PM Modi ಭೇಟಿ ಮಾಡಿದ ಚೆಸ್ ಗ್ರ್ಯಾನ್ ಮಾಸ್ಟರ್ ಪ್ರಜ್ಞಾನಂದ;ಬಲುದೊಡ್ಡ ಗೌರವ
Team Udayavani, Aug 31, 2023, 11:25 PM IST
ಹೊಸದಿಲ್ಲಿ: ಚೆಸ್ ವಿಶ್ವಕಪ್‌ನಲ್ಲಿ ಮ್ಯಾಗ್ನಸ್ ಕಾರ್ಲ್ಸನ್ ಅವರೆದುರು ಅಮೋಘವಾಗಿ ಹೋರಾಡಿ ಸ್ವಲ್ಪದರಲ್ಲಿ ಚಾಂಪಿಯನ್ ಪಟ್ಟ ಕಳೆದುಕೊಂಡು ರನ್ನರ್ ಅಪ್ ಸ್ಥಾನ ಪಡೆದ ಭಾರತದ ಚೆಸ್ ಗ್ರ್ಯಾನ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಗುರುಆವರ ಪ್ರಧಾನಮಂತಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿರುವುದು ನನ್ನ ಪಾಲಿನ ಬಲುದೊಡ್ಡ ಗೌರವ. ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಗೆ ನನ್ನ ಕೃತಜ್ಞತೆಗಳು ಎಂದವರು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿ ಟ್ವೀಟ್ ಮಾಡಿರುವ ಮೋದಿ ಅವರು ಇಂದು ಸಂಜೆ 7 ಗಂಟೆಗೆ ವಿಶೇಷ ಅತಿಥಿಗಳು ಇಲ್ಲಿಗೆ ಬಂದಿದ್ದಾರೆ. ನಿಮ್ಮನ್ನು ಭೇಟಿ ಮಾಡಿದ್ದರಿಂದ ರೋಮಾಂಚನವಾಗಿದೆ ಎಂದು ಬರೆದಿದ್ದಾರೆ.
ಹೆತ್ತವರು ಜತೆಗಿದ್ದರು
ಈ ಭೇಟಿ ವೇಳೆ 18ರ ಹರೆಯದ ಪ್ರಜ್ಞಾನಂದ ಅರು ಚೆಸ್ ವಿಶ್ವಕಪ್ ನಲ್ಲಿ ಗೆದ್ದ ಬೆಳ್ಳಿ ಪದಕವನ್ನು ಮೋದಿ ಅವರಿಗೆ ತೋರಿಸಿದರಲ್ಲದೇ ಅವರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ಮೋದಿ ಭೇಟಿ ವೇಳೆ ಪ್ರಜ್ಞಾನಂದ ಅವರ ಹೆತ್ತವರು ಜತೆಗಿದ್ದರು.
Had very special visitors at 7, LKM today.
Delighted to meet you, @rpragchess along with your family.
You personify passion and perseverance. Your example shows how India’s youth can conquer any domain. Proud of you! https://t.co/r40ahCwgph
— Narendra Modi (@narendramodi) August 31, 2023
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.