರ್ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಶುಭಮನ್ ಗಿಲ್ ಬಿ ಕಣ್ì ಶರ್ಮ 26
ನಿತೀಶ್ ರಾಣಾ ಸಿ ಕರನ್ ಬಿ ಎನ್‌ಗಿಡಿ 87
ನಾರಾಯಣ್ ಸಿ ಜಡೇಜ ಬಿ ಸ್ಯಾಂಟ್ನರ್ 7
ರಿಂಕು ಸಿಂಗ್ ಸಿ ರಾಯುಡು ಬಿ ಜಡೇಜ 11
ಇಯಾನ್ ಮಾರ್ಗನ್ ಸಿ ಗಾಯಕ್ವಾಡ್ ಬಿ ಎನ್‌ಗಿಡಿ 15
ದಿನೇಶ್ ಕಾರ್ತಿಕ್ ಔಟಾಗದೆ 21
ರಾಹುಲ್ ತ್ರಿಪಾಠಿ ಔಟಾಗದೆ 3
ಇತರ 2
ಒಟ್ಟು (20 ಓವರ್‌ಗಳಲ್ಲಿ 5ವಿಕೆಟಿಗೆ) 172
ವಿಕೆಟ್ ಪತನ: 1-53, 2-60, 3-93, 4-137, 5-167.
ಬೌಲಿಂಗ್:
ದೀಪಕ್ ಚಹರ್ 3-0-31-0
ಸ್ಯಾಮ್ ಕರನ್ 3-0-21-0
ಲುಂಗಿ ಎನ್‌ಗಿಡಿ 4-0-34-2
ಮಿಚೆಲ್ ಸ್ಯಾಂಟ್ನರ್ 3-0-30-1
ರವೀಂದ್ರ ಜಡೇಜ 3-0-20-1
ಕಣ್ì ಶರ್ಮ 4-0-35-1
ಚೆನ್ನೈ ಸೂಪರ್ ಕಿಂಗ್ಸ್
ಶೇನ್ ವಾಟ್ಸನ್ ಸಿ ರಿಂಕು ಬಿ ಚಕ್ರವರ್ತಿ 14
ಗಾಯಕ್ವಾಡ್ ಬಿ ಕಮಿನ್ಸ್ 72
ಅಂಬಾಟಿ ರಾಯುಡು ಸಿ ಸುನೀಲ್ ಬಿ ಕಮಿನ್ಸ್ 38
ಎಂ. ಎಸ್. ಧೋನಿ ಬಿ ಚಕ್ರವರ್ತಿ 1
ಸ್ಯಾಮ್ ಕರನ್ ಔಟಾಗದೆ 13
ಜಡೇಜ ಔಟಾಗದೆ 31
ಇತರ 9
ಒಟ್ಟು(20 ಓವರ್‌ಗಳಲ್ಲಿ 4 ವಿಕೆಟಿಗೆ) 178
ವಿಕೆಟ್ ಪತನ: 1-50, 2-118, 3-121, 4-140.
ಬೌಲಿಂಗ್:
ಪ್ಯಾಟ್ ಕಮಿನ್ಸ್ 4-0-31-2
ಕಮಲೇಶ್ ನಾಗರ್‌ಕೋಟಿ 3-0-34-0
ಸುನೀಲ್ ನಾರಾಯಣ್ 4-0-23-0
ಲಾಕಿ ಫರ್ಗ್ಯುಸನ್ 4-0-54-0
ವರುಣ್ ಚಕ್ರವರ್ತಿ 4-0-20-2
ನಿತೀಶ್ ರಾಣಾ 1-0-16-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.