ಈ ಆಟಗಾರ ಟೀಂ ಇಂಡಿಯಾದಲ್ಲಿ ‘ಅದ್ಭುತ’ ಸೃಷ್ಟಿಸಲಿದ್ದಾನೆ: ಚೇತನ್ ಶರ್ಮಾ
Team Udayavani, Jan 1, 2022, 12:08 PM IST
ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನಾಯಕ ರೋಹಿತ್ ಶರ್ಮಾ ಬದಲಿಗೆ ಕೆ.ಎಲ್.ರಾಹುಲ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ಘೋಷಿಸಲಾಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ಉಪನಾಯಕರಾಗಿದ್ದಾರೆ.
ಸರಣಿಯ ಮೂರು ಪಂದ್ಯಗಳ ಈ ಸರಣಿಗಾಗಿ 18 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಯಿತು. ವೇಗಿ ಮೊಹಮ್ಮದ್ ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅನ್‌ಫಿಟ್ ಆಗಿರುವ ರವೀಂದ್ರ ಜಡೇಜ ಮತ್ತು ಅಕ್ಷರ್ ಪಟೇಲ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ. ಓಪನರ್ ಋತುರಾಜ್ ಗಾಯಕ್ವಾಡ್ ಮತ್ತು ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಈ ತಂಡದಲ್ಲಿದ್ದು, ಮೊದಲ ಸಲ ವಿದೇಶ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಇವರಿಬ್ಬರೂ 2021ರ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ್ದರು. ಗಾಯಕ್ವಾಡ್ 5 ಪಂದ್ಯಗಳಲ್ಲಿ 4 ಶತಕಗಳ ನೆರವಿನಿಂದ 603 ರನ್ ಪೇರಿಸಿದ್ದರು.
ಇದನ್ನೂ ಓದಿ:ಟಿ20 ನಾಯಕತ್ವವನ್ನು ತೊರೆಯದಂತೆ ವಿರಾಟ್ ಗೆ ಮನವಿ ಮಾಡಿದ್ದೆ: ಆಯ್ಕೆ ಸಮಿತಿ ಮುಖ್ಯಸ್ಥ
ಋತುರಾಜ್ ಗಾಯಕ್ವಾಡ್ ಆಯ್ಕೆಯ ಬಗ್ಗೆ ಮಾತನಾಡಿದ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ, “ ಆತನಿಗೆ ಸರಿಯಾದ ಸಮಯದಲ್ಲಿ ಅವಕಾಶ ಸಿಕ್ಕಿದೆ. ಆತ ಟಿ20 ತಂಡದಲ್ಲಿದ್ದ. ಆತನಿಗೆ ಯಾವ ಜಾಗದಲ್ಲಿ ಸ್ಥಾನ ಸಿಕ್ಕಿದರೂ ಭಾರತ ತಂಡದಲ್ಲಿ ಅದ್ಭುತವನ್ನೇ ಸೃಷ್ಟಿಸುತ್ತಾನೆ ಎಂಬ ನಂಬಿಕೆ ಆಯ್ಕೆ ಸಮಿತಿಗೆ ಇದೆ” ಎಂದರು.
ನಾವು ಗಾಯಕ್ವಾಡ್ ರನ್ನು ಆಯ್ಕೆ ಮಾಡಿದ್ದೇವೆ. ಇನ್ನು ಆತನನ್ನು ಆಡಿಸಿವುದು ಟೀಂ ಮ್ಯಾನೇಜ್ ಮೆಂಟ್ ಕೆಲಸ. ತಂಡದ ಸಮತೋಲನಕ್ಕೆ ಸರಿಯಾಗಿ ಆತನನ್ನು ಯಾವ ಜಾಗದಲ್ಲಿ ಆಡಿಸಬಹುದು ಎಂದು ಅವರು ನೋಡಬೇಕು” ಎಂದು ಚೇತನ್ ಶರ್ಮಾ ಹೇಳಿದರು.
ಭಾರತ ತಂಡ: ಕೆ.ಎಲ್.ರಾಹುಲ್ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್, ಇಶಾನ್ ಕಿಶನ್, ಯಜುವೇಂದ್ರ ಚಹಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ದೀಪಕ್ ಚಹರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.