Chess Olympiad: ಭಾರತದ ಗೆಲುವಿಗೆ ಬ್ರೇಕ್
Team Udayavani, Sep 21, 2024, 9:03 PM IST
ಬುಡಾಪೆಸ್ಟ್ (ಹಂಗೇರಿ): ಇಲ್ಲಿ ನಡೆಯುತ್ತಿರುವ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಸತತ 8 ಗೆಲುವುಗಳ ಓಟಕ್ಕೆ ಉಜ್ಬೇಕಿಸ್ಥಾನ ಬ್ರೇಕ್ ಹಾಕಿದೆ. ಇತ್ತಂಡಗಳ 9ನೇ ಸುತ್ತಿನ ಪಂದ್ಯ 2-2 ಸಮಬಲಗೊಂಡಿದೆ. ಆದರೂ ಭಾರತ 17 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಮೆರಿಕ, ಉಜ್ಬೇಕಿಸ್ಥಾನ ಮತ್ತು ಚೀನ ತಲಾ 15 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿವೆ.
9ನೇ ಸುತ್ತಿನಲ್ಲಿ ವಿದಿತ್ ಗುಜರಾತಿ-ಜಖೋಂಗಿರ್ ವಖೀಡೋವ್ ಪಂದ್ಯ ಡ್ರಾಗೊಂಡಿತು. ಬಳಿಕ ಡಿ. ಗುಕೇಶ್-ನದಿರ್‌ಬೆಕ್ ಅಬ್‌ಸಟರೋವ್ ಪಂದ್ಯ, ಆರ್. ಪ್ರಜ್ಞಾನಂದ-ಜವೊಖೀರ್ ಸಿಂಡರೋವ್ ನಡುವಿನ ಮುಖಾಮುಖೀ, ಅರ್ಜುನ್ ಎರಿಗೇಸಿ- ಶಂಸುದ್ದಿನ್ ನಡುವಿನ ಪಂದ್ಯವೂ ಡ್ರಾದಲ್ಲೇ ಮುಗಿಯಿತು.
ಮಹಿಳಾ ವಿಭಾಗದ 9ನೇ ಸುತ್ತಿನಲ್ಲಿ ಭಾರತ-ಅಮೆರಿಕ ನಡುವಿನ ಪಂದ್ಯ 2-2ರ ಸಮಬಲಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.