Chess Olympiad: ಚೆಸ್ ಸಾಧಕರಿಗೆ ಮೋದಿ ಸಮ್ಮಾನ
Team Udayavani, Sep 25, 2024, 11:16 PM IST
ಹೊಸದಿಲ್ಲಿ: ಬುಡಾಪೆಸ್ಟ್‌ನಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಪುರುಷರ ಹಾಗೂ ವನಿತಾ ತಂಡಗಳ ಸದಸ್ಯರನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಸಮ್ಮಾನಿಸಿದರು. ಭಾರತದ ಐತಿಹಾಸಿಕ ಸಾಧನೆಯನ್ನು ಕೊಂಡಾಡಿದರು.
ಡಿ. ಗುಕೇಶ್, ಅರ್ಜುನ್ ಎರಿಗೇಸಿ, ಆರ್. ಪ್ರಜ್ಞಾನಂದ, ವಿದಿತ್ ಗುಜರಾತಿ, ಪಿ. ಹರಿಕೃಷ್ಣ, ಆರ್. ವೈಶಾಲಿ, ಡಿ. ಹರಿಕಾ, ತಾನಿಯಾ ಸಚ್ದೇವ್, ದಿವ್ಯಾ ದೇಶ್‌ಮುಖ್, ವಂತಿಕಾ ಅಗರ್ವಾಲ್ ಭಾರತದ ವಿಜೇತ ತಂಡದ ಸದಸ್ಯರಾಗಿದ್ದರು.
ಈ ಸಂದರ್ಭದಲ್ಲಿ ವಿಜೇತ ಆಟಗಾರರು ಮೋದಿ ಅವರಿಗೆ ಚೆಸ್ ಬೋರ್ಡ್ ಒಂದನ್ನು ಉಡುಗೊರೆಯಾಗಿ ನೀಡಿದರು. ಬಳಿಕ ಪ್ರಜ್ಞಾನಂದ ಮತ್ತು ಅರ್ಜುನ್ ಅವರು “ಕ್ವಿಕ್’ ಗೇಮ್ ಒಂದನ್ನು ಆಡಿದರು. ಇದನ್ನು ಮೋದಿ ಅವರು ಬಹಳ ಕುತೂಹಲದಿಂದ ವೀಕ್ಷಿಸಿದರು.
3.2 ಕೋಟಿ ರೂ. ಬಹುಮಾನ
ಚೆಸ್ ಒಲಿಂಪಿಯಾಡ್ ಪ್ರಶಸ್ತಿ ವಿಜೇತರಿಗೆ ಎಐಎಫ್ಸಿ ಅಧ್ಯಕ್ಷ ನಿತಿನ್ ನಾರಂಗ್ 3.2 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ.
ಮೋದಿ ಭೇಟಿ ಮಾಡಲು ಭಾಕು ಕೂಟದಿಂದ ಹಿಂದೆ ಸರಿದ ವಿದಿತ್
ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ ಮೊದಲ ಸಲ ಚಿನ್ನದ ಪದಕ ಗೆಲ್ಲಲು ಮಹತ್ತರ ಪಾತ್ರ ವಹಿಸಿದ್ದ ವಿದಿತ್, ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾಕು ತಲುಪಿದ್ದರು. ಆದರೆ ಅಷ್ಟರಲ್ಲಿ, ಪ್ರಧಾನಿ ಮೋದಿ ಅವರು ಚೆಸ್ ಒಲಿಂಪಿಯಾಡ್ ಚಾಂಪಿಯನ್ ಆಟಗಾರರನ್ನು ಸಮ್ಮಾನಿಸುವ ಸುದ್ದಿ ತಿಳಿದ ಕಾರಣ ತವರಿಗೆ ವಾಪಸಾದರು.
“ಗೌರವಾನ್ವಿತ ಪ್ರಧಾನಿಯವರು ನಮ್ಮನ್ನು ಸಮ್ಮಾನಿಸುವ ವಿಷಯ ತಿಳಿಯಿತು. ನಾನು ಈ ಕಾರ್ಯಕ್ರಮದ ಭಾಗವಾಗಲು ಬಯಸಿದ್ದೇನೆ. ಅಲ್ಪಾವಧಿಯಲ್ಲೇ ಅವರು ನಮಗಾಗಿ ಬಿಡುವು ಮಾಡಿಕೊಂಡಿರುವುದು ಸಂತಸ ತಂದಿದೆ’ ಎಂದು ವಿದಿತ್ “ಎಕ್ಸ್’ನಲ್ಲಿ ಹೇಳಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.