ಚೀನ ಓಪನ್: ಸಿಂಧು ಕ್ವಾರ್ಟರ್‌ಫೈನಲಿಗೆ
Team Udayavani, Nov 17, 2017, 6:55 AM IST
ಫುಝೋವು (ಚೀನ): ದ್ವಿತೀಯ ಶ್ರೇಯಾಂಕದ ಪಿವಿ ಸಿಂಧು ಅವರು ಚೀನದ ಹದಿಹರೆಯದ ಹ್ಯಾನ್ ಯುಯಿ ಅವರನ್ನು ನೇರ ಗೇಮ್‌ಗಳಿಂದ ಕೆಡಹಿ ಚೀನ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಕ್ವಾರ್ಟರ್‌ಫೈನಲಿಗೇರಿದರು. ಇದೇ ವೇಳೆ ಸೈನಾ ನೆಹ್ವಾಲ್ ಮತ್ತು ಎಚ್‌ಎಸ್ ಪ್ರಣಯ್ ದ್ವಿತೀಯ ಸುತ್ತಿನಲ್ಲಿ ಸೋತು ಹೊರಬಿದ್ದರು.
ಶಾಂಘಾçಯಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ 17ರ ಹರೆಯದ ಯುಯಿ ಮೊದಲ ಗೇಮ್‌ನಲ್ಲಿ ಪ್ರಬಲ ಹೋರಾಟ ನೀಡಲು ಪ್ರಯತ್ನಿಸಿದರು. ಆದರೆ ವಿಶ್ವದ ಎರಡನೇ ರ್‍ಯಾಂಕಿನ ಸಿಂಧು ಉತ್ತಮವಾಗಿ ಆಡಿ 21-15, 21-13 ಗೇಮ್‌ಗಳಿಂದ ಜಯ ಸಾಧಿಸಿದರು. ಇದೀಗ ಸಿಂಧು ಮಾತ್ರ ಈ ಕೂಟದ ಸ್ಪರ್ಧೆಯಲ್ಲಿ ಉಳಿದ ಭಾರತದ ಏಕೈಕ ಆಟಗಾರ್ತಿಯಾಗಿದ್ದಾರೆ.
ಕಳೆದ ವಾರ ನಡೆದ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಗೆದ್ದಿರುವ ಸೈನಾ ಮತ್ತು ಪ್ರಣಯ್ ದ್ವಿತೀಯ ಸುತ್ತಿನಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದರು. ಪ್ರಣಯ್ ಚೀನದ ಚ್ಯುಕ್ ಯಿಯು ಲೀ ಅವರೆದುರು 19-21, 17-21 ಗೇಮ್‌ಗಳಿಂದ ಶರಣಾದರೆ ಸೈನಾ ವಿಶ್ವದ ನಾಲ್ಕನೇ ರ್‍ಯಾಂಕಿನ ಆಕನೆ ಯಮಗುಚಿ ಕೈಯಲ್ಲಿ 18-21, 11-21 ಗೇಮ್‌ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Asian hockey champions: ದಕ್ಷಿಣ ಕೊರಿಯಾವನ್ನು ಕೆಡವಿದ ಭಾರತ
ATP Rankings; ಸಿನ್ನರ್‌ಗೆ ವರ್ಷಾಂತ್ಯದ ನಂ.1 ರ್‍ಯಾಂಕ್ ಟ್ರೋಫಿ
ICC: ಪಾಕಿಸ್ತಾನದ ಕೈತಪ್ಪಿದ ಚಾಂಪಿಯನ್ಸ್ ಟ್ರೋಫಿ ಆಯೋಜನೆ: ಬದಲಿ ದೇಶದ ಆಯ್ಕೆ
Shami: ಕೊನೆಗೂ ವೃತ್ತಿಪರ ಕ್ರಿಕೆಟ್ ಗೆ ಮರಳಿದ ಮೊಹಮ್ಮದ್ ಶಮಿ
Japan: ಇಂದಿನಿಂದ ಕುಮಮೋಟೊ ಓಪನ್: ಸಿಂಧು, ಲಕ್ಷ್ಯ ಮೇಲೆ ಹೆಚ್ಚಿನ ನಿರೀಕ್ಷೆ
MUST WATCH
ಹೊಸ ಸೇರ್ಪಡೆ
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Gangolli: ಪಿಸ್ತೂಲ್ ತೋರಿಸಿ ಬೆದರಿಕೆ: ಐವರು ಆರೋಪಿಗಳಿಗೆ ಜಾಮೀನು
Manipal: ಮಾಹೆ ವಿವಿ: ಇಂದಿನಿಂದ 16ರವರೆಗೆ ಸಂಶೋಧನಾ ದಿನಾಚರಣೆ: ಡಾ.ಎಚ್.ಎಸ್.ಬಲ್ಲಾಳ್
Udupi: ಹಿರಿಯ ಧರ್ಮಗುರು, ಶಿಕ್ಷಣ ತಜ್ಞ ರೆ.ಡಾ.ಲಾರೆನ್ಸ್ ಸಿ. ಡಿ’ಸೋಜಾ ಇನ್ನಿಲ್ಲ
Brahmavara: ಲಾಕ್‌ಅಪ್ ಡೆತ್ ಪ್ರಕರಣ: ಮರಣೋತ್ತರ ಪರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.