![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 15, 2020, 5:07 PM IST
ಲಕ್ನೊ: ಭಾರತದ ಮಾಜಿ ಆರಂಭಕಾರ, ಎರಡು ಬಾರಿಯ ಲೋಕಸಭಾ ಸದಸ್ಯ, ಹಾಲಿ ಉತ್ತರಪ್ರದೇಶ ಸರಕಾರದ ಸಚಿವರಾಗಿರುವ ಚೇತನ್ ಚೌಹಾಣ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಗುರ್ಗಾಂವ್ ಆಸ್ಪತ್ರೆ ಮೂಲಗಳು ಹೇಳಿವೆ.
ಜುಲೈಯಲ್ಲಿ ತಗುಲಿದ ಕೋವಿಡ್-19 ಸೋಂಕಿನಿಂದ 72 ವರ್ಷದ ಚೇತನ್ ಚೌಹಾಣ್ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಈಗ ಕಿಡ್ನಿ ವೈಫಲ್ಯ ಎದುರಾಗಿದ್ದು, ರಕ್ತದೊತ್ತಡದ ಸಮಸ್ಯೆಯೂ ಕಾಡುತ್ತಿದೆ. ಇದರಿಂದ ಅವರಿಗೆ ಜೀವರಕ್ಷಕ ಸಾಧನವನ್ನು ಅಳವಡಿಸಲಾಗಿದೆ ಎಂದು ಗುರ್ಗಾಂವ್‌ನ “ಮೇದಾಂತ ಹಾಸ್ಪಿಟಲ್’ನ ವೈದ್ಯರು ತಿಳಿಸಿದ್ದಾರೆ. ಕೋವಿಡ್ ಪಾಸಿಟಿವ್ ಬಂದಾಗ ಚೌಹಾಣ್ ಅವರನ್ನು ಲಕ್ನೋದ “ಸಂಜಯ್ ಗಾಂಧಿ ಪಿಜಿಐ ಹಾಸ್ಪಿಟಲ್’ಗೆ ದಾಖಲಿಸಲಾಗಿತ್ತು. ಅಲ್ಲಿಂದ ಗುರ್ಗಾಂವ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಪ್ರಸ್ತುತ ಉತ್ತರಪ್ರದೇಶ ಸರಕಾರದಲ್ಲಿ ಚೇತನ್ ಚೌಹಾಣ್ ಸೈನಿಕ ಕಲ್ಯಾಣ, ಗೃಹರಕ್ಷಕ ದಳ, ಸಾರ್ವಜನಿಕ ಸಂಪರ್ಕ ಖಾತೆ ಮತ್ತು ನಾಗರಿಕ ರಕ್ಷಣಾ ಸಚಿವರಾಗಿದ್ದಾರೆ. ಕಳೆದ ವರ್ಷದ ತನಕ ರಾಜ್ಯದ ಕ್ರೀಡಾ ಸಚಿವರಾಗಿ ಕರ್ತವ್ಯ ನಿಭಾಯಿಸಿದ್ದರು.
ಗಾವಸ್ಕರ್ ಜತೆಗಾರ
1969-1978ರ ಅವಧಿಯಲ್ಲಿ 40 ಟೆಸ್ಟ್ ಪಂದ್ಯಗಳನ್ನಾಡಿದ್ದ ಚೇತನ್ ಚೌಹಾಣ್ 31.57ರ ಸರಾಸರಿಯಲ್ಲಿ 2,084 ರನ್ ಗಳಿಸಿದ್ದಾರೆ. ಆದರೆ ಇವರ ಶತಕದ ಕನಸು ಮಾತ್ರ ಈಡೇರಲಿಲ್ಲ. 97 ರನ್ ಸರ್ವಾಧಿಕ ಗಳಿಕೆಯಾಗಿದೆ.
70ರ ದಶಕದಲ್ಲಿ ಸುನೀಲ್ ಗಾವಸ್ಕರ್-ಚೇತನ್ ಚೌಹಾಣ್ ಭಾರತದ ಯಶಸ್ವಿ ಆರಂಭಿಕ ಜೋಡಿಯಾಗಿತ್ತು. ಇಬ್ಬರೂ ಸೇರಿ ಮೊದಲ ವಿಕೆಟಿಗೆ ಮೂರು ಸಾವಿರಕ್ಕೂ ಅಧಿಕ ರನ್ ಪೇರಿಸಿದ್ದರು. ಇದರಲ್ಲಿ 10 ಶತಕದ ಜತೆಯಾಟಗಳು ಸೇರಿವೆ. 7 ಏಕದಿನ ಪಂದ್ಯಗಳನ್ನೂ ಆಡಿರುವ ಚೌಹಾಣ್, 153 ರನ್ ಗಳಿಸಿದ್ದಾರೆ.
ಮಹಾರಾಷ್ಟ್ರ ಮತ್ತು ದಿಲ್ಲಿ ಪರ ರಣಜಿ ಟ್ರೋಫಿ ಪಂದ್ಯಗಳನ್ನಾಡಿದ ಚೇತನ್ ಚೌಹಾಣ್ 1981ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.