China Master Badminton: ಸಾತ್ವಿಕ್-ಚಿರಾಗ್ ಜೋಡಿ ಮರಳಿ ಕಣಕ್ಕೆ
Team Udayavani, Nov 19, 2024, 12:31 AM IST
ಶೆಂಝೆನ್ (ಚೀನ): ಪ್ಯಾರಿಸ್ ಒಲಿಂಪಿಕ್ಸ್ ವೈಫಲ್ಯದ ಬಳಿಕ ಸುದೀರ್ಘ ವಿಶ್ರಾಂತಿಯಲ್ಲಿದ್ದ ಭಾರತದ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮಂಗಳವಾರ ಆರಂಭವಾಗಲಿರುವ “ಚೀನ ಮಾಸ್ಟರ್ ಸೂಪರ್-750′ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಮರಳಿ ಕಣಕ್ಕಿಳಿಯಲಿದ್ದಾರೆ.
ವಿಶ್ವದ ಮಾಜಿ ನಂ.1 ಜೋಡಿಯಾಗಿರುವ ಚಿರಾಗ್-ಸಾತ್ವಿಕ್ ಕಳೆದ ಆರ್ಕ್‌ಟಿಕ್ ಓಪನ್, ಡೆನ್ಮಾರ್ಕ್ ಓಪನ್ ಮತ್ತು ಚೀನ ಓಪನ್ ಪಂದ್ಯಾವಳಿಯಲ್ಲಿ ಆಡಿರಲಿಲ್ಲ. ಸಾತ್ವಿಕ್ ಅವರನ್ನು ಕಾಡಿದ ಭುಜದ ನೋವೇ ಇದಕ್ಕೆ ಕಾರಣ. ಇದೀಗ ಸಾತ್ವಿಕ್ ಚೇತರಿಸಿಕೊಂಡಿದ್ದಾರೆ. ಹೀಗಾಗಿ ಚೀನದಲ್ಲಿ ನೂತನ ಆರಂಭ ಕಂಡುಕೊಳ್ಳುವ ಗುರಿ ಹೊಂದಿದ್ದಾರೆ.
ಆದರೆ ಸಾತ್ವಿಕ್-ಚಿರಾಗ್ ಸದ್ಯ ಯಾವುದೇ ತರಬೇತುದಾ ರರನ್ನು ಹೊಂದಿಲ್ಲ. ಕೋಚ್ ಆಗಿದ್ದ ಮಥಾಯಿಸ್ ಬೋ ಕಳೆದ ಆಗಸ್ಟ್‌ನಲ್ಲಿ ಅವಧಿ ಪೂರೈಸಿದ್ದರು. ಕಳೆದ ಸಲ ರನ್ನರ್ ಅಪ್ ಆಗಿದ್ದ ಭಾರತೀಯ ಜೋಡಿ ಈ ಬಾರಿ ಆರಂಭಿಕ ಸುತ್ತಿನಲ್ಲಿ ಚೈನೀಸ್ ತೈಪೆಯ ಯಾಂಗ್ ಪೊ ಹುವಾನ್-ಲೀ ಜೆ ಹುಯಿ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದೆ.
ಸಿಂಧು, ಲಕ್ಷ್ಯ ಮೇಲೆ ನಿರೀಕ್ಷೆ
ಪಿ.ವಿ. ಸಿಂಧು, ಲಕ್ಷ್ಯ ಸೇನ್ ಕೂಡ ಕಣದಲ್ಲಿದ್ದಾರೆ. ಇಬ್ಬರೂ ಇತ್ತೀಚಿನ ಕೂಟಗಳಲ್ಲಿ ಪರದಾಡಿದ್ದರು. ತಮ್ಮ ನೈಜ ಫಾರ್ಮ್ ಕಂಡುಕೊಳ್ಳಲು ಇಬ್ಬರಿಗೂ ಇದು ಮತ್ತೂಂದು ಅವಕಾಶ. ಸಿಂಧು, ಲಕ್ಷ್ಯ ಕೂಡ ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಬರಿಗೈಯಲ್ಲಿ ಮರಳಿದ್ದರು.
ಪ್ಯಾರಿಸ್ ಒಲಿಂಪಿಕ್ಸ್ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿದ್ದ ಲಕ್ಷ್ಯ ಸೇನ್ ಅನಂತರ ಆರ್ಕ್‌ಟಿಕ್ ಓಪನ್ ಸೂಪರ್ 500, ಡೆನ್ಮಾರ್ಕ್ ಓಪನ್ ಮತ್ತು ಕಳೆದ ಕುಮಮೋಟೊ ಮಾಸ್ಟರ್ ಕೂಟದಿಂದಲೂ ಬಹಳ ಬೇಗ ನಿರ್ಗಮಿಸಿದ್ದರು. ಇಲ್ಲಿ ಆವರ ಮೊದಲ ಸುತ್ತಿನ ಎದುರಾಳಿ ಮಲೇಷ್ಯಾದ ಲೀ ಝೀ ಜಿಯ.
ಪ್ಯಾರಿಸ್ ಒಲಿಂಪಿಕ್ಸ್ ವೈಫಲ್ಯದ ಬಳಿಕ ಒಡೆನ್ಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದೇ ಪಿ.ವಿ. ಸಿಂಧು ಅವರ ಉತ್ತಮ ಸಾಧನೆ. ಚೀನದಲ್ಲಿ ಅವರು ಥಾಯ್ಲೆಂಡ್‌ನ ಸುಪನಿದಾ ಕಟೆತಾಂಗ್ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ. ಇವರೆದುರು ಸಿಂಧು 5-4 ಮುನ್ನಡೆ ಹೊಂದಿದ್ದಾರೆ.
ವನಿತಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್, ಮಾಳವಿಕಾ ಬನ್ಸೋಡ್ ಕೂಡ ಸ್ಪರ್ಧಿಸಲಿದ್ದಾರೆ. ವನಿತಾ ಡಬಲ್ಸ್ ನಲ್ಲಿ ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್, ಮಿಶ್ರ ಡಬಲ್ಸ್‌ನಲ್ಲಿ ಬಿ. ಸುಮಿತ್ ರೆಡ್ಡಿ-ಸಿಕ್ಕಿ ರೆಡ್ಡಿ ಅದೃಷ್ಟ ಪರೀಕ್ಷೆಗೆ ಇಳಿಯುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Health Department: ಸರಕಾರಿ ಆಸ್ಪತ್ರೆ, ಕೇಂದ್ರಗಳಲ್ಲಿ ಔಷಧ ಕೊರತೆ ಇಲ್ಲ: ಸಚಿವ ದಿನೇಶ್
Mysuru: ಕೋವಿಡ್ ವೇಳೆ ಔಷಧ ಖರೀದಿಯಲ್ಲಿ ನನ್ನ ಪಾತ್ರವಿಲ್ಲ: ಡಾ.ಸಿ.ಎನ್.ಮಂಜುನಾಥ್
Inquiry Report: ಬಿಜೆಪಿಗೆ ’40 ಪರ್ಸೆಂಟ್’ ಕ್ಲೀನ್‌ಚಿಟ್ ಸಿಕ್ಕಿಲ್ಲ: ಸಚಿವ ಪ್ರಿಯಾಂಕ್
Udupi: ಚಿನ್ನ, ವಜ್ರಾಭರಣ ಕದ್ದು ಹೋಂ ನರ್ಸ್ ಪರಾರಿ!
Leopard Attack: ನೆಲಮಂಗಲ ಸಮೀಪ ಚಿರತೆ ದಾಳಿಗೆ ರೈತ ಮಹಿಳೆ ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.