ಪೌಲಿ ಎದುರು ಜೊಕೋವಿಕ್ ಪೌರುಷ
Team Udayavani, Jan 26, 2019, 12:30 AM IST
ಮೆಲ್ಬರ್ನ್: ಫ್ರಾನ್ಸ್‌ನ ಸಾಮಾನ್ಯ ಎದುರಾಳಿ ಲುಕಾಸ್ ಪೌಲಿ ಅವರನ್ನು ಸುಲಭದಲ್ಲಿ ಸೋಲಿಸಿದ ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಆಸ್ಟ್ರೇಲಿಯನ್ ಓಪನ್ ಫೈನಲ್‌ಗೆ ಲಗ್ಗೆ ಇರಿಸಿದ್ದಾರೆ. ರವಿವಾರದ ಪ್ರಶಸ್ತಿ ಕಾಳಗದಲ್ಲಿ ಅವರಿಗೆ ರಫೆಲ್ ನಡಾಲ್ ಎದುರಾಗಲಿದ್ದಾರೆ.
ಶುಕ್ರವಾರದ ಸೆಮಿಫೈನಲ್ ಪಂದ್ಯದಲ್ಲಿ ಜೊಕೋವಿಕ್ 6-0, 6-2, 6-2 ಅಂತರದಿಂದ ಲುಕಾಸ್ ಪೌಲಿ ಆಟವನ್ನು ಮುಗಿಸಿದರು. ಒಂದು ಗಂಟೆ, 23 ನಿಮಿಷಗಳಲ್ಲಿ ಈ ಸ್ಪರ್ಧೆ ಮುಗಿದು ಹೋಯಿತು. ಪೌಲಿ ಯಾವ ಹಂತದಲ್ಲೂ ಜೊಕೋಗೆ ಅಪಾಯಕಾರಿಯಾಗಿ ಗೋಚರಿಸಲಿಲ್ಲ. ಹಾಗೆಯೇ 2010ರ ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಬಳಿಕ ಜೊಕೋವಿಕ್ ಯಾವುದೇ ಗ್ರ್ಯಾನ್‌ಸ್ಲಾಮ್‌ನಲ್ಲಿ ಫ್ರಾನ್ಸ್ ಆಟಗಾರನೆದುರು ಸೋಲದ ಅಜೇಯ ದಾಖಲೆಯನ್ನೂ ಕಾಯ್ದುಕೊಂಡರು. ಅಂದು ಸೋಂಗ ವಿರುದ್ಧ ಸೋಲನುಭವಿಸಿದ್ದರು.
ಇದು ಜೊಕೋವಿಕ್ ಕಾಣುತ್ತಿರುವ 7ನೇ ಆಸ್ಟ್ರೇಲಿಯನ್ ಓಪನ್ ಫೈನಲ್. ಹಿಂದಿನ ಆರೂ ಫೈನಲ್‌ಗಳಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದ ಈ ಸರ್ಬಿಯನ್ ಟೆನಿಸಿಗ, ಮೆಲ್ಬರ್ನ್ ಪಾರ್ಕ್‌ನಲ್ಲಿ “7-0 ಪಫೆìಕ್ಟ್ ರೆಕಾರ್ಡ್’ ಸ್ಥಾಪಿಸಲು ಹೊರಟಿದ್ದಾರೆ. ಇದನ್ನು ತಪ್ಪಿಸಲು 2009ರ ಚಾಂಪಿಯನ್ ನಡಾಲ್‌ಗೆ ಸಾಧ್ಯವೇ ಎಂಬುದೊಂದು ಕುತೂಹಲ.
2012ರ ಆ ಫೈನಲ್…
ನೊವಾಕ್ ಜೊಕೋವಿಕ್-ರಫೆಲ್ ನಡಾಲ್ ಈವರೆಗೆ ಒಮ್ಮೆ ಮಾತ್ರ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಪರಸ್ಪರ ಎದುರಾಗಿದ್ದಾರೆ. ಅದು 2012ರ ಮ್ಯಾರಥಾನ್ ಸ್ಪರ್ಧೆ. 5 ಗಂಟೆ, 53 ನಿಮಿಷಗಳ ಕಾಲ ಸಾಗಿದ ಇವರಿಬ್ಬರ ನಡುವಿನ ಪಂದ್ಯ ಗ್ರ್ಯಾನ್‌ಸ್ಲಾಮ್ ಇತಿಹಾಸದ ಸುದೀರ್ಘ ಫೈನಲ್ ಆಗಿ ದಾಖಲಾದುದ್ದನ್ನು ಮರೆಯುವಂತಿಲ್ಲ. ರವಿವಾರದ ಮುಖಾಮುಖೀಯೂ ಇಷ್ಟೇ ಜೋಶ್‌ನಿಂದ ಕೂಡಿರಬಹುದಾದ ಎಲ್ಲ ಸಾಧ್ಯತೆ ಇದೆ.
ಸಮಂತಾ-ಶುಯಿ ಡಬಲ್ಸ್ ಚಾಂಪಿಯನ್
ಶ್ರೇಯಾಂಕ ರಹಿತ ಜೋಡಿ ಆಸ್ಟ್ರೇಲಿಯದ ಸಮಂತಾ ಸ್ಟೋಸರ್- ಚೀನದ ಝಾಂಗ್ ಶುಯಿ “ಆಸ್ಟ್ರೇಲಿಯನ್ ಓಪನ್’ ಕೂಟದ ವನಿತಾ ಡಬಲ್ಸ್ ಪ್ರಶಸ್ತಿ ಜಯಿಸಿದೆ. ಶುಕ್ರವಾರ ನಡೆದ ಫೈನಲ್‌ನಲ್ಲಿ ಸಮಂತಾ-ಝಾಂಗ್ ಜೋಡಿ ಹಾಲಿ ಚಾಂಪಿಯನ್ ಖ್ಯಾತಿಯ ಟೈಮಿಯಾ ಬಬೋಸ್ (ಹಂಗೇರಿ)-ಕ್ರಿಸ್ಟಿನಾ ಲಡೆನೊವಿಕ್ (ಫ್ರಾನ್ಸ್) ವಿರುದ್ಧ 6-3, 6-4 ಅಂತರದ ಜಯ ದಾಖಲಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.